ವೃತ್ತಿಪರ ಕ್ರಿಕೆಟ್‌ಗೆ ವಿದಾಯದ ಬೆಲ್ ಹೊಡೆದ ಇಯಾನ್ ಬೆಲ್

ಲಂಡನ್: ಇಂಗ್ಲೆಂಡ್ ಬ್ಯಾಟ್ಸ್‌ಮನ್ ಇಯಾನ್ ಬೆಲ್ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಇಂಗ್ಲೆಂಡ್‌ನಲ್ಲಿ ಟಿ20 ಬ್ಲಾಸ್ಟ್ ಟೂರ್ನಿ ನಡೆಯುತ್ತಿದ್ದು, ಟೂರ್ನಿ ಮುಗಿಯುತ್ತಲೇ ಬೆಲ್, ಕ್ರಿಕೆಟ್ ನಿವೃತ್ತಿ ಬದುಕಿಗೆ ವಿದಾಯದ ಬೆಲ್ ಒತ್ತಲಿದ್ದಾರೆ. ಟಿ20 ಬ್ಲಾಸ್ಟ್‌ನಲ್ಲಿ ಬೆಲ್ ವಾವ್ರಿಕ್‌ಶೈರ್ ಪರ ಆಡುತ್ತಿದ್ದರು.
38ರ ಹರೆಯದ ಇಯಾನ್ ಬೆಲ್, 2004ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮೂಲಕ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 118 ಟೆಸ್ಟ್ ಪಂದ್ಯಗಳಲ್ಲಿ 7727, 161 ಏಕದಿನ ಪಂದ್ಯಗಳಲ್ಲಿ 5416 ರನ್, 8 ಟಿ20ಐ ಪಂದ್ಯಗಳಲ್ಲಿ 188 ರನ್, 311 ಪ್ರಥಮದರ್ಜೆ ಪಂದ್ಯಗಳಲ್ಲಿ 20300 ರನ್ ದಾಖಲೆ ಬೆಲ್ ಹೆಸರಿನಲ್ಲಿದೆ.
'ಸರಿಯಾದ ಸಮಯ ನಿನಗೆ ಗೊತ್ತಿದೆ ಎಂದು ಬೇರೆಯವರು ಹೇಳುತ್ತಾರಲ್ಲ? ಅದು ನಿಜ. ದುರದೃಷ್ಟವಶಾತ್ ಈಗ ನನ್ನ ಸಮಯ ಬಂದಿದೆ. ಆದರೆ ಕ್ರೀಡೆಯೆಡೆಗಿನ ನನ್ನ ಹಸಿವು ಮತ್ತು ಉತ್ಸಾಹ ಎಂದಿಗೂ ಹಾಗೇ ಇರಲಿದೆ,' ಎಂದು ಬೆಲ್ ನಿವೃತ್ತಿಯ ವೇಳೆ ತಿಳಿಸಿದ್ದಾರೆ.
2015ರಲ್ಲಿ ಬೆಲ್ ಕಡೇಯ ಸಾರಿ ಇಂಗ್ಲೆಂಡ್ ಪರ ಟೆಸ್ಟ್ ಪಂದ್ಯವನ್ನಾಡಿದ್ದರು. ಪಾಕಿಸ್ತಾನ ವಿರುದ್ಧದ ಈ ಪಂದ್ಯ ಶಾರ್ಜಾದಲ್ಲಿ ನಡೆದಿತ್ತು. ಅಂತಾರಾಷ್ಟ್ರೀಯ ಪಂದ್ಯದ ಬಳಿಕ ಬೆಲ್ ಕೌಂಟಿ ಕ್ರಿಕೆಟ್‌ನಲ್ಲಿ ವಾವ್ರಿಕ್‌ಶೈರ್ ಪರ ಆಡುತ್ತಿದ್ದರು. ಟಿ20 ಬ್ಲಾಸ್ಟ್‌ನಲ್ಲಿ ಸೆಂಟ್ರಲ್ ಗ್ರೂಪ್‌ನಲ್ಲಿರುವ ವಾವ್ರಿಕ್‌ಶೈರ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications