ಬಾಬರ್ ಅಜಂ ವಿರಾಟ್ ಕೊಹ್ಲಿಯನ್ನು ಬಹುತೇಕ ಹಿಂದಿಕ್ಕಿದ್ದಾರೆ: ಪಾಕ್ ನಾಯಕನನ್ನು ಹೊಗಳಿದ ಬಗ್ಗೆ ವಿಂಡೀಸ್ ದಿಗ್ಗಜ

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಕಳೆದ ಕೆಲ ತಿಂಗಳುಗಳಿಂದ ಅದ್ಭುತ ಫಾರ್ಮ್‌ನಲ್ಲಿದ್ದು ಸ್ಥಿರ ಪ್ರದರ್ಶನ ನೀಡುತ್ತಾ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಬಾಬರ್ ಅಜಂ ಪಾಕಿಸ್ತಾನ ತಂಡವನ್ನು ಮೂರು ಮಾದರಿಯಲ್ಲಿಯೂ ಮುನ್ನಡೆಸುತ್ತಿದ್ದು ಇತ್ತೀಚೆಗೆ ವಿಂಡೀಸ್ ವಿರುದ್ಧ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ ಸತತ ಮೂರು ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಬಾಬರ್ ಅಜಂ ಅವರ ಈ ಪ್ರದರ್ಶನಕ್ಕೆ ದಿಗ್ಗಜ ಕ್ರಿಕೆಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ದಿಗ್ಗಜ ಆಟಗಾರರೊಂದಿಗೆ ಬಾಬರ್ ಅಜಂ ಅವರನ್ನು ಹೋಲಿಕೆ ಮಾಡಲಾಗುತ್ತಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಮಾಜಿ ಆಟಗಾರ ಇಯಾನ್ ಬಿಷಪ್ ಕೂಡ ಬಾಬರ್ ಅಜಂ ಬಗ್ಗೆ ಂಆರೀ ಪ್ರಶಂಸೆಯ ಮಾತುಗಳನ್ನಾಡಿದ್ದು ವಿರಾಟ್ ಕೊಹ್ಲಿಯನ್ನು ಬಾಬರ್ ಅಜಂ ಬಹುತೇಕ ಹಿಂದಿಕ್ಕುವ ಹಂತದಲ್ಲಿದ್ದಾರೆ ಎಂದಿದ್ದಾರೆ.

ಶ್ರೇಷ್ಠ ಕ್ರಿಕೆಟಿಗನಾಗುವತ್ತ ಬಾಬರ್ ಎಂದ ಬಿಷಪ್
ಬಾಬರ್ ಅಜಂ ಶ್ರೇಷ್ಠ ಕ್ರಿಕೆಟಿಗನಾಗುವ ಹಾದಿಯಲ್ಲಿದ್ದಾರೆ ಎಂದು ಇಯಾನ್ ಬಿಷಪ್ ಹೇಳಿದ್ದಾರೆ. "ಬಾಬರ್ ಅಜಂ ಶ್ರೇಷ್ಠ ಕ್ರಿಕೆಟಿಗನಾಗುವ ಹಂತದಲ್ಲಿದ್ದಾರೆ. ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಅವರು ಆ ಹಾದಿಯಲ್ಲಿದ್ದಾರೆ. ಕನಿಷ್ಠ ವೈಟ್‌ಬಾಲ್ ಕ್ರಿಕೆಟ್‌ನಲ್ಲಿಯಾದರೂ ಅದನ್ನು ಸಾಧಿಸಲಿದ್ದಾರೆ. ಶ್ರೇಷ್ಠ ಎಂಬ ಪದವನ್ನು ಕ್ಷುಲ್ಲಕವಾಗಿ ನಾನು ಬಳಸುತ್ತಿಲ್ಲ" ಎಂದಿದ್ದಾರೆ. ಆಟಗಾರನನ್ನು ಶ್ರೇಷ್ಠ ಎಂದು ಕರೆಯಲು ದೊಡ್ಡ ಮಟ್ಟದ ಅಂಕಿಅಂಶಗಳನ್ನು ಹೊಂದಬೇಕು. ಆದರೆ ನಾವು ಈಗ ಮಾತನಾಡುತ್ತಿರುವಾಗ ಅವರು 17 ಏಕದಿನ ಶತಕಗಳನ್ನು ಗಳಿಸಿದ್ದು 60ರ ಸನಿಹದಲ್ಲಿ ಅವರ ಸರಾಸರಿಯಿದೆ" ಎಂದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಪ್ರಗತಿಯಲ್ಲಿದ್ದಾರೆ
ಮುಂದುವರಿದು ಮಾತನಾಡಿದ ಇಯಾನ್ ಬಿಷಪ್ ಬಾಬರ್ ಅಜಂ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಉತ್ತಮ ಪ್ರದರ್ಶನ ನಿಡಲು ಪ್ರಗತಿಯಲ್ಲಿದ್ದಾರೆ. ಅವರ ಟೆಸ್ಟ್ ಕ್ರಿಕೆಟ್ ಆರಂಭದಲ್ಲಿಯೇ ಉತ್ತಮ ಅಂಕಿಅಂಶಗಳನ್ನು ನೋಡದಿರುವುದಕ್ಕೆ ಅಚ್ಚರಿಯಾಗುತ್ತಿದೆ. ಆದರೆ ಈಗ ಅವರು ಅದರ ಹಾದಿಯಲ್ಲಿದ್ದಾರೆ. ತಾಂತ್ರಿಕವಾಗಿ ಆತ ಅದ್ಭುತವಾಗಿದ್ದಾರೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಆತ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಅತ್ಯುತ್ತಮ ಆಟಗಾರನಾಗಲಿದ್ದಾರೆ ಎಂಬ ವಿಶ್ವಾಸವಿದೆ" ಎಂದಿದ್ದಾರೆ ಇಯಾನ್ ಬಿಷಪ್.

ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಬಾಬರ್
ವಿಶ್ವ ಕ್ರಿಕೆಟ್‌ನಲ್ಲಿ ಪ್ರಸ್ತುತ ಅತ್ಯುತ್ತಮ ಆಟಗಾರರಲ್ಲಿ ಬಾಬರ್ ಅಜಂ ಕೂಡ ಒಬ್ಬರು ಎನಿಸಿಕೊಂಡಿದ್ದಾರೆ. ಏಕದಿನ ಮಾದರಿಯಲ್ಲಿ ಬಾಬರ್ ಸರಾಸರಿ ಬಹುತೇಕ 60ರ ಸನಿಹದಲ್ಲಿದೆ. 87 ಇನ್ನಿಂಗ್ಸ್‌ಗಳನ್ನು ಆಡಿರುವ ಬಾಬರ್ ಅಜಂ 17 ಶತಕ ಹಾಗೂ 19 ಅರ್ಧ ಶತಕವನ್ನು ಗಳಿಸಿದ್ದಾರೆ. 2022ರಲ್ಲಿ 457 ರನ್‌ಗಳನ್ನು ಗಳಿಸಿರುವ ಬಾಬರ್ ಅಜಂ ಅವರ ಸರಾಸರಿ 100ರ ಸನಿಹದಲ್ಲಿದೆ. ಇದರಲ್ಲಿ ಕಳೆದ ಆರು ಪಂದ್ಯಗಳಲ್ಲಿ ಅವರು ಮೂರು ಶತಕಗಳನ್ನು ಕೂಡ ಗಳಿಸಿದ್ದಾರೆ. ತನ್ನಿಂದ ಇಂಥಾದ್ದೇ ಪ್ರದರ್ಶನ ಬಂದರೆ ಉಳಿದ ಆಟಗಾರರು ಕೂಡ ತನ್ನನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂಬುದು ಬಾಬರ್ ಅಜಂ ಅಭಿಪ್ರಾಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications