ಎಲ್‌ಬಿಡಬ್ಲ್ಯೂನಲ್ಲಿಮಹತ್ವದದ ಬದಲಾವಣೆಗೆ ಇಯಾನ್ ಚಾಪೆಲ್ ಸಲಹೆ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಕ್ರಿಕೆಟ್‌ನಲ್ಲಿನ ಬದಲಾವಣೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಖಾನಗಿ ಸುದ್ಧಿ ಸಂಸ್ಥೆಗೆ ಬರೆದಿರುವ ಲೇಖನದಲ್ಲಿ ಈ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ಇಯಾನ್ ಚಾಪೆಲ್ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಎಲ್‌ಬಿಡಬ್ಲ್ಯೂ ವಿವಚಾರದಲ್ಲಿ ಮಹತ್ವದ ಬದಲಾವಣೆಯ ಅಗತ್ಯವಿದೆಯೆಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಬೌಲರ್‌ಗಳು ಚೆಂಡಿನ ಕ್ರಿಕೆಟ್‌ನಲ್ಲಿ ಚೆಂಡಿನ ಮೇಲೆ ಹೊಳಪು ಹೆಚ್ಚಿಸಲು ಎಂಜಲಿನ ಉಪಯೋಗ ಮಾಡುವ ಬದಲಿಗೆ ಕೃತಕ ವಸ್ತುಗಳ ಮೂಲಕ ಹೊಳಪು ಹೆಚ್ಚಿಸಲು ಅನುಮತಿ ನೀಡುವ ಬಗ್ಗಯೂ ಚಾಪೆಕ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಐಸಿಸಿ ಗಮನ ನೀಡಬೇಕು ಎಂದು ಚಾಪೆಲ್ ಒತ್ತಾಯವನ್ನು ಮಾಡಿದ್ದಾರೆ.
ಇನ್ನು ಎಲ್‌ಬಿಡಬ್ಲ್ಯೂ ವಿಚಾರವಾಗಿ ಇಯಾನ್ ಚಾಪೆಲ್ "ಬ್ಯಾಟನ್ನು ಸ್ಪರ್ಶಿಸದೆ ಯಾವುದೇ ಎಸೆತ ಬ್ಯಾಟ್ಸ್‌ಮನ್‌ನ ಪ್ಯಾಡ್ ತಗುಲಿದ್ದು ಅದು ವಿಕೆಟ್‌ಗೆ ಬೀಳುವ ಸಾಧ್ಯತೆಯಿದ್ದರೆ ಅದನ್ನು ಅಂಪಾಯರ್‌ಗಳು ಗಂಭೀರವಾಗಿ ಪರಿಗಣಿಸಬೇಕು. ಚೆಂಡು ವಿಕೆಟ್‌ನ ನೇರಕ್ಕಿದೆಯೋ ಇಲ್ಲವೋ ಎಲ್ಲಿ ಪಿಚ್ ಬಿದ್ದಿದೆ ಎಂಬುದು ವಿಚಾರವಾಗಬಾರದು. ವಿಕೆಟ್‌ಗೆ ಬೀಳುವ ಸಾಧ್ಯತೆಯಿದ್ದರೆ ಅದು ಔಟ್ ಎಂದು ತೀರ್ಮಾನಿಸಬೇಕು ಎಂದು ಚಾಪೆಲ್ ಹೇಳಿದ್ದಾರೆ.
ಈ ಬದಲಾವಣೆ ಮಾಡಿದರೆ ಬ್ಯಾಟ್ಸ್‌ಮನ್‌ಗಳ ಕಡೆಯಿಂದ ಟೀಕೆಗಳು ವ್ಯಕ್ತವಾಗಬಹುದು. ಆದರೆ ನ್ಯಾಯಯುತ ಆಟದ ದೃಷ್ಟಿಯಿಂದ ಇದನ್ನು ಪರಿಗಣಿಸಲೇ ಬೇಕಾಗುತ್ತದೆ ಎಂದು 76 ವರ್ಷದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಹೇಳಿದ್ದಾರೆ. ಎಲ್‌ಬಿಡಬ್ಯ್ಲೂ ವಿಚಾರವಾಗಿ ತನ್ನ ಅಭಿಪ್ರಾಯವನ್ನು ಗಟ್ಟಿಯಾಗಿ ವ್ಯಕ್ತಪಡಿಸಿದ್ದಾರೆ.
ಈ ರೀತಿ ಎಲ್‌ಬಿಡಬ್ಲ್ಯೂ ನಿಯಮದಲ್ಲಿ ಬದಲಾವಣೆಯನ್ನು ತಂದರೆ ಡಿಆರ್‌ಎಸ್ ನಿಯಮದಲ್ಲಿರುವ ಕ್ಷುಲ್ಲಕ ಸವಾಲನ್ನು ಕಡಿಮೆ ಮಾಡುತ್ತದೆ ಎಂದೂ ಹೇಳಿದ್ದಾರೆ. ಅಂಪೈರಿಂಗನ್ನು ಇದು ಸರಳಗೊಳಿಸುತ್ತದೆ ಜೊತೆಗೆ ಇತ್ತೀಚೆಗೆ ತೀವ್ರವಾಗಿ ನಿಧಾನವಾಗಿರುವ ಆಟದ ವೇಗವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications