Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy: ಭಾರತ vs ಪಾಕಿಸ್ತಾನ ಪಂದ್ಯದ ಬಗ್ಗೆ ಹರ್ಭಜನ್ ಸಿಂಗ್ ಹೇಳಿದ್ದೇನು?

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಫೆಬ್ರವರಿ 19 ರಿಂದ ಪ್ರಾರಂಭವಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ತಂಡ ಸಜ್ಜಾಗಿದೆ. ಈ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಭವಿಷ್ಯ ನುಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಹರ್ಭಜನ್ ಸಿಂಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. ಈ ಪಂದ್ಯದಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನದ ಪ್ರದರ್ಶನವು ತವರಿನಲ್ಲಿ ಸಾಕಷ್ಟು ನಿರಾಶಾದಾಯಕವಾಗಿತ್ತು.

ICC 2025 Champions Trophy What did Harbhajan Singh say about the India vs Pakistan match

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಕಾತುರದಿಂದ ಕಾಯಲಾಗುತ್ತಿದೆ.ಆದರೆ ಅದರಲ್ಲಿ ಏನೂ ಇಲ್ಲ. ಭಾರತ ಬಹಳ ಬಲಿಷ್ಠ ತಂಡ, ಆದರೆ ಪಾಕಿಸ್ತಾನ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಸೋತಿದೆ. ಪಾಕಿಸ್ತಾನ ತಂಡವು ತುಂಬಾ ಚದುರಿಹೋಗಿದೆ. ಎರಡೂ ತಂಡಗಳ ಆಟಗಾರರ ಅಂಕಿ-ಅಂಶಗಳನ್ನು ನೋಡಿದರೆ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದು ಭಜ್ಜಿ ತಿಳಿಸಿದ್ದಾರೆ.

ಈಗಾಗಲೇ ಆಡಿರುವ ಪಂದ್ಯಗಳಿಂದ ಅಂಕಿ-ಅಂಶಗಳನ್ನು ಸೃಷ್ಟಿಸಲಾಗಿದೆ. ಭವಿಷ್ಯವನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಭವಿಷ್ಯ ನುಡಿಯುವವನಾಗಿ, ಎರಡೂ ತಂಡಗಳ ನಡುವೆ ಬಹಳಷ್ಟು ವ್ಯತ್ಯಾಸವಿದೆ ಅಂದುಕೊಳ್ಳುತ್ತೇನೆ. ಭಾರತ ತಂಡ ಅದ್ಭುತವಾಗಿ ಕಾಣುತ್ತಿದ್ದರೆ, ಪಾಕಿಸ್ತಾನ ಅನನುಭವಿ ತಂಡದಂತೆ ಕಾಣುತ್ತಿದೆ. ಅವರ ಬಳಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಮಾತ್ರ ಇದ್ದಾರೆ. ಬೌಲಿಂಗ್‌ನಲ್ಲೂ ಅವರು ಉತ್ತಮ ಫಾರ್ಮ್‌ನಲ್ಲಿಲ್ಲ. ಪಾಕಿಸ್ತಾನ ತಂಡದ ಪ್ರಮುಖ ಬ್ಯಾಟರ್ ಬಾಬರ್ ಭಾರತದ ವಿರುದ್ಧ ಸರಾಸರಿ 31 ರನ್ ಗಳಿಸಿದರೆ, ರಿಜ್ವಾನ್ ಭಾರತದ ವಿರುದ್ಧ ಸರಾಸರಿ 25 ರನ್ ಗಳಿಸಿದ್ದಾರೆ. ಏಕೈಕ ಆರಂಭಿಕ ಆಟಗಾರ ಫಖರ್ ಜಮಾನ್, ಭಾರತದ ವಿರುದ್ಧ ಸರಾಸರಿ 46 ರನ್ ಗಳಿಸಿದ್ದಾರೆ ಎಂದು ಭಾರತ ಎದುರು ಪಾಕಿಸ್ತಾನ ಸಮವಲ್ಲ ಎಂಬುದನ್ನು ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಅಕ್ಸರ್ ಪಟೇಲ್ ಮತ್ತು ಕೆಎಲ್ ರಾಹುಲ್ ಉತ್ತಮ ಫಾರ್ಮ್‌ನಲ್ಲಿರುವುದರಿಂದ ಭಾರತ ತುಂಬಾ ಬಲಿಷ್ಠ ತಂಡವಾಗಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಗಳಿಸಿದ್ದರು. ಕೆಎಲ್ ರಾಹುಲ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತದ ಬೌಲಿಂಗ್‌ನಲ್ಲೂ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ಟೀಮ್ ಇಂಡಿಯಾವನ್ನು ಭಜ್ಜಿ ಹೊಗಳಿದ್ದಾರೆ.

Story first published: Tuesday, February 18, 2025, 12:04 [IST]
Other articles published on Feb 18, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+