2023ರ ಐಸಿಸಿ ಏಕದಿನ ವಿಶ್ವಕಪ್ ಬಹುಮಾನ ಮೊತ್ತ ಘೋಷಣೆ; ಚಾಂಪಿಯನ್ ತಂಡಕ್ಕೆ ಸಿಗಲಿದೆ ಭಾರೀ ನಗದು!
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ 13ನೇ ಆವೃತ್ತಿಯು ಅಕ್ಟೋಬರ್ 5ರಿಂದ ಭಾರತದಲ್ಲಿ ಆರಂಭವಾಗಲಿದೆ. ಐಸಿಸಿ ಕ್ರಿಕೆಟ್ ಪಂದ್ಯಾವಳಿ ಆರಂಭಕ್ಕೆ ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಭಾರೀ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.
ಅಕ್ಟೋಬರ್ 5ರಂದು ಅಹಮದಾಬಾದ್‌ನಲ್ಲಿ ಕಳೆದ ವಿಶ್ವಕಪ್‌ನ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳ ನಡುವೆ ರೋಚಕ ಉದ್ಘಾಟನಾ ಪಂದ್ಯ ನಡೆಯಲಿದೆ ಮತ್ತು ಅದೇ ಮೈದಾನದಲ್ಲಿ ನವೆಂಬರ್ 19ರಂದು ಫೈನಲ್ ಪಂದ್ಯದ ಮೂಲಕ ತೆರೆ ಬೀಳಲಿದೆ.

48 ಪಂದ್ಯಗಳ ಟೂರ್ನಿಗೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2023ರ ಏಕದಿನ ವಿಶ್ವಕಪ್ ಬಹುಮಾನ ಮೊತ್ತ ಘೋಷಣೆ ಮಾಡಿದ್ದು, ಒಟ್ಟು 10 ಮಿಲಿಯನ್ ಯುಎಸ್ ಡಾಲರ್ (82.94 ಕೋಟಿ ರೂಪಾಯಿ) ಮೊತ್ತವನ್ನು ಹೊಂದಿದೆ.
10 ತಂಡಗಳ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಫೈನಲ್ ವಿಜೇತರು ಆಕರ್ಷಕ ಬೆಳ್ಳಿಯ ಟ್ರೋಫಿ ಜೊತೆಗೆ 4 ಮಿಲಿಯನ್ ಯುಎಸ್ ಡಾಲರ್ (33.18 ಕೋಟಿ ರೂಪಾಯಿ) ನಗದನ್ನು ಕೊಂಡೊಯ್ಯಲಿದ್ದಾರೆ.
ಇನ್ನು ರನ್ನರ್ಸ್-ಅಪ್ ತಂಡವು 2 ಮಿಲಿಯನ್ ಯುಎಸ್ ಡಾಲರ್ (16.59 ಕೋಟಿ ರೂಪಾಯಿ) ಮೊತ್ತವನ್ನು ಪಡೆಯಲಿದೆ. ಆದರೆ, ಸೆಮಿಫೈನಲ್‌ನಲ್ಲಿ ಸೋತ ತಂಡಗಳು ತಲಾ 800,000 ಯುಎಸ್ ಡಾಲರ್ (6.63 ಕೋಟಿ ರೂಪಾಯಿ) ಪಡೆಯುತ್ತಾರೆ.
ಅತಿ ದೊಡ್ಡ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಗೆದ್ದ ಪ್ರತಿ ಲೀಗ್ ಪಂದ್ಯಕ್ಕೂ ಬಹುಮಾನಗಳು ಸಿಗಲಿವೆ. ರೌಂಡ್-ರಾಬಿನ್ ಮಾದರಿಯಲ್ಲಿ ಎಲ್ಲಾ ಹತ್ತು ತಂಡಗಳು ಪರಸ್ಪರ ಒಮ್ಮೆ ಆಡುತ್ತವೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ.
ಗುಂಪು ಹಂತದಲ್ಲಿ ಪ್ರತಿ ಪಂದ್ಯದ ವಿಜೇತರು 40,000 ಯುಎಸ್ ಡಾಲರ್ (33.17 ಲಕ್ಷ ರೂಪಾಯಿ) ಮತ್ತು ಸೆಮಿಫೈನಲ್‌ಗೆ ಅರ್ಹತೆ ಪಡೆಯದ ಆರು ತಂಡಗಳು 100,000 ಯುಎಸ್ ಡಾಲರ್ (82.84 ಲಕ್ಷ ರೂಪಾಯಿ) ಮೊತ್ತವನ್ನು ಸ್ವೀಕರಿಸಲಿವೆ.
"ಈ ಬಹುಮಾನದ ಮೊತ್ತವು 2025ರಲ್ಲಿ ಮುಂಬರುವ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಪೂರ್ವನಿದರ್ಶನವನ್ನು ಹೊಂದಿಸುತ್ತದೆ. ಜುಲೈ 2023ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಐಸಿಸಿ ಪುರುಷ ಮತ್ತು ಮಹಿಳೆಯರ ಪಂದ್ಯಾವಳಿಗಳಿಗೆ ಸಮಾನ ಮೊತ್ತವನ್ನು ಘೋಷಿಸುವುದಾಗಿದೆ," ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನು ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ತಮ್ಮ ದಶಕದ ಬರವನ್ನು ಕೊನೆಗೊಳಿಸಲು ಭಾರತೀಯ ಕ್ರಿಕೆಟ್ ತಂಡಕ್ಕೆ 2023ರ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ ಉತ್ತಮ ಅವಕಾಶವಾಗಿದೆ. ಭಾರತವು ಕೊನೆಯ ಬಾರಿಗೆ 2013ರಲ್ಲಿ ಐಸಿಸಿ ಟ್ರೋಫಿಯನ್ನು ಗೆದ್ದಿತ್ತು.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications