Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಕದಿನ ಶ್ರೇಯಾಂಕ ಪ್ರಕಟ: ಬೌಲರ್, ಬ್ಯಾಟ್ಸ್ ಮನ್, ತಂಡಗಳ ಪಟ್ಟಿ ಇಂತಿದೆ

ದುಬೈ, ಮೇ 30 : ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಏಕದಿನ ಬೌಲರ್, ಬ್ಯಾಟ್ಸ್ ಮನ್ ಹಾಗೂ ತಂಡಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ.

ಮಂಗಳವಾರ ಪ್ರಕಟಗೊಂಡ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯ ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಯುವ ವೇಗಿ ಕಗಿಸೊ ರಬಾಡ ಇದೇ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ಬ್ಯಾಟ್ಸ್ ಮನ್ ಗಳ ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿವಿಲಿಯರ್ಸ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.[#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]

ಸೋಮವಾರವಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ರಬಾಡ, ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾಕ್ಕೇರಿದ್ದಾರೆ.

ಇನ್ನು ಐಸಿಸಿ ಏಕದಿನ ಬ್ಯಾಟ್ಸ್ ಮನ್‌ ಗಳ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ನಾಯಕ ಎಬಿ ಡಿವಿಲಿಯರ್ಸ್ ಅಗ್ರಸ್ಥಾನದಲ್ಲಿ ಮುಂದುರೆದಿದ್ದಾರೆ. ಆಸೀಸ್ ನ ಡೇವಿಡ್ ವಾರ್ನರ್ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿ ಮುಂದುವರಿದಿದ್ದು ಅಗ್ರ 10 ಬ್ಯಾಟ್ಸ್ ಮನ್‌ಗಳ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ.

ಏಕದಿನ ಶ್ರೇಯಾಂಕದ ಟಾಪ್ 10 ಬ್ಯಾಟ್ಸ್ ಮನ್ ಗಳು

ಏಕದಿನ ಶ್ರೇಯಾಂಕದ ಟಾಪ್ 10 ಬ್ಯಾಟ್ಸ್ ಮನ್ ಗಳು

1. ಎಬಿ ಡಿವಿಲಿಯರ್ಸ್, 2. ಡೇವಿಡ್ ವಾರ್ನರ್, 3. ವಿರಾಟ್ ಕೊಹ್ಲಿ, 4. ಕ್ವಿಂಟಾನ್ ಡಿಕಾಕ್, 5 ಜೋ ರೂಟ್, 6. ಫಾಫ್ ಡ್ಯು ಪ್ಲೆಸಿಸ್, 7. ಬಾಬರ್ ಅಜಂ, 8. ಮಾರ್ಟಿನ್ ಗಪ್ಟಿಲ್, 9. ಕೇನ್ ವಿಲಿಯಮ್ಸನ್, 10. ಹಾಶೀಂ ಆಮ್ಲಾ

ಏಕದಿನ ಶ್ರೇಯಾಂಕದ ಟಾಪ್ 10 ಬೌಲರ್ ಗಳು

ಏಕದಿನ ಶ್ರೇಯಾಂಕದ ಟಾಪ್ 10 ಬೌಲರ್ ಗಳು

1. ಕಗಿಸೋ ರಬಾಡ, 2. ಇಮ್ರಾನ್ ತಾಹಿರ್, 3. ಮಿಚೆಲ್ ಸ್ಟಾರ್ಕ್, 4. ಸುನಿಲ್ ನರೈನ್, 5. ಜೋಸ್ ಹ್ಯಾಜಲ್'ವುಡ್, 6. ಟ್ರೆಂಟ್ ಬೌಲ್ಟ್, 7. ಕ್ರಿಸ್ ವೋಕ್ಸ್, 8. ಮೊಹ್ಮದ್ ನಬೀ, 9. ಶಕೀಬ್ ಅಲ್ ಹಸನ್, 10. ಮಿಚೆಲ್ ಸಾನ್ಟರ್.[ಚಾಂಪಿಯನ್ಸ್ ಟ್ರೋಫಿ : ಸ್ಪರ್ಧಾ ಕಣದಲ್ಲಿರುವ 8 ತಂಡಗಳಿವು]

ಏಕದಿನ ಶ್ರೇಯಾಂಕದ ಟಾಪ್ 5 ತಂಡಗಳು

ಏಕದಿನ ಶ್ರೇಯಾಂಕದ ಟಾಪ್ 5 ತಂಡಗಳು

ನಂ 1. ದಕ್ಷಿಣ ಆಫ್ರಿಕಾ (122), 2. ಆಸ್ಟ್ರೇಲಿಯಾ (118), 3. ಭಾರತ (117), 4. ನ್ಯೂಜಿಲೆಂಡ್ (114) 5. ಇಂಗ್ಲೆಂಡ್ (112).[ಚಾಂಪಿಯನ್ಸ್ ಟ್ರೋಫಿ ಉಪಾಂತ್ಯಕ್ಕೇರಬಲ್ಲ ತಂಡಗಳಿವು]

ಅಗ್ರ 10 ಬ್ಯಾಟ್ಸ್ ಮನ್‌ ಗಳ ಪಟ್ಟಿಯಲ್ಲಿ ಆಫ್ರಿಕಾದ ನಾಲ್ವರು ಆಟಗಾರರು

ಅಗ್ರ 10 ಬ್ಯಾಟ್ಸ್ ಮನ್‌ ಗಳ ಪಟ್ಟಿಯಲ್ಲಿ ಆಫ್ರಿಕಾದ ನಾಲ್ವರು ಆಟಗಾರರು

ಡಿವಿಲಿಯರ್ಸ್ ಜತೆ ಕ್ವಿಂಟನ್ ಡಿ ಕಾಕ್ (4ನೇ ಸ್ಥಾನ), ಫಾಫ್ ಡು ಪ್ಲೆಸಿಸ್ (6ನೇ ಸ್ಥಾನ) ಹಾಗೂ ಹಾಶೀಂ ಆಮ್ಲಾ(10ನೇ ಸ್ಥಾನ) ಪಡೆದಿದ್ದು, ಅಗ್ರ 10 ಬ್ಯಾಟ್ಸ್ ಮನ್‌ ಗಳ ಪಟ್ಟಿಯಲ್ಲಿ ಆಫ್ರಿಕಾದ ನಾಲ್ವರು ಆಟಗಾರರು ಇದ್ದಾರೆ.

ಭಾರತದ ಯಾವೊಬ್ಬ ಬೌಲರ್ ಟಾಪ್ 10ರಲ್ಲಿ ಇಲ್ಲ

ಭಾರತದ ಯಾವೊಬ್ಬ ಬೌಲರ್ ಟಾಪ್ 10ರಲ್ಲಿ ಇಲ್ಲ

ಭಾರತದ ಯಾವೊಬ್ಬ ಬೌಲರ್ ಕೂಡಾ ಟಾಪ್-10 ಶ್ರೇಯಾಂಕದಲ್ಲಿ ಸ್ಥಾನ ಪಡೆಯಲು ಸಫಲವಾಗಿಲ್ಲ. ಅಕ್ಷರ್ ಪಟೇಲ್ 11ನೇ ಸ್ಥಾನ ಪಡೆದರೆ, ಅಮಿತ್ ಮಿಶ್ರಾ 13ನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಅವಳಿ ಸ್ಟಾರ್ ಸ್ಪಿನ್ನರ್ ಗಳಾದ ಅಶ್ವಿನ್ 18ನೇ ಸ್ಥಾನದಲ್ಲಿದ್ದರೆ, ಜಡೇಜಾ 26ನೇ ಸ್ಥಾನದಲ್ಲಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+