Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World Test Championship: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ದಿನಾಂಕ ಘೋಷಣೆ

ICC announced World Test Championship final dates, starts from june 7

ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಬುಧವಾರ ಐಸಿಸಿ ದಿನಾಂಕ ಘೋಷಣೆ ಮಾಡಿದೆ. ಲಂಡನ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಆಯೋಜನೆಯಾಗಲಿದ್ದು ಜೂನ್ 7ರಿಂದ 11ರವರೆಗೆ ಈ ಪಂದ್ಯ ನಡೆಯಲಿದೆ. ಜೂನ್ 12 ಈ ಪಂದ್ಯಕ್ಕೆ ಮೀಸಲು ದಿನವಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್‌ನ ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳು ಫೈನಲ್‌ನಲ್ಲಿ ಸೆಣೆಸಾಡಿದ್ದವು. ಸೌಥಾಂಪ್ಟನ್‌ನಲ್ಲಿ ನಡೆದ ಈ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 8 ವಿಕೆಟ್‌ಗಳ ಅಂತರದಿಂದ ಗೆದ್ದು ಮೊದಲ ಆವೃತ್ತಿಯ ಚಾಂಪಿಯನ್ ಎನಿಸಿಕೊಂಡಿತ್ತು. ಆದರೆ ಈ ಬಾರಿ ಫೈನಲ್‌ಗೇರುವ ಸ್ಪರ್ಧೆಯಿಂದ ಕಿವೀಸ್ ಪಡೆ ಈಗಾಗಲೇ ಹೊರಬಿದ್ದಿದೆ.

ಪ್ರಸ್ತುತ ಆಸ್ಟ್ರೇಲಿಯಾ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದು ಭಾರತ ಎರಡನೇ ಸ್ಥಾನದಲ್ಲಿದೆ. 75.56 ಶೇಕಟಾ ಅಂಕಗಳನ್ನು ಆಸ್ಟ್ರೇಲಿಯಾ ಪಡೆದುಕೊಂಡಿದ್ದರೆ ಎರಡನೇ ಸ್ಥಾನದಲ್ಲಿರುವ ಭಾರತ 58.93 ಶೇಕಡಾ ಅಂಕಗಳಿಸಿದೆ. ಗುರುವಾರದಿಂದ ಆರಂಭವಾಗಲಿರವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೇರುವ ತಂಡಗಳನ್ನು ಖಚಿತಪಡಿಸಲಿದೆ.

ಇನ್ನು ಈ ಹಿನ್ನೆಲೆಯಲ್ಲಿ ಐಸಿಸಿ ಅಧಿಕೃತ ವೆಬ್‌ಸೈಟ್ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ ಪ್ರತಿಕ್ರಿಯೆಯನ್ನು ಪ್ರಕಟಿಸಿದೆ. "ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡುವ ಗುರಿ ಕಳೆದ ಒಂದೆರಡು ವರ್ಷಗಳಿಂದ ನಮಗೆ ದೊಡ್ಡ ಸ್ಪೂರ್ತಿಯನ್ನು ನೀಡಿತ್ತು. ಕಳೆದ ಬಾರಿ ಸಣ್ಣ ಅಂತರದಿಂದ ಈ ಅವಕಾಶವನ್ನು ಕಳೆದುಕೊಂಡಿದ್ದೆವು" ಎಂದಿದ್ದಾರೆ ಪ್ಯಾಟ್ ಕಮ್ಮಿನ್ಸ್.

ಓವಲ್‌ನಂತಹ ತಟಸ್ಥ ಸ್ಥಳದಲ್ಲಿ ಆಡುವುದು ಫೈನಲ್‌ಗೆ ಪ್ರವೇಶಿಸುವ ಎರಡೂ ತಂಡಗಳಿಗೆ ಮತ್ತೊಂದು ವಿಶೇಷ ಅಂಶವಾಗಿದೆ. ಇದು ರೋಮಾಂಚನಕಾರಿಯಾಗಿದ್ದು ಮುಂದಿನ ಕೆಲ ಸಮಯದವರೆಗೆ ಇದುವೇ ನಮ್ಮ ಗುರಿಯಾಗಿದೆ. ಕಳೆದ 12 ತಿಂಗಳಿನಲ್ಲಿ ನಾವು ಬಲಿಷ್ಠ ಪ್ರದರ್ಶನ ನೀಡಿದ ಬಳಿಕ ಭಾರತದಲ್ಲಿ ನಡೆಯುವ ಸರಣಿಯಲ್ಲಿ ಫೈನಲ್‌ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ವಿಶ್ವಾಸವಿದೆ" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆಯನ್ನು ಕೂಡ ಐಸಿಸಿ ಪ್ರಕಟಿಸಿದ್ದು ಫೈನಲ್‌ಗೆ ತಂಡವನ್ನು ಮುನ್ನಡೆಸುವುದು ವಿಶೇಷ ಅನುಭವ ಮತ್ತು ಈ ಶ್ರೇಷ್ಠ ಮುಖಾಮುಖಿಗೆ ತಮ್ಮ ತಂಡದ ಸ್ಥಾನವನ್ನು ಖಚಿತಪಡಿಸಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಫೈನಲ್ ಪಂದ್ಯದಲ್ಲಿ ಭಾರತ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕಿದ್ದರೆ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕನಿಷ್ಠ 2-0 ಅಂತರದಿಂದ ಗೆಲುವು ಸಾಧಿಸಬೇಕಿದೆ.

Story first published: Wednesday, February 8, 2023, 17:41 [IST]
Other articles published on Feb 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+