Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಟೂರ್ನಿಗಳಲ್ಲಿ ಪುರುಷ ಹಾಗೂ ಮಹಿಳೆಯರ ತಂಡಗಳಿಗೆ ಸಮಾನ ನಗದು ಪ್ರಶಸ್ತಿ: ಐಸಿಹಾಸಿಕ ನಿರ್ಧಾರ ಪ್ರಕಟಿಸಿದ ಐಸಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಐಸಿಸಿ ಟೂರ್ನಿಗಳಲ್ಲಿ ಪುರುಷ ಹಾಗೂ ಮಹಿಳಾ ತಂಡಗಳಿಗೆ ಸಮಾನವಾದ ನಗದು ಬಹುಮಾನ ನೀಡುವ ನಿರ್ಧಾರವನ್ನು ಐಸಿಸಿ ಇಂದು ಪ್ರಕಟಿಸಿತು. ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆಯುತ್ತಿರುವ ಐಸಿಸಿಯ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಈ ಐತಿಹಾಸಿಕ ನಿರ್ಧಾರದ ಸಂದರ್ಭದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದು ಎಲ್ಲರಿಗೂ ಕ್ರೀಡೆಯಾಗಿ ಕ್ರಿಕೆಟ್‌ಗೆ ಶಕ್ತಿಯನ್ನು ನೀಡುತ್ತದೆ. ಅಲ್ಲದೆ ಆಟಕ್ಕೆ ಪ್ರತಿಯೊಬ್ಬ ಆಟಗಾರನ ಕೊಡುಗೆಯನ್ನು ಸಂಭ್ರಮಿಸಲು ಮತ್ತು ಗುರುತಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ. 2017 ರಿಂದ ಸಮಾನ ಬಹುಮಾನದ ಹಣವನ್ನು ಸಾಧಿಸುವ ಸ್ಪಷ್ಟ ಗುರಿಯೊಂದಿಗೆ ಐಸಿಸಿ ಮಹಿಳಾ ಈವೆಂಟ್‌ಗಳಲ್ಲಿ ಬಹುಮಾನದ ಹಣವನ್ನು ಹೆಚ್ಚಿಸಿಕೊಂಡೇ ಬರುತ್ತಿದೆ ಎಂಬುದನ್ನು ಅವರು ಉಲ್ಲೇಖಿಸಿದರು.

ICC announces equal prize money for mens and womens: BCCI welcomes decision

ಇನ್ನು ಇದರ ಜೊತೆಯಲ್ಲಿ ಅವರು ಮುಂದಿನ ನಾಲ್ಕು ವರ್ಷಗಳ ವಿತರಣಾ ಮಾದರಿಯ ಒಪ್ಪಂದದ ನಂತರ ICCಯಲ್ಲಿ ಅತಿ ದೊಡ್ಡ ಹೂಡಿಕೆ ಮಾಡುವುದನ್ನು ದೃಢಪಡಿಸಿದೆ. ಪ್ರತಿ ಐಸಿಸಿ ಸದಸ್ಯರು ಗಮನಾರ್ಹ ಹೆಚ್ಚಳದ ಧನಸಹಾಯವನ್ನು ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸಿದೆ.

ಇನ್ನು ಐಸಿಸಿ ಪುರುಷ ಹಾಗೂ ಮಹಿಳಾ ತಂಡಗಳಿಗೆ ಸಮಾನವಾದ ನಗದು ಬಹುಮಾನ ನೀಡುವ ನಿರ್ಧಾರವನ್ನು ಪ್ರಕಟ ಮಾಡಿರುವುದಕ್ಕೆ ಬಿಸಿಸಿಐ ಪ್ರತಿಕ್ರಿಯೆ ನೀಡಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರತಿಕ್ರಿಯೆ ನೀಡಿದ್ದು ಇದೊಂದು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ್ದಾರೆ.

"ನಾವು ಹೊಸ ಯುಗದತ್ತ ಹೆಜ್ಜೆಯಿಡುತ್ತಿದ್ದೇವೆ. ಇದು ಸಮಾನತೆ ಮತ್ತು ಸಬಲೀಕರಣದ ಯುಗ. ಲಿಂಗ ಸಮಾನತೆಯ ಕಡೆಗೆ ಒಂದು ಪ್ರಮುಖ ಹೆಜ್ಜೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಲು ನಾನು ರೋಮಾಂಚನಗೊಂಡಿದ್ದೇನೆ. ಎಲ್ಲಾ ಐಸಿಸಿ ಈವೆಂಟ್‌ಗಳಲ್ಲಿನ ಬಹುಮಾನದ ಹಣವು ಪುರುಷರು ಮತ್ತು ಮಹಿಳೆಯರಿಗೆ ಒಂದೇ ಆಗಿರುತ್ತದೆ. ಒಟ್ಟಿಗೆ ನಾವು ಬೆಳೆಯುತ್ತೇವೆ. ಈ ಮಹತ್ವದ ಪ್ರಯತ್ನವನ್ನು ಸಾಧಿಸಲು ಸಹಾಯ ಮಾಡುವಲ್ಲಿ ಬೆಂಬಲ ನೀಡಿದ ಸಹ ಮಂಡಳಿಯ ಸದಸ್ಯರಿಗೆ ನಾನು ಧನ್ಯವಾದ ಹೇಳುತ್ತೇನೆ" ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.

Story first published: Thursday, July 13, 2023, 22:55 [IST]
Other articles published on Jul 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+