ಸಮಾನತೆಯ ಮಂತ್ರ ಪಠಿಸಿದ ಐಸಿಸಿ: ಪುರುಷರು, ಮಹಿಳೆಯರ T20 ವಿಶ್ವಕಪ್ ವಿಜೇತ ತಂಡಗಳಿಗೆ ಸಮಾನ ಬಹುಮಾನ
ಈ ಶತಮಾನದಲ್ಲಿ ಪುರುಷರಿಗೆ ಸಮನವಾಗಿ ಪೈಪೋಟಿಯನ್ನು ಮಹಿಳೆಯರು ನೀಡುತ್ತಿದ್ದಾರೆ. ಪುರಷರಷ್ಟೆ ಕೆಲಸ ಮಾಡಿದರೂ ಸಂಬಳ ಕಡಿಮೆ ನೀಡಿದರೆ, ಅದನ್ನು ಯಾರೂ ಒಪ್ಪುವುದಿಲ್ಲ. ಐಸಿಸಿ ಸಹ ಈ ಕಾರಣಕ್ಕಾಗಿ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಐಸಿಸಿ ಕ್ರಿಕೆಟ್ ಜಗತ್ತಿನಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಬಗ್ಗೆ ದೊಡ್ಡ ಘೋಷಣೆ ಮಾಡಿದೆ.
ಮುಂದಿನ ತಿಂಗಳು ಯುಎಇನಲ್ಲಿ ಮಹಿಳಾ ಟಿ20 ವಿಶ್ವಕಪ್ ಪ್ರಾರಂಭವಾಗುತ್ತದೆ. ಪುರುಷರು ಹಾಗೂ ಮಹಿಳೆಯರಿಗೆ ಸಮಾನತ ತರುವ ಉದ್ದೇಶದಿದ ಐಸಿಸಿ ದಿಟ್ಟ ನಿರ್ಧಾರ ಕೈಗೊಂಡಿದ್ದು, ಭಾರೀ ಮಹತ್ವ ಪಡೆದಿದೆ. ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಮಹಿಳಾ ತಂಡಕ್ಕೂ, ಪುರುಷರ ತಂಡಕ್ಕೆ ನೀಡಿದಷ್ಟೇ ಬಹುಮಾನ ನೀಡುವುದಾಗಿ ಘೋಷಿಸಲಾಗಿದೆ.

ಬಹುಮಾನ ಮೊತ್ತ 134ರಷ್ಟು ಏರಿಕೆ
ಯುಎಇನಲ್ಲಿ ಟಿ20 ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ತಂಡಕ್ಕೆ ಐಸಿಸಿ ಈಗ 23 ಲಕ್ಷ 40 ಸಾವಿರ ಅಮೆರಿಕನ್ ಡಾಲರ್ ನೀಡಲು ತೀರ್ಮಾನಿಸಿದೆ. ಈ ಬಹುಮಾನ ಮೊತ್ತ ಕಳೆದ ಬಾರಿಗೆ ಹೋಲಿಸಿದರೆ ಶೇ.134ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ವಿಜೇತ ತಂಡಕ್ಕೆ 1 ಮಿಲಿಯನ್ ಯುಎಸ್ ಡಾಲರ್ ಬಹುಮಾನವನ್ನು ನೀಡಲಾಗಿತ್ತು.
ಪುರುಷರ ತಂಡಕ್ಕೆ ಸಿಕ್ಕ ಬಹುಮಾನ ಎಷ್ಟು?
ಈ ವರ್ಷ ಅಮೆರಿಕ, ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಭಾರತ ತಂಡಕ್ಕೆ ಐಸಿಸಿ 23.40 ಲಕ್ಷ ಬಹುಮಾನ ಮೊತ್ತವನ್ನು ನೀಡಿತ್ತು. ಯುಎಇನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್ ಸಹ ಐಸಿಸಿ ಟೂರ್ನಿ ಆಗಿದ್ದು, ಈ ಟೂರ್ನಿಯ ಚಾಂಪಿಯನ್ ತಂಡಕ್ಕೆ ಚಾಂಪಿಯನ್ ಪುರುಷರ ತಂಡ ಪಡೆದಷ್ಟೇ ಬಹುಮಾನ ನೀಡಲಾಗುತ್ತದೆ.
ಐಸಿಸಿ ಸಭೆಯಲ್ಲಿ ಒಪ್ಪಿಗೆ
ಜುಲೈ 2023 ರಲ್ಲಿ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕ್ರಿಕೆಟ್, ವಿಶ್ವಕಪ್‌ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಬಹುಮಾನದ ಮೊತ್ತವನ್ನು ಹೊಂದಿರುವ ಮೊದಲ ಪ್ರಮುಖ ಕ್ರೀಡೆಯಾಗಿದೆ. ಈ ಮೂಲಕ ಐಸಿಸಿ ಪುರುಷರ ಹಾಗೂ ಮಹಿಳೆಯರನ್ನು ಸಮಾನವಾಗಿ ನೋಡುವ ದೃಷ್ಟಿಯನ್ನು ಹೊಂದಿದೆ. ಮಹಿಳೆಯರ ಟಿ20 ವಿಶ್ವಕಪ್ ಅಕ್ಟೋಬರ್ 3 ರಿಂದ ಯುಎಇನಲ್ಲಿ ಆರಂಭವಾಗಲಿದೆ.

ಐಸಿಸಿ ಮಹಿಳಾ T20 ವಿಶ್ವಕಪ್ 2024 ರ ಐತಿಹಾಸಿಕ ಕ್ಷಣಕ್ಕಾಗಿ ವೇದಿಕೆಯನ್ನು ಸಿದ್ಧವಾಗಿದೆ. ಏಕೆಂದರೆ ವಿಶ್ವದ ಅತ್ಯುತ್ತಮ ತಂಡಗಳು ಅಂಗಳ ಪ್ರವೇಶಿಸಲಿದ್ದು, ಜಿದ್ದಾಜಿದ್ದಿನ ಕಾಳಗವನ್ನು ನೋಡಬಹುದಾಗಿದೆ. ಈ ನಿಟ್ಟಿನಲ್ಲಿ ಐಸಿಸಿ ಮುನ್ನಚ್ಚೆರಿಕೆಯ ಕ್ರಮಗಳನ್ನು ಯುಎಇಗೆ ಈಗಾಗಲೇ ತಿಳಿಸಿದೆ. ಗುಂಪು ಪಂದ್ಯಗಳು ಅಕ್ಟೋಬರ್ 15 ರ ಮೊದಲು ಪೂರ್ಣಗೊಳ್ಳಲಿವೆ.
ಫೈನಲ್ ಯಾವಾಗ?
ಅಕ್ಟೋಬರ್ 17 ಮತ್ತು 18 ರಂದು ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಈ ಉಪಾಂತ್ಯ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ತಂಡಗಳು ಅಕ್ಟೋಬರ್ 20 ರಂದು ಮಹಿಳಾ ಟಿ20 ವಿಶ್ವಕಪ್ ಟ್ರೋಫಿಗಾಗಿ ಕಾದಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications