ICC Announcement: ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ತಂಡಕ್ಕೆ ಐಸಿಸಿ ನಗದು ಬಹುಮಾನ ಘೋಷಣೆ
ವಿಶ್ವದ ಟಾಪ್ 8 ತಂಡಗಳು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸ್ಪರ್ಧಿಸಲು ಸಜ್ಜಾಗಿವೆ. ಚಾಂಪಿಯನ್ಸ್ ಟ್ರೋಫಿಯೂ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಈ ಮೆಗಾ ಟೂರ್ನಿ ಆರಂಭವಾಗುವ ಮುನ್ನ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಚಾಂಪಿಯನ್ ತಂಡಕ್ಕೆ ಸಿಗುವ ನಗದು ಬಹುಮಾನವನ್ನು ಘೋಷಿಸಿದೆ. ಈ ಟೂರ್ನಿಯಲ್ಲಿ ಚಾಂಪಿಯನ್ ತಂಡದ ಮೇಲೆ ಮಾತ್ರವಲ್ಲ, ಎಲ್ಲಾ 8 ತಂಡಗಳ ಮೇಲೂ ಹಣದ ಮಳೆ ಸುರಿಯಲಿದೆ.
ಚಾಂಪಿಯನ್ಸ್ ಟ್ರೋಫಿ 2025ರ ಬಹುಮಾನದ ಹಣವನ್ನು ಶೇಕಡಾ 53 ರಷ್ಟು ಹೆಚ್ಚಿಸಲಾಗಿದ್ದು, 2017ರ ನಂತರ ಮೊದಲ ಬಾರಿಗೆ ಆಯೋಜನೆಗೊಂಡಿರುವ ಚಾಂಪಿಯನ್ಸ್ ಟ್ರೋಫಿ 2025ರ ವಿಜೇತ ತಂಡಕ್ಕೆ 22 ಲಕ್ಷದ 40 ಸಾವಿರ ಡಾಲರ್ (ಸುಮಾರು 20 ಕೋಟಿ ರೂಪಾಯಿ) ಸಿಗಲಿದೆ. ಇದು ಐಪಿಎಲ್ 2024ರ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪಡೆದ ಬಹುಮಾನದ ಹಣಕ್ಕಿಂತ ಹೆಚ್ಚಾಗಿದೆ.

ಈ ಟೂರ್ನಿಯ ರನ್ನರ್ ಅಪ್ ತಂಡಕ್ಕೆ 11 ಲಕ್ಷದ 20 ಸಾವಿರ ಡಾಲರ್ (9.72 ಕೋಟಿ ರೂಪಾಯಿ) ಸಿಗಲಿದೆ. ಜೊತೆಗೆ ಸೆಮಿಫೈನಲ್‌ನಲ್ಲಿ ಸೋತ ಎರಡೂ ತಂಡಗಳಿಗೆ ತಲಾ ಸೋತ ತಂಡಗಳಿಗೆ 5 ಲಕ್ಷದ 60 ಸಾವಿರ ಡಾಲರ್ (4.86 ಕೋಟಿ ರೂ.) ನೀಡಲಾಗುತ್ತಿದೆ. ಒಟ್ಟು ಬಹುಮಾನದ ಮೊತ್ತವನ್ನು 60 ಲಕ್ಷ 90 ಸಾವಿರ ಡಾಲರ್‌ಗಳಿಗೆ (ಸುಮಾರು 60 ಕೋಟಿ ರೂಪಾಯಿಗಳು) ಹೆಚ್ಚಿಸಲಾಗಿದೆ. 2017ರ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಬಹುಮಾನದ ಮೊತ್ತವು ಶೇಕಡಾ 53 ರಷ್ಟು ಹೆಚ್ಚಾಗಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರತಿಯೊಂದು ಪಂದ್ಯವೂ ಬಹುಮಾನದ ಹಣದ ದೃಷ್ಟಿಯಿಂದ ಮಹತ್ವದ್ದಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ, ಫೈನಲ್ ಮತ್ತು ಸೆಮಿಫೈನಲ್ ತಲುಪುವ ತಂಡಗಳಿಗೆ ಮಾತ್ರವಲ್ಲದೆ, ಎಲ್ಲಾ 8 ತಂಡಗಳಿಗೂ ಬಹುಮಾನದ ಹಣವನ್ನು ನೀಡಲಾಗುತ್ತದೆ. ಪೈಪೋಟಿಯಲ್ಲಿ 5 ಮತ್ತು 6ನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 3 ಕೋಟಿ ರೂ., 7 ಮತ್ತು 8ನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 1 ಕೋಟಿ 20 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿದೆ. ಅಲ್ಲದೆ, ಗುಂಪು ಹಂತದಲ್ಲಿ ಪ್ರತಿ ಪಂದ್ಯವನ್ನು ಗೆದ್ದ ತಂಡಕ್ಕೆ 29 ಲಕ್ಷ ರೂ.ಗಳನ್ನು ನೀಡಲು ಐಸಿಸಿ ನಿರ್ಧರಿಸಿದೆ.
ಐಸಿಸಿ ಅಧ್ಯಕ್ಷ ಹೇಳಿದ್ದೇನು?
ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಐಸಿಸಿ ಅಧ್ಯಕ್ಷ ಜಯ್ ಶಾ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. 'ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025 ಕ್ರಿಕೆಟ್‌ಗೆ ಒಂದು ಪ್ರಮುಖ ಕ್ಷಣವನ್ನು ಪ್ರತಿನಿಧಿಸುತ್ತದೆ. ಅಲ್ಲಿ ಪ್ರತಿಯೊಂದು ಪಂದ್ಯವೂ ಮುಖ್ಯವಾಗಿದೆ. ಈ ಮಹತ್ವದ ಪ್ರಶಸ್ತಿಯು ಕ್ರೀಡೆಯಲ್ಲಿ ಹೂಡಿಕೆ ಮಾಡುವ ಮತ್ತು ನಮ್ಮ ಕಾರ್ಯಕ್ರಮಗಳ ಜಾಗತಿಕ ಖ್ಯಾತಿಯನ್ನು ಕಾಪಾಡಿಕೊಳ್ಳುವ ಐಸಿಸಿಯ ನಿರಂತರ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications