ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಅಂಪೈರ್, ರೆಫ್ರಿಗಳನ್ನು ಘೋಷಿಸಿದ ಐಸಿಸಿ: ಕನ್ನಡಿಗನಿಗೂ ಸ್ಥಾನ
ಟಿ20 ವಿಶ್ವಕಪ್ ರೋಚಕ ಘಟ್ಟದತ್ತ ಮುಖ ಮಾಡಿದೆ. ಈಗಾಗಲೇ ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿವೆ. ಈ ಬಿಗ್ ಟೂರ್ನಿಗೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹತ್ವದ ಘೋಷಣೆ ಮಾಡಿದೆ. ಐಸಿಸಿ ಸೆಮಿಫೈನಲ್ ಪಂದ್ಯಗಳಿಗೆ ಅಂಪೈರ್‌ಗಳನ್ನು ಘೋಷಿಸಿದೆ. ಅಲ್ಲದೆ ಮ್ಯಾಚ್ ರೆಫರಿಗಳ ಹೆಸರುಗಳನ್ನು ಪ್ರಕಟಿಸಿದೆ. ನಾಕೌಟ್ ಪಂದ್ಯಗಳಿಗೆ ಐಸಿಸಿ ಎಲೈಟ್ ಪ್ಯಾನೆಲ್‌ನ ಅನುಭವಿ ಅಂಪೈರ್‌ಗಳು ಮತ್ತು ರೆಫರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಮೊದಲ ಸೆಮಿಫೈನಲ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಆನ್-ಫೀಲ್ಡ್ ಅಂಪೈರ್‌ಗಳಾಗಿ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಅಲೆಕ್ಸ್ ವಾರ್ಫ್ ಕಾರ್ಯ ನಿರ್ವಹಿಸಲಿದ್ದಾರೆ. ರಿಚರ್ಡ್ ಇಲ್ಲಿಂಗ್‌ವರ್ತ್ ಅವರಿಗೆ ದೊಡ್ಡ ಟೂರ್ನಿಗಳಲ್ಲಿ ಅಂಪೈರಿಂಗ್ ಮಾಡಿದ ಅನುಭವ ಇದೆ. ಇನ್ನು ಮೊದಲ ಸೆಮಿಫೈನಲ್‌ನಲ್ಲಿ ನಿತಿನ್ ಮೆನನ್ ಮೂರನೇ ಅಂಪೈರ್ ಆಗಿದ್ದರೆ, ಜಾವಗಲ್ ಶ್ರೀನಾಥ್ ಮ್ಯಾಚ್ ರೆಫರಿಯಾಗಿರುತ್ತಾರೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ ಸಹ ಅರ್ಹತೆ ಪಡೆದಿದೆ. ಇನ್ನು ಟೀಮ್ ಇಂಡಿಯಾ ಉಪಾಂತ್ಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಾದಾಟ ನಡೆಸಲಿದೆ. ಉಭಯ ತಂಡಗಳು ಸತತ ಮೂರನೇ ಬಾರಿಗೆ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕಾದಾಟ ನಡೆಸಲಿವೆ. ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯಲಿದ್ದು, ಈ ಮಹತ್ವದ ಪಂದ್ಯಕ್ಕಾಗೂ ಅಧಿಕಾರಿಗಳನ್ನು ಐಸಿಸಿ ಪ್ರಕಟಿಸಿದೆ. ಆನ್ ಫೀಲ್ಡ್ ಅಂಪೈರ್ ಆಗಿ ಕ್ರಿಸ್ ಗಫಾನಿ ಮತ್ತು ಅಲ್ಲಾವುದ್ದೀನ್ ಪಾಲೇಕರ್ ಫೀಲ್ಡ್ ಅಂಪೈರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಐಸಿಸಿ ಅನುಭವಿ ಅಧಿಕಾರಿಗಳನ್ನು ನಿಯೋಜಿಸಿದೆ. ಅಭಿಮಾನಿಗಳು ಈಗ ಸೆಮಿಫೈನಲ್ ಪಂದ್ಯಗಳತ್ತ ಗಮನ ಹರಿಸಿದ್ದಾರೆ.
ಸೆಮಿಫೈನಲ್ 2: ಭಾರತ vs. ಇಂಗ್ಲೆಂಡ್, ಮುಂಬೈನ ವಾಂಖೆಡೆ ಮೈದಾನ
ಆನ್-ಫೀಲ್ಡ್ ಅಂಪೈರ್‌ಗಳು: ಕ್ರಿಸ್ ಗಫಾನಿ ಮತ್ತು ಅಲ್ಲಾವುದ್ದೀನ್ ಪಾಲೇಕರ್
ಮೂರನೇ ಅಂಪೈರ್: ಆಡ್ರಿಯನ್ ಹೋಲ್ಡ್‌ಸ್ಟಾಕ್
ನಾಲ್ಕನೇ ಅಂಪೈರ್: ಪಾಲ್ ರೀಫೆಲ್
ಪಂದ್ಯದ ರೆಫರಿ: ಆಂಡಿ ಪೈಕ್ರಾಫ್ಟ್
ಸೆಮಿಫೈನಲ್ ಪಂದ್ಯಗಳು ರೋಮಾಂಚಕ ಸಂಗತಿಯಾಗಿರುತ್ತವೆ.
ಇತಿಹಾಸದ ಕನಸಿನಲ್ಲಿ ಭಾರತ
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳಲ್ಲಿ ಜಯ ಸಾಧಿಸಿದ ತಂಡ ಟಿ20 ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದಿದೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಲಿದೆ. ಭಾರತ ಈ ಬಾರಿ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಹಾಟ್ ಫೆವರಿಟ್ ತಂಡವಾಗಿದೆ. ಐಸಿಸಿ ಟಿ20 ವಿಶ್ವಕಪ್‌ನ್ನು ಇನ್ನು ಯಾವುದೇ ತಂಡ ಸತತ ಎರಡು ಬಾರಿಗೆ ಗೆದ್ದಿಲ್ಲ. ಈ ಸಾಧನೆಯನ್ನು ಮಾಡುವ ಕನಸನ್ನು ಭಾರತ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications