ICC Annual Conference 2024: ಐಸಿಸಿ ವಾರ್ಷಿಕ ಸಮ್ಮೇಳನ ಎಲ್ಲಿ, ಯಾವಾಗ?; ಚರ್ಚಿಸಲಿರುವ ವಿಷಯಗಳೇನು?
ಜುಲೈ 15 ಸೋಮವಾರ, ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಾರ್ಷಿಕ ಸಮ್ಮೇಳನವನ್ನು ಏಷ್ಯಾದಲ್ಲಿ ಆಯೋಜಿಸಲಾಗಿದೆ.
ಇದೇ ತಿಂಗಳ 19 ರಿಂದ 22 ರವರೆಗೆ ಕೊಲಂಬೊದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಾರ್ಷಿಕ ಸಮ್ಮೇಳನವನ್ನು ಆಯೋಜಿಸಲು ಶ್ರೀಲಂಕಾ ಸಜ್ಜಾಗಿದೆ. ಈ ಸಮಯದಲ್ಲಿ ಯಾವ ವಿಷಯಗಳನ್ನು ಚರ್ಚಿಸಲಾಗುವುದು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ವಿಶ್ವದಾದ್ಯಂತ 108 ಐಸಿಸಿ ಸದಸ್ಯ ರಾಷ್ಟ್ರಗಳಿಂದ 220 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಮಹತ್ವದ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಪ್ರತಿನಿಧಿಗಳು ಆಫ್ರಿಕಾ, ಅಮೆರಿಕ, ಏಷ್ಯಾ, ಪೂರ್ವ ಏಷ್ಯಾ ಪೆಸಿಫಿಕ್ ಮತ್ತು ಯುರೋಪ್ ಖಂಡಗಳಿಂದ ಆಗಮಿಸಲಿದ್ದಾರೆ.
ಈ ಸಮ್ಮೇಳನವು ವಿಶ್ವದಾದ್ಯಂತದ ಕ್ರಿಕೆಟ್ ಆಡಳಿತಗಾರರು ಮತ್ತು ಮಧ್ಯಸ್ಥಗಾರರ ಶೃಂಗಸಭೆಯಾಗಿದೆ. ಐಸಿಸಿ ವಾರ್ಷಿಕ ಸಮ್ಮೇಳನವು ಆಟದ ಕಾರ್ಯತಂತ್ರದ ದಿಕ್ಕು, ಆಡಳಿತ ಮತ್ತು ಪ್ರಪಂಚದಾದ್ಯಂತ ಕ್ರಿಕೆಟ್‌ನ ಅಭಿವೃದ್ಧಿಯನ್ನು ಚರ್ಚಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ.
ಸಮ್ಮೇಳನದಲ್ಲಿ ಚರ್ಚಿಸಲಿರುವ ವಿಷಯಗಳು
ಐಸಿಸಿ ವಾರ್ಷಿಕ ಸಮ್ಮೇಳನದ ವಿಷಯವು 'ಒಲಂಪಿಕ್ ಅವಕಾಶವನ್ನು ವಶಪಡಿಸಿಕೊಳ್ಳುವುದು' ಎಂದು ಶ್ರೀಲಂಕಾ ಕ್ರಿಕೆಟ್ ಮಾಹಿತಿ ನೀಡಿದೆ. ಸಮ್ಮೇಳನದಲ್ಲಿ 'ವೈವಿಧ್ಯತೆ ಮತ್ತು ಸೇರ್ಪಡೆ', 'ಪರಿಸರ ಸುಸ್ಥಿರತೆ ಮತ್ತು ಕ್ರೀಡೆ' ಮತ್ತು 'ಲಾಸ್ ಏಂಜಲೀಸ್ 2028 ರಲ್ಲಿ ಕ್ರಿಕೆಟ್ ಮರಳುವಿಕೆ' ಮುಂತಾದ ವಿಷಯಗಳನ್ನು ಚರ್ಚಿಸಲಾಗುವುದು.
ವಾರ್ಷಿಕ ಸಮ್ಮೇಳನವು ಹಲವಾರು ಪ್ರಮುಖ ಸಭೆಗಳು, ಕಾರ್ಯಾಗಾರಗಳು ಮತ್ತು ನೆಟ್‌ವರ್ಕಿಂಗ್ ಸೆಷನ್‌ಗಳನ್ನು ಒಳಗೊಂಡಿದೆ. ಕ್ರೀಡೆಯ ಭವಿಷ್ಯದ ಪ್ರಯೋಜನಕ್ಕಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.
ಐಸಿಸಿ ಬೋರ್ಡ್‌ನಲ್ಲಿ ಮೂವರು ಹೊಸ ಸಹಾಯಕ ಸದಸ್ಯ ನಿರ್ದೇಶಕರು ಯಾರು? ಹಾಗೆಯೇ ಐಸಿಸಿ ಅಧ್ಯಕ್ಷರ ಅವಧಿಗೆ ಯಾವ ತಿದ್ದುಪಡಿಗಳಿವೆಯೇ? ಎಂಬ ಕೆಲವು ಪ್ರಮುಖ ಅಂಶಗಳನ್ನು ತಿಳಿಸಲಾಗುವುದು. ಪ್ರಸ್ತುತ ಗ್ರೆಗ್ ಬಾರ್ಕ್ಲೇ ಅವರು ಐಸಿಸಿ ಆಧ್ಯಕ್ಷರಾಗಿದ್ದಾರೆ.
ವಿಶೇಷವಾಗಿ ಯುಎಸ್‌ಎ ಆಯೋಜಿಸಿದ 2024ರ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯ ವೆಚ್ಚದ ಕುರಿತು ಚರ್ಚೆಯು ದೊಡ್ಡ ವಿಷಯವಾಗಿದೆ. ಐಸಿಸಿಯು ಲಾಂಗ್ ಐಲ್ಯಾಂಡ್‌ನ ನಸ್ಸೌ ಕೌಂಟಿಯಲ್ಲಿ ಪಾಪ್-ಅಪ್ ಕ್ರಿಕೆಟ್ ಸ್ಟೇಡಿಯಂ ಅನ್ನು ನಿರ್ಮಿಸಿದೆ. ಅದರೆ, ಅಲ್ಲಿ ಇನ್ನೂ ಪಿಚ್ ಮತ್ತು ಔಟ್‌ಫೀಲ್ಡ್ ಅನ್ನು ಸಂಪೂರ್ಣವಾಗಿ ಸಿದ್ದಪಡಿಸಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications