ICC Ranking: ವಿಶ್ವಕಪ್ ಸೋತರು ಏಕದಿನ ಕ್ರಿಕೆಟ್‌ನಲ್ಲಿ ಭಾರತ ನಂಬರ್ 1; ಟೆಸ್ಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾ
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಮೂರು ಮಾದರಿ ಕ್ರಿಕೆಟ್‌ಗಳ ವಾರ್ಷಿಕ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ.
ಬಿಡುಗಡೆ ಮಾಡಿರುವ ಇತ್ತೀಚಿನ ಶ್ರೇಯಾಂಕದಲ್ಲಿ ಭಾರತವು ಏಕದಿನ ಮತ್ತು ಟಿ20 ಮಾದರಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಆದರೆ ಟೆಸ್ಟ್ ರ್‍ಯಾಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. 2020-21ರ ಋತುವಿನ ಫಲಿತಾಂಶಗಳು ಮತ್ತು ಮೇ 2021 ರಿಂದ ಪೂರ್ಣಗೊಂಡ ಎಲ್ಲಾ ಸರಣಿಗಳ ವಾರ್ಷಿಕ ಪಾಯಿಂಟ್‌ಗಳ ಆಧಾರದ ಮೇಲೆ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾಕ್ಕೆ ಅಗ್ರ ಸ್ಥಾನವನ್ನು ಬಿಟ್ಟುಕೊಟ್ಟಿದೆ.

ಆಸ್ಟ್ರೇಲಿಯ 124 ಪಾಯಿಂಟ್‌ಗಳನ್ನು ಹೊಂದಿದ್ದು, ಭಾರತ 120 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡ ಭಾರತಕ್ಕಿಂತ 15 ಪಾಯಿಂಟ್‌ಗಳಷ್ಟು ಹಿಂದಿದೆ. ದಕ್ಷಿಣ ಆಫ್ರಿಕಾ 103 ಅಂಕಗಳೊಂದಿಗೆ 100 ಅಂಕಗಳ ಗಡಿ ದಾಟಿದ ನಾಲ್ಕನೇ ತಂಡವಾಗಿದೆ.
2020-21ರಲ್ಲಿ ಆಸ್ಟ್ರೇಲಿಯ ವಿರುದ್ಧ 2-1 ಅಂತರದ ಗೆಲುವು ಸಾಧಿಸಿದ ಕಾರಣ ಭಾರತವು ಆಗ್ರ ಶ್ರೇಯಾಂಕದಿಂದ ಕೆಳಗಿಳಿದಿದೆ. ಮೂರರಿಂದ ಒಂಬತ್ತನೇ ಶ್ರೇಯಾಂಕದ ತಂಡಗಳ ಕ್ರಮವು ಒಂದೇ ಆಗಿರುತ್ತದೆ. ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಇನ್ನೂ ಸಾಕಷ್ಟು ಟೆಸ್ಟ್‌ಗಳನ್ನು ಆಡಬೇಕಾಗಿರುವುದರಿಂದ ಕೇವಲ ಒಂಬತ್ತು ತಂಡಗಳು ಈಗ ಶ್ರೇಯಾಂಕವನ್ನು ಪಡೆದಿವೆ. ಆದರೆ ಜಿಂಬಾಬ್ವೆ ಕೂಡ ಕಳೆದ ಮೂರು ವರ್ಷಗಳಲ್ಲಿ ಕೇವಲ ಮೂರು ಟೆಸ್ಟ್‌ಗಳನ್ನು ಆಡಿದ ಕಾರಣ ಟೆಸ್ಟ್ ಚಾಂಪಿಯನ್ ರೇಸ್‌ನಿಂದ ಔಟ್ ಆಗಿದೆ. ಮೂರು ವರ್ಷಗಳ ಅವಧಿಯಲ್ಲಿ ತಂಡಗಳು ಶ್ರೇಯಾಂಕ ಪಟ್ಟಿಗೆ ಬರಲು ಕನಿಷ್ಠ ಎಂಟು ಟೆಸ್ಟ್‌ಗಳನ್ನು ಆಡಬೇಕಾಗುತ್ತದೆ.

ವಿಶ್ವಕಪ್ ಸೋತರು ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ನಂಬರ್ ಒನ್ :
ಇನ್ನು ಏಕದಿನ ಮತ್ತು ಟಿ20 ಕ್ರಿಕೆಟ್ ಮಾದರಿಯಲ್ಲಿ ಭಾರತ ತನ್ನ ಪ್ರಾಬಲ್ಯ ಸಾಧಿಸಿದೆ. 2023ರಲ್ಲಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೋತಿರಬಹುದು. ಆದರೆ ಕಾಂಗೂರು ಪಡೆಕ್ಕಿಂತ 6 ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದು, 122 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯ ಎರಡನೇ ಸ್ಥಾನದಲ್ಲಿದೆ.
ಆಗ್ರ 10 ತಂಡಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಆದರೆ ಐರ್ಲೆಂಡ್, ಜಿಂಬಾಬ್ವೆಯನ್ನು ಹಿಂದಿಕ್ಕಿ 11 ನೇ ಸ್ಥಾನಕ್ಕೆ ತಲುಪಿದೆ. ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾವು ಆಸ್ಟ್ರೇಲಿಯದೊಂದಿಗಿನ ಅಂತರವನ್ನು ಎಂಟರಿಂದ ನಾಲ್ಕು ಅಂಕಗಳಿಗೆ ಹೆಚ್ಚಿಸಿಕೊಂಡಿದೆ. ಆದರೆ ಶ್ರೀಲಂಕಾ ಐದನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ಗಿಂತ ಕೇವಲ ಎರಡು ಪಾಯಿಂಟ್‌ಗಳಷ್ಟು ಹಿಂದಿದೆ.
ಚುಟುಕು ಕ್ರಿಕೆಟ್‌ನಲ್ಲಿ ಭಾರತಕ್ಕೆ ಆಗ್ರಸ್ಥಾನ :
264 ರೇಟಿಂಗ್ ಅಂಕಗಳೊಂದಿಗೆ ಭಾರತ ಅಗ್ರಸ್ಥಾನದಲ್ಲಿದ್ದರೆ, 257 ರೇಟಿಂಗ್‌ನೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಮೂರನೇ ಸ್ಥಾನ, ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನ ಹಾಗು ನ್ಯೂಜಿಲೆಂಡ್ ಕೂಡ ದಕ್ಷಿಣ ಆಫ್ರಿಕಾದಂತೆಯೇ 250 ರೇಟಿಂಗ್ ಅಂಕಗಳನ್ನು ಹೊಂದಿದೆ. ವೆಸ್ಟ್ ಇಂಡೀಸ್ 249 ಅಂಕಗಳಲ್ಲಿದೆ. ಪಾಕಿಸ್ತಾನ ಎರಡು ಸ್ಥಾನಗಳನ್ನು ಕಳೆದುಕೊಂಡು ಏಳನೇ ಸ್ಥಾನಕ್ಕೆ ಬಂದಿದ್ದರೆ, ಸ್ಕಾಟ್ಲೆಂಡ್, ಜಿಂಬಾಬ್ವೆಯನ್ನು ಹಿಂದಿಕ್ಕಿ 12 ನೇ ಸ್ಥಾನಕ್ಕೆ ತಲುಪಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications