Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC Annual Test Rankings: ಒಂದು ಸ್ಥಾನ ಬಡ್ತಿ ಪಡೆದ ಭಾರತ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ಮೇ 1 ರಂದು ತನ್ನ ವಾರ್ಷಿಕ ಟೆಸ್ಟ್ ಶ್ರೇಯಾಂಕವನ್ನು ನವೀಕರಣ ಮಾಡಿದೆ. ಈ ವೇಳೆ ಯಾವುದೇ ಗಮನಾರ್ಹ ಬದಲಾವಣೆ ಕಂಡು ಬಂದಿಲ್ಲ. ಆದರೆ ಈ ವೇಳೆ ಟೀಮ್ ಇಂಡಿಯಾಗೆ ಭರ್ಜರಿ ಲಾಭವಾಗಿದೆ. ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೂ ಸಹ ರ್ಯಾಂಕಿಂಗ್‌ನಲ್ಲಿ ಚೇತರಿಕೆ ಕಂಡಿದೆ. ಬರಿ ಭಾರತ ಅಷ್ಟೇ ಅಲ್ಲ ಪಕ್ಕದ ಪಾಕಿಸ್ತಾನ ಸಹ ಶ್ರೇಯಾಂಕದಲ್ಲಿ ಒಂದು ಸ್ಥಾನ ಏರಿಕೆ ಕಂಡಿದೆ. ಐಸಿಸಿಯ ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.

ಐಸಿಸಿಯ ವಾರ್ಷಿಕ ಟೆಸ್ಟ್ ತಂಡದ ಶ್ರೇಯಾಂಕದಲ್ಲಿ ಶುಭಮನ್‌ ಗಿಲ್ ಪಡೆ ಒಂದು ಸ್ಥಾನ ಏರಿಕೆ ಕಂಡಿದೆ. ಈ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ಈಗ 104 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ICC

ಈ ಶ್ರೇಯಾಂಕ ಪಟ್ಟಿಯಲ್ಲಿ ಹಾಲಿ ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್ ವಿಜೇತ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನಕ್ಕೆ ಕುಸಿದಿದೆ. ದಕ್ಷಿಣ ಆಫ್ರಿಕಾ 119 ರೇಟಿಂಗ್ ಪಾಯಿಂಟ್ ಹೊಂದಿದೆ. ಇನ್ನು ಆಸ್ಟ್ರೇಲಿಯಾ 131 ರೇಟಿಂಗ್ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಕಳೆದ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಇಂಗ್ಲೆಂಡ್‌ ಟೆಸ್ಟ್‌ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಬುಟ್ಟಿಯಲ್ಲಿ 102 ರೇಟಿಂಗ್ ಪಾಯಿಂಟ್‌ಗಳಿವೆ.

ಒಂದು ಸ್ಥಾನ ಬಡ್ತಿ ಪಡೆದ ಪಾಕ್

ಮಾಜಿ ವಿಶ್ವ ಟೆಸ್ಟ್‌ ಚಾಂಪಿಯನ್ ನ್ಯೂಜಿಲೆಂಡ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಕಿವೀಸ್‌ 101 ಅಂಕ ಕಲೆ ಹಾಕಿದೆ. ಪಾಕಿಸ್ತಾನ ಒಂದು ಸ್ಥಾನ ಏರಿಕೆ ಕಂಡಿದ್ದು, 89 ಅಂಕಗಳೊಂದಿಗೆ ಆರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಶ್ರೀಲಂಕಾ ಒಂದು ಸ್ಥಾನ ಕುಸಿತ ಕಂಡಿದ್ದು, 86 ಅಂಕ ಸೇರಿಸಿದೆ. ವೆಸ್ಟ್ ಇಂಡೀಸ್ 68 ರೇಟಿಂಗ್ ಅಂಕಗಳೊಂದಿಗೆ ಎಂಟನೇ ಸ್ಥಾನ, ಬಾಂಗ್ಲಾದೇಶ 67 ರೇಟಿಂಗ್ ಅಂಕಗಳೊಂದಿಗೆ ಒಂಬತ್ತನೇ ಸ್ಥಾನ, ಐರ್ಲೆಂಡ್ ಒಟ್ಟು 25 ರೇಟಿಂಗ್ ಅಂಕಗಳೊಂದಿಗೆ ಹತ್ತನೇ ಸ್ಥಾನದಲ್ಲಿದೆ.


ಐಸಿಸಿ ಟಾಪ್‌ 5 ಶ್ರೇಯಾಂಕದಲ್ಲಿರುವ ತಂಡಗಳು

1, ಆಸ್ಟ್ರೇಲಿಯಾ - 131 ಅಂಕಗಳು
2, ದಕ್ಷಿಣ ಆಫ್ರಿಕಾ - 119 ಅಂಕಗಳು
3, ಭಾರತ - 104 ಅಂಕಗಳು
4, ಇಂಗ್ಲೆಂಡ್ - 102 ಅಂಕಗಳು
5, ನ್ಯೂಜಿಲೆಂಡ್ - 101 ಅಂಕಗಳು

Story first published: Saturday, May 2, 2026, 8:50 [IST]
Other articles published on May 2, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+