ICC Ranking: ಶ್ರೇಯಾಂಕ ಪಟ್ಟಿಯಲ್ಲಿ ಮಾಡಿದ ಎಡವಟ್ಟಿಗೆ ಕ್ಷಮೆಯಾಚಿಸಿದ ಐಸಿಸಿ

ಐಸಿಸಿ ಬುಧವಾರ ಶ್ರೇಯಾಂಕ ಪಟ್ಟಿಯಲ್ಲಿ ದೊಡ್ಡ ಎಡವಟ್ಟೊಂದನ್ನು ಮಾಡಿ ಭಾರೀ ಟೀಕೆಗೆ ಗುರಿಯಾಗಿದೆ. ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲಿಗೆ ಭಾರತ ನಂಬರ್ 1 ಪಟ್ಟಕ್ಕೇರಿರುವುದಾಗಿ ಪ್ರಕಟಿಸಿದ್ದ ಐಸಿಸಿ ಕೆಲವೇ ಗಂಟೆಗಳಲ್ಲಿ ಮತ್ತೆ ಆಸ್ಟ್ರೇಲಿಯಾ ನಂಬರ್ 1 ಎಂದು ಉಲ್ಲೇಖಿಸಿತ್ತು. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಐಸಿಸಿ ತನ್ನ ವೆಬ್‌ಸೈಟ್‌ನಲ್ಲಿ ಕ್ಷಮೆಯಾಚಿಸಿದೆ.
ಈ ಸಂದರ್ಭದಲ್ಲಿ ಐಸಿಸಿ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಂಬರ್ 1 ತಂಡವಾಗಿಯೇ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದ್ದು ಭಾರತ ಏಕದಿನ ಹಾಗೂ ಟಿ20 ಮಾದರಿಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದೆ. ಟೆಸ್ಟ್ ಮಾದರಿಯಲ್ಲಿ ಭಾರತ ನಂಬರ್ 1 ಎಂದು ತಾಂತ್ರಿಕ ದೋಷದ ಕಾರಣದಿಂದಾಗಿ ಪ್ರಕಟವಾಗಿತ್ತು. ಈ ತಪ್ಪಿಗೆ ಕ್ಷಮೆ ಕೋರುವುದಾಗಿ ಐಸಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆದಿದ್ದು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 132 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಗೆಲುವಿನ ಬೆನ್ನಿಗೆ ಐಸಿಸಿ ಭಾರತ ತಂಡವನ್ನು ನಂಬರ್ 1 ಟೆಸ್ಟ್ ತಂಡ ಎಂದು ಘೋಷಿಸಿತ್ತು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಆತ್ರವೇ 2012ರಲ್ಲಿ ಎಲ್ಲಾ ಮಾದರಿಯಲ್ಲಿಯೂ ನಂಬರ್ 1 ಸ್ಥಾನ ಪಡೆದುಕೊಂಡ ಸಾಧೆ ಮಾಡಿತ್ತು. ಹೀಗಾಗಿ ಭಾರತದ ಅಭಿಮಾನಿಗಳ ಸಂಬ್ರ ಮುಗಿಲುಮುಟ್ಟಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಈ ಸಂತಸಕ್ಕೆ ಐಸಿಸಿ ತಣ್ಣೀರೆರಚಿತ್ತು.
ಆಸ್ಟ್ರೇಲಿಯಾ ಪ್ರಸ್ತುತ 29 ಪಂದ್ಯಗಳಲ್ಲಿ 3668 ಅಂಕ ಪಡೆದುಕೊಂಡಿದ್ದು 126 ರೇಟಿಂಗ್ ಹೊಂದುವ ಮೂಲಕ ಮತ್ತೊಮ್ಮೆ ಅಗ್ರಸ್ಥಾನದಲ್ಲಿದೆ. ಇತ್ತ ಭಾರತ ತಂಡ 115 ರೇಟಿಂಗ್‌ನೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಭಾರತ 32 ಪಂದ್ಯಗಳಲ್ಲಿ ಆಡಿದ್ದು 3690 ಅಂಕಗಳನ್ನು ಹೊಂದಿದೆ. ಇದಕ್ಕೂ ಮುನ್ನ ಐಸಿಸಿ ಶ್ರೇಯಾಂಕ ಪಟ್ಟಿಯನ್ನು ಅಪ್‌ಡೇಟ್ ಮಾಡಿದಾಗ ಭಾರತ ಎಲ್ಲಾ ಮಾದರಿಯಲ್ಲಿಯೂ ಅಗ್ರಸ್ಥಾನವನ್ನು ಪಡೆದುಕೊಂಡಿತ್ತು. ಆದರೆ ಈ ಸಂಭ್ರಮ ಕೆಲವು ಗಂಟೆಗಳವರೆಗೆ ಮಾತ್ರವೇ ಉಳಿದುಕೊಂಡಿತ್ತು.
ಇನ್ನು ಐಸಿಸಿ ಈ ರೀತಿಯ ಎಡವಟ್ಟನ್ನು ಮಾಡುತ್ತಿರುವುದು ಇದೇನು ಮೊದಲಲ್ಲ. ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಎರಡೇ ಬಾರಿಗೆ ಇದೇ ತಪ್ಪನ್ನು ಮಾಡಿದೆ ಐಸಿಸಿ. ಕಳೆದ ಜನವರಿ 17ರಂದು ಪ್ರಕಟಿಸಿದ ಪರಿಷ್ಕೃತ ಶ್ರೇಯಾಂಕ ಪಟ್ಟಿಯಲ್ಲಿಯೂ ಇದೇ ರೀತಿ ಐಸಿಸಿ ಎಡವಟ್ಟು ಮಾಡಿತ್ತು. ಭಾರತ ನಂಬರ್ 1 ತಂಡ ಎಂದು ತನ್ನ ಅಧಿಕೃತ ವೆಬ್‌ಸೈಟ್‌ನ ಶ್ರೇಯಾಂಕ ಪಟ್ಟಿಯಲ್ಲಿ ಪರಿಷ್ಕರಿಸಿ ಪಟ್ಟು ಬಿಡುಗಡೆ ಮಾಡಿತ್ತು. ಅದಾದ ಕೆಲವೇ ಗಂಟೆಗಳಲ್ಲಿ ಬದಲಾವಣೆ ಮಾಡಿದ್ದು ಆಸ್ಟ್ರೇಲಿಯಾ ನಂಬರ್ 1 ತಂಡವಾಗಿಯೇ ಮುಂದುವರಿದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications