ಟಿ20, ಏಕದಿನ ಮಾದರಿಯಲ್ಲಿ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಷಿಪ್: ICC
ನವದೆಹಲಿ, ಅಕ್ಟೋಬರ್ 13 : ಸೀಮಿತ ಓವರ್ ಗಳ ಕ್ರಿಕೆಟ್ ನತ್ತ ಹೆಚ್ಚು ಆಕರ್ಷಿತರಾಗಿರುವ ಕ್ರಿಕೆಟ್ ಅಭಿಮಾನಿಗಳನ್ನು ಟೆಸ್ಟ್ ಕ್ರಿಕೆಟ್ ನತ್ತ ಸೆಳೆಯಲು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.
ಏಕದಿನ ಹಾಗೂ ಟಿ20 ಮಾದರಿಯಂತೆ ಟೆಸ್ಟ್ ಕ್ರಿಕೆಟ್ ನಲ್ಲೂ ಚಾಂಪಿಯನ್ ಷಿಪ್ ಆಯೋಜಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಒಪ್ಪಿಗೆ ನೀಡಿದೆ.

ಕ್ರಿಕೆಟ್ ನಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಟೆಸ್ಟ್ ಮಾನ್ಯತೆ ಪಡೆದಿರುವ 9 ತಂಡಗಳ ಟೆಸ್ಟ್ ಲೀಗ್ ಮತ್ತು 13 ತಂಡಗಳನ್ನೊಳೊಂಡ ಏಕದಿನ ಟೂರ್ನಿ ಆಯೋಜಿಸಲು ಇಂದು ಐಸಿಸಿಯ ಮಹಾಧಿವೇಶನದಲ್ಲಿ ಅಧ್ಯಕ್ಷ ಶಶಾಂಕ್ ಮನೋಹರ್ ನೇತೃತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಾಗಿದೆ.
ಈ ಬಗ್ಗೆ ಮಾತನಾಡಿರುವ ಐಸಿಸಿ ಮುಖ್ಯ ಕಾರ್ಯದರ್ಶಿ ಡೇವ್ ರಿಚರ್ಡ್ ಸನ್, "2019ರ ಏಕದಿನ ವಿಶ್ವಕಪ್ ಬಳಿಕ ಟೆಸ್ಟ್ ಚಾಂಪಿಯನ್ ಷಿಪ್ ಆರಂಭಿಸಿ, ಫೈನಲ್ ಪಂದ್ಯವನ್ನು 2021ರ ಮಧ್ಯದಲ್ಲಿ ಆಯೋಜಿಸಲಾಗುವುದು' ಎಂದು ಹೇಳಿದರು.
ಸದ್ಯ ಟೆಸ್ಟ್ ಮಾನ್ಯತೆ ಪಡೆದಿರುವ 12 ತಂಡಗಳ ಪೈಕಿ 9 ತಂಡಗಳು ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳಲಿದ್ದು, ಜಿಂಬಾಬ್ವೆ, ಐರ್ಲೆಂಡ್ ಹಾಗೂ ಆಫ್ಘಾನಿಸ್ತಾನವನ್ನು ಆರಂಭದ ಪಂದ್ಯಾವಳಿಯಿಂದ ಹೊರಗಿಡಲಾಗಿದೆ.
ಎರಡು ವರ್ಷಗಳ ಕಾಲ(2019-2021ರವರೆಗೆ) ನಡೆಯಲಿರುವ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳುವ ತಂಡಗಳು ತಲಾ ಮೂರು ಸರಣಿಗಳನ್ನು ತವರಿನಲ್ಲಿ ಮತ್ತು ಬೇರೆ ದೇಶಗಳಲ್ಲಿ ಆಡಬೇಕಿದೆ. ಪ್ರತಿ ಸರಣಿಯಲ್ಲಿ ಕನಿಷ್ಠ ಎರಡರಿಂದ ಗರಿಷ್ಠ ಐದು ಪಂದ್ಯಗಳು ಇರಲಿವೆ ಎಂದು ಐಸಿಸಿ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications