For Quick Alerts
ALLOW NOTIFICATIONS  
For Daily Alerts
 

2018ರ ಐಸಿಸಿ ಪುರುಷರ ಟೆಸ್ಟ್ ತಂಡದಲ್ಲಿ ಮೂವರು ಭಾರತೀಯರು!

ICC Awards: ICC Men’s Test Team of the Year in batting order

ನವದೆಹಲಿ, ಜನವರಿ 22: ಐಸಿಸಿಯು 2018ರ ವರ್ಷದ ಪ್ರಶಸ್ತಿಗಳನ್ನು ಮಂಗಳವಾರ (ಜನವರಿ 22) ಪ್ರಕಟಿಸಿದೆ. ಇದರಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಪ್ರಶಸ್ತಿಗಳು ಲಭಿಸಿವೆ. 2018ರ ಐಸಿಸಿ ಪುರುಷರ ಟೆಸ್ಟ್ ತಂಡದಲ್ಲೂ ಮೂವರು ಭಾರತೀಯರು ಸ್ಥಾನ ಪಡೆದುಕೊಂಡಿದ್ದಾರೆ.

ಟೆಸ್ಟ್ ಮತ್ತು ಏಕದಿನದಲ್ಲಿನ ಅಸಾಮಾನ್ಯ ಸಾಧನೆಗಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2018ರ ಐಸಿಸಿ ವರ್ಷದ ಟೆಸ್ಟ್ ಆಟಗಾರ ಮತ್ತು ವರ್ಷದ ಏಕದಿನ ಆಟಗಾರ ಗೌರವಕ್ಕೆ ಪಾತ್ರರಾಗಿದ್ದರು. ಜೊತೆಗೆ ಐಸಿಸಿ ಟೆಸ್ಟ್ ಮತ್ತು ಏಕದಿನ ತಂಡದ ನಾಯಕನಾಗಿಯೂ ಮಿಂಚಿದ್ದ ವಿರಾಟ್‌ಗೆ ಐಸಿಸಿ ವರ್ಷದ ಕ್ರಿಕೆಟಿಗ ಗೌರವವೂ ಲಭಿಸಿತ್ತು.

ಭಾರತ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರಿಗೆ 2018ರ ಐಸಿಸಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಲಭಿಸಿತ್ತು. 2018ರಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ಸಾಧನೆಯನ್ನು ಪರಿಗಣಿಸಿ ಪಂತ್, ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು.

ವಿಶೇಷವೆಂದರೆ ಐಸಿಸಿ ಪ್ರಕಟಿತ 2018 ವರ್ಷದ ಟೆಸ್ಟ್ ತಂಡದಲ್ಲಿ ಭಾರತದ ಮೂವರು ಆಟಗಾರರಿದ್ದಾರೆ. ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು ಜಸ್‌ಪ್ರೀತ್‌ ಬೂಮ್ರಾಗೆ ಐಸಿಸಿ ಟೆಸ್ಟ್‌ ತಂಡದಲ್ಲಿ ಮಣೆ ನೀಡಲಾಗಿದೆ. ಐಸಿಸಿ 2018ರ XI ಟೆಸ್ಟ್ ತಂಡ ಕೆಳಗಿದೆ.

ಐಸಿಸಿ ಪುರುಷರ ಟೆಸ್ಟ್ ತಂಡ (ಬ್ಯಾಟಿಂಗ್‌ ಆರ್ಡರ್‌ನಂತೆ)
1. ಟಾಮ್ ಲ್ಯಾಥಮ್ (ನ್ಯೂಜಿಲೆಂಡ್), 2. ದಿಮತ್ ಕರುಣಾರತ್ನೆ (ಶ್ರೀಲಂಕಾ), 3. ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), 4. ವಿರಾಟ್ ಕೊಹ್ಲಿ (ಭಾರತ-ಕ್ಯಾಪ್ಟನ್), 5. ಹೆನ್ರಿ ನಿಕೋಲ್ಸ್ (ನ್ಯೂಜಿಲೆಂಡ್), 6. ರಿಷಬ್ ಪಂತ್ (ಭಾರತ-ವಿಕೆ), 7. ಜೇಸನ್ ಹೋಲ್ಡರ್ (ವಿಂಡೀಸ್), 8. ಕಾಗಿಸೊ ರಬಾಡಾ (ದಕ್ಷಿಣ ಆಫ್ರಿಕಾ), 9. ನಾಥನ್ ಲಿಯಾನ್ (ಆಸ್ಟ್ರೇಲಿಯಾ), 10. ಜಸ್‌ಪ್ರೀತ್ ಬೂಮ್ರಾ (ಭಾರತ), 11. ಮೊಹಮ್ಮದ್ ಅಬ್ಬಾಸ್ (ಪಾಕಿಸ್ತಾನ).

Story first published: Tuesday, January 22, 2019, 16:48 [IST]
Other articles published on Jan 22, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+