ಐಸಿಸಿ ಪ್ರಶಸ್ತಿ: ಉದಯೋನ್ಮುಖ ಕ್ರಿಕೆಟಿಗನಾಗಿ ಮಿಂಚಿದ ರಿಷಬ್ ಪಂತ್

ನವದೆಹಲಿ, ಜನವರಿ 22: ಭಾರತದ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರು 2018ರ ಐಸಿಸಿ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ 2018ರ ಐಸಿಸಿ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಇದರಲ್ಲಿ ಪಂತ್ ಕೂಡ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಶಸ್ತಿಗಾಗಿ ನಡೆದ ಆಯ್ಕೆಯಲ್ಲಿ 21ರ ಹರೆಯದ ಪಂತ್ 2018ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿನ ಸಾಧನೆಗಾಗಿ ಹೆಚ್ಚು ಮತಗಳನ್ನು ಪಡೆದರು. ಅದರಲ್ಲೂ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ವೇಳೆ ಶತಕ ಬಾರಿಸಿದ್ದ ಪಂತ್, ಇಂಗ್ಲೆಂಡ್‌ನಲ್ಲಿ ಟೆಸ್ಟ್ ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಕೀರ್ತಿಗೂ ಪಾತ್ರರಾಗಿದ್ದರು.
2018ರ ಡಿಸೆಂಬರ್ ತಿಂಗಳಲ್ಲಿ ಅಡಿಲೇಡ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಒಟ್ಟು 11 ಕ್ಯಾಚ್‌ಗಳನ್ನು ಪಡೆದಿದ್ದ ಪಂತ್, ಭಾರತದವರೇ ಆದ ಮಹೇಂದ್ರ ಸಿಂಗ್ ಧೋನಿ ನಿರ್ಮಿಸಿದ್ದ ದಾಖಲೆಯನ್ನು ಸರಿದೂಗಿಸಿಕೊಂಡಿದ್ದರು. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಪಂತ್‌ಗೆ ಐಸಿಸಿ ಪ್ರಶಸ್ತಿ ಒಲಿದು ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications