Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ, ಎಲ್ಲಿಸ್ ಪೆರ್ರಿಗೆ ವಿಶೇಷ ವಿನ್ಯಾಸದ ಬ್ಯಾಟ್ ಕೊಡುಗೆ

ICC Awards: Virat Kohli and Ellyse Perry are named for decade’s best cricketers

ದುಬೈ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಆಲ್ ರೌಂಡರ್ ಎಲ್ಲಿಸ್ ಪೆರ್ರಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ)ನಿಂದ ದಶಕದ ಬೆಸ್ಟ್ ಕ್ರಿಕೆಟರ್ಸ್ ಪ್ರಶಸ್ತಿ ಲಭಿಸಿದೆ. ಪುರುಷರ ಮತ್ತು ಮಹಿಳಾ ವಿಭಾಗದ ಅತ್ಯುತ್ತಮ ಸಾಧನೆಗಾಗಿ ಇಬ್ಬರನ್ನು ಐಸಿಸಿ ಗೌರವಿಸಿದೆ.

ಪುರುಷರ ವಿಭಾಗದ ಸಾಧನೆಗಾಗಿ ವಿರಾಟ್ ಕೊಹ್ಲಿಗೆ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ದೊರೆತಿದೆ. ಮಹಿಳಾ ವಿಭಾಗದ ಬೆಸ್ಟ್ ಸಾಧನೆಗಾಗಿ ಎಲ್ಲಿಸ್ ಪೆರ್ರಿಗೆ ರಾಚೆಲ್ ಹೇಹೋ-ಫ್ಲಿಂಟ್ ಪ್ರಶಸ್ತಿ ಲಭಿಸಿದೆ. ಇಬ್ಬರಿಗೂ ಐಸಿಸಿಯಿಂದ ವಿಶೇಷ ವಿನ್ಯಾಸದ ಬ್ಯಾಟ್‌ ನೀಡಲಾಗಿದೆ.

ಐಸಿಸಿ ಪುರುಷರ ವಿಭಾಗದ ದಶಕದ ಏಕದಿನ, ಟಿ20ಐ ಮತ್ತು ಟೆಸ್ಟ್ ಈ ಮೂರೂ ತಂಡಗಳಲ್ಲೂ ವಿರಾಟ್ ಕೊಹ್ಲಿ ಹೆಸರಿಸಲ್ಪಟ್ಟಿದ್ದರು. ಇವುಗಳಲ್ಲಿ ಟೆಸ್ಟ್‌ ತಂಡದಲ್ಲಿ ಕೊಹ್ಲಿಯನ್ನು ನಾಯಕರಾಗಿ ಹೆಸರಿಸಲಾಗಿತ್ತು. ಟಿ20ಐ ಮತ್ತು ಏಕದಿನ ಎರಡೂ ತಂಡಗಳಲ್ಲೂ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ನಾಯಕರಾಗಿ ಕಾಣಿಸಿಕೊಂಡಿದ್ದರು.

ತನ್ನ ಅಧಿಕೃತ ಖಾತೆಯಲ್ಲಿ ಐಸಿಸಿ ಆರಂಭದಲ್ಲಿ ಎರಡು ಗಿಫ್ಟ್‌ ಬಾಕ್ಸ್‌ಗಳನ್ನಷ್ಟೇ ಹಾಕಿಕೊಂಡಿತ್ತು. ಕೊಂಚ ಸಮಯದ ಬಳಿಕ ಅದು ಕೊಹ್ಲಿ ಮತ್ತು ಪೆರ್ರಿಗಾಗಿ ವಿನ್ಯಾಸಗೊಳಿಸಲಾಗಿರುವ ವಿನೂತನ ಬ್ಯಾಟ್‌ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿತ್ತು. ಕೊಹ್ಲಿ ಸದ್ಯ ಏಕದಿನ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದಾರೆ.

Story first published: Tuesday, December 29, 2020, 20:55 [IST]
Other articles published on Dec 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+