Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ಸ್ಪಿನ್ನರ್ ಅಖಿಲ ಧನಂಜಯಗೆ 1 ವರ್ಷ ನಿಷೇಧ ವಿಧಿಸಿದ ಐಸಿಸಿ

ICC bans Lankan spinner Akila Dananjaya for illegal bowling action

ಕೊಲಂಬೋ, ಸೆಪ್ಟೆಂಬರ್ 19: ಶ್ರೀಲಂಕಾ ಸ್ಪಿನ್ನರ್ ಅಖಿಲ ಧನಂಜಯಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಂದು ವರ್ಷದ ನಿಷೇಧ ಶಿಕ್ಷೆ ವಿಧಿಸಿದೆ. ಅಕ್ರಮ ಬೌಲಿಂಗ್ ಶೈಲಿಗಾಗಿ ಗುರುವಾರ (ಸೆಪ್ಟೆಂಬರ್ 19) ಧನಂಜಯ 12 ತಿಂಗಳ ನಿಷೇಧಕ್ಕೆ ಗುರಿಯಾಗಿದ್ದಾರೆ.

ಗ್ಯಾಲಿಯಲ್ಲಿ ಆಗಸ್ಟ್ 14ರಿಂದ 18ರ ವರೆಗೆ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಅಖಿಲ ಧನಂಜಯ ಅವರ ಬೌಲಿಂಗ್ ಶೈಲಿ ಸರಿಯಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಅನಂತರ ಅವರ ಬೌಲಿಂಗ್‌ ಶೈಲಿಯನ್ನು ಪರೀಕ್ಷೆಗೊಳಪಡಿಸಲಾಯಿತು.

25ರ ಹರೆಯದ ಧನಂಜಯ ಅವರು ಚೆನ್ನೈಯಲ್ಲಿ ಆಗಸ್ಟ್ 29ರಂದು ಸ್ವತಂತ್ರವಾಗಿ ಪರೀಕ್ಷೆಗೊಳಲಾಗಿದ್ದರು. ಪರೀಕ್ಷೆಯ ಬಳಿಕ ಅವರ ಬೌಲಿಂಗ್ ಆ್ಯಕ್ಷನ್ ಅನ್ನು ಅಕ್ರಮವೆಂದು ಪರಿಗಣಿಸಲಾಗಿತ್ತು. ಹೀಗಾಗಿ ಧನಂಜಯ ಇನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳುವಂತಿಲ್ಲ.

ಅಖಿಲ ಧನಂಜಯ ಡಿಸೆಂಬರ್ 2018ರಂದು ಮೊದಲ ಬಾರಿಗೆ ನಿಷೇಧಕ್ಕೀಡಾಗಿದ್ದರು. ಅನಂತರ ಅವರಿಗೆ ಫೆಬ್ರವರಿ 2019ರಲ್ಲಿ ಮತ್ತೆ ಬೌಲಿಂಗ್‌ಗೆ ಅನುವು ಮಾಡಿಕೊಡಲಾಗಿತ್ತು. ಇದೀಗ ಅಖಿಲ ಮತ್ತೆ ನಿಷೇಧಕ್ಕೀಡಾಗಿದ್ದಾರೆ. ಒಂದು ವರ್ಷದ ನಿಷೇಧದ ಬಳಿಕ ಧನಂಜಯ ಮತ್ತೆ ಪರೀಕ್ಷೆಗೆ ಒಳಗಾಗಬೇಕಿದೆ. ಅನಂತರವೇ ಅವರಿಗೆ ಮತ್ತೆ ಬೌಲಿಂಗ್‌ಗೆ ಅವಕಾಶ ಲಭಿಸಲಿದೆ.

Story first published: Thursday, September 19, 2019, 22:09 [IST]
Other articles published on Sep 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+