ಭಾರತಕ್ಕೆ ಬಾಂಗ್ಲಾದೇಶ ಪ್ರವಾಸ ಬೆಳೆಸದಿದ್ದರೆ ಸ್ಕಾಟ್ಲೆಂಡ್‌ಗೆ ಲಾಟರಿ
ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026ರಲ್ಲಿ ಬಾಂಗ್ಲಾದೇಶ ಭಾಗವಹಿಸುವ ಬಗ್ಗೆ ಅಂತಿಮ ಗಡುವನ್ನು ಐಸಿಸಿ ನೀಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ನಡುವೆ ಕಳೆದ ಒಂದು ವಾರದಿಂದ ನಡೆಯುತ್ತಿರುವ ಹಗ್ಗಜಗ್ಗಾಟ ತೀವ್ರಗೊಂಡಿದೆ. ಭಾರತಕ್ಕೆ ಬಾಂಗ್ಲಾ ಪ್ರಯಾಣ ಬೆಳೆಸುತ್ತದೋ ಇಲ್ಲವೋ ಎಂಬುದನ್ನು ತಿಳಿಸಲು ಬಿಸಿಬಿಗೆ ಜನವರಿ 21ರ ಗಡುವನ್ನು ಐಸಿಸಿ ನೀಡಿದೆ. ಬಾಂಗ್ಲಾದೇಶ ಟಿ20 ವಿಶ್ವಕಪ್‌ನಿಂದ ಹೊರನಡೆದರೆ ಯಾವ ತಂಡಕ್ಕೆ ಸ್ಥಾನ ಎಂಬ ಪ್ರಶ್ನೆ ಉದ್ಭವಿಸಿದೆ.
ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2026ರ ಪಂದ್ಯಗಳಲ್ಲಿ ಭದ್ರತಾ ಕಾರಣಗಳನ್ನು ನೀಡಿ ಭಾಗವಹಿಸಲು ಹಿಂದೇಟು ಹಾಕಿರುವ ಬಾಂಗ್ಲಾ, ತನ್ನನ್ನು ಸಿ ಗುಂಪಿನಿಂದ ಬಿ ಗುಂಪಿಗೆ ವರ್ಗಾಯಿಸುವಂತೆ ಐಸಿಸಿಗೆ ಬೇಡಿಕೆ ಸಹ ಇಟ್ಟಿತ್ತು. ಆದರೆ ಈ ಎಲ್ಲ ಬೇಡಿಕೆಗೆ ಸೊಪ್ಪು ಹಾಕದ ಐಸಿಸಿ ಬಿಸಿಬಿ ಭಾರತಕ್ಕೆ ತನ್ನ ತಂಡವನ್ನು ಕಳುಹಿಸುತ್ತದೋ ಇಲ್ಲವೋ ಎಂಬ ಬಗ್ಗೆ ಅಂತಿಮ ತೀರ್ಮಾನವನ್ನು ಬುಧವಾರದ ಒಳಗೆ ಸೂಚಿಸುವಂತೆ ತಿಳಿಸಿದೆ. ಒಂದು ವೇಳೆ ಬಾಂಗ್ಲಾ ಟೂರ್ನಿಯಿಂದ ಹೊರ ನಡೆದಲ್ಲಿ, ಈ ಸ್ಥಾನವನ್ನು ತುಂಬಲು ಸ್ಕಾಟ್ಲೆಂಡ್ ತಯಾರಾಗಿದೆ.

ಸ್ಕಾಟ್ಲೆಂಡ್ ಐಸಿಸಿ ಟಿ20 ಶ್ರೇಯಾಂಕದಲ್ಲಿ 12ನೇ ಶ್ರೇಯಾಂಕವನ್ನು ಹೊಂದಿದೆ. ಪರ್ಯಾಯ ಮಾನದಂಡಗಳ ಅನುಗುಣವಾಗಿ ಸ್ಕಾಟ್ಲೆಂಡ್ ಅರ್ಹತೆ ಪಡೆಯದ ರಾಷ್ಟ್ರಗಳಿಗಿಂತ ಮೇಲುಗೈ ಸಾಧಿಸಿದೆ. ಹಲವು ಮಾನದಂಡಗಳನ್ನು ನೋಡಿದಾಗ ಸ್ಕಾಟ್ಲೆಂಡ್ ವಿಶ್ವಕಪ್‌ಗೆ ಅರ್ಹತೆ ಪಡೆಯಬಹುದಾಗಿದೆ. ಅಲ್ಲದೆ ಐಸಿಸಿ ಶ್ರೇಯಾಂಕಗಳು ಸಹ ತಂಡಕ್ಕೆ ಆದ್ಯತೆ ನೀಡುತ್ತದೆ. ಐಸಿಸಿ ಶ್ರೇಯಾಂಕದಲ್ಲಿ ಸ್ಕಾಟ್ಲೆಂಡ್, ಈ ಬಾರಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ 13ನೇ ಶ್ರೇಯಾಂಕಿತ ನೆದರ್ಲ್ಯಾಂಡ್ಸ್ ಗಿಂತಲೈ ಮೇಲಿದೆ. ಅಲ್ಲದೆ ಉಳಿದ ತಂಡಗಳಾದ ಯುಎಇ (17 ನೇ ಸ್ಥಾನ) ಮತ್ತು ಪಪುವಾ ನ್ಯೂಗಿನಿಯಾ (20 ನೇ ಸ್ಥಾನ) ತಂಡಗಳು ಸಹ ಟಿ20 ವಿಶ್ವಕಪ್‌ನಲ್ಲಿ ಆಡುವ ಕನಸು ಕಾಣುತ್ತಿವೆ.
ಬಾಂಗ್ಲಾ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸದಿದ್ದರೆ..
ಸ್ಕಾಟ್ಲೆಂಡ್ 2024ರ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12ರ ಹಂತಕ್ಕೆ ಪ್ರವೇಶ ಪಡೆದಿತ್ತು. ಸ್ಕಾಟ್ಲೆಂಡ್ ಲೀಗ್ ಹಂತದ ಪಂದ್ಯಗಳಲ್ಲಿ ನಮೀಬಿಯಾ, ಒಮನ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಇನ್ನು ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿತ್ತು. ಸ್ಕಾಟ್ಲೆಂಡ್ ಭಾರತದಲ್ಲಿ ಆಡಲು ಮತ್ತು ಯಾವುದೇ ತೊಂದರೆಗಳು ಕಾಣುತ್ತಿಲ್ಲ. ಈ ತಂಡಕ್ಕೆ ಭಾರತಕ್ಕೆ ಬರಲು ವೀಸಾ ಸಮಸ್ಯೆಯೂ ಎದುರಾಗದು. ಈಗ ಐಸಿಸಿ ನೀಡಿದ ಗಡುವಿನಲ್ಲಿ ಬಾಂಗ್ಲಾದೇಶ ತನ್ನ ತಂಡವನ್ನು ಕಳುಹಿಸಲು ಒಪ್ಪುತ್ತದಾ ಎಂಬ ಪ್ರಶ್ನೆ ಉದ್ಭವಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications