Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy 2025: ಬಿಸಿಸಿಐ-ಪಿಸಿಬಿ ನಡುವೆ ತುರ್ತು ಸಭೆ ಕರೆದ ಐಸಿಸಿ; ಯಾವೆಲ್ಲಾ ವಿಚಾರ ಚರ್ಚೆ?

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಆಯೋಜನೆ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ವಿವಾದವೇ ಟೂರ್ನಿಯ ವೇಳಾಪಟ್ಟಿ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ( ಐಸಿಸಿ) ನವೆಂಬರ್ 26 ರಂದು ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಸಂಬಂಧ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅನ್ನು ತುರ್ತು ಸಭೆಗೆ ಕರೆದಿದೆ. ಐಸಿಸಿ ಕರೆದಿರುವ ತುರ್ತು ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಸಂಬಂಧ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

ವರದಿಗಳ ಪ್ರಕಾರ, ಚಾಂಪಿಯನ್ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕೆ ಎಂಬುದು ಐಸಿಸಿ ಕಡೆದಿರುವ ತುರ್ತು ಸಭೆಯ ಮುಖ್ಯ ವಿಷಯವಾಗಿದೆ. ಸಭೆಯಲ್ಲಿ ಐಸಿಸಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲಿದೆ. ಚಾಂಪಿಯನ್ ಟ್ರೋಫಿ ಟೂರ್ನಿಯ ಆಯೋಜನೆ ಹಕ್ಕನ್ನು ಉಳಿಸಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಒತ್ತಾಯ ಮತ್ತು ಪಾಕಿಸ್ತಾನದಲ್ಲಿ ಟೂರ್ನಿ ಆಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರಾಕರಣೆ ಸಮಸ್ಯೆಯನ್ನು ಬಗೆಹರಿಸುವುದು ಐಸಿಸಿಯ ಉದ್ದೇಶವಾಗಿದೆ.

ICC calls emergency meeting between BCCI and PCB for Champions Trophy 2025

ಪಾಕಿಸ್ತಾನ ಮತ್ತು ಭಾರತದ ಸಮಸ್ಯೆಗಳಿಗೆ ಪ್ರಸ್ತಾವಿತ ಪರಿಹಾರಗಳಲ್ಲಿ ಒಂದು ಹೈಬ್ರಿಡ್ ಮಾದರಿಯಾಗಿದೆ. ಆದರೆ, ಹೈಬ್ರಿಡ್ ಮಾದರಿ ಬಗ್ಗೆ ಪಿಸಿಬಿ ವಿರೋಧ ವ್ಯಕ್ತಪಡಿಸಿದೆ. ಏಕೆಂದರೆ ಆತಿಥೇಯರಾಗಿ ಪಾಕಿಸ್ತಾನದ ಅಧಿಕಾರ ದುರ್ಬಲಗೊಳ್ಳಲಿದೆ. ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಸ್ಥಾನದ ಮೇಲೂ ಪರಿಣಾಮ ಬೀರಲಿದೆ ಎಂಬುದು ಪಿಸಿಬಿ ವಾದ.

ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ತೆರಳಲು ಭಾರತ ಸರ್ಕಾರ ಅನುಮತಿ ನೀಡಿಲ್ಲ ಎಂದು ಐಸಿಸಿಗೆ ಬಿಸಿಸಿಐ ಮಾಹಿತಿ ನೀಡಿದೆ. ನವೆಂಬರ್ 2021 ರಲ್ಲಿ ಚಾಂಪಿಯನ್ ಟ್ರೋಫಿ ಟೂರ್ನಿ ಆಯೋಜಿಸುವ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಲಾಯಿತು. ಸಂಪೂರ್ಣ ಟೂರ್ನಿಯನ್ನು 3 ಪ್ರಮುಖ ಸ್ಥಳಗಳಾದ ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ಆಯೋಜಿಸಲು ಪಿಸಿಬಿ ತಯಾರಿ ನಡೆಸುತ್ತಿದ್ದು, ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಸಲು ನಿರ್ಧರಿಸಿದೆ. ಆದರೆ, ಐಸಿಸಿ ಅಧಿಕೃತವಾಗಿ ಯಾವುದೇ ವೇಳಾಪಟ್ಟಿ ಬಿಡುಗಡೆ ಮಾಡಿಲ್ಲ.

ಪಿಸಿಬಿ ಅಧ್ಯಕ್ಷ ಹೇಳಿದ್ದೇನು?

ಕೆಲ ದಿನಗಳ ಹಿಂದೆ ಪಾಕಿಸ್ತಾನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ನಾವು ನಮ್ಮ ಪ್ರಶ್ನೆಗಳನ್ನು ಐಸಿಸಿಗೆ ಕಳುಹಿಸಿದ್ದೇವೆ. ಈಗ ಐಸಿಸಿ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಕ್ರೀಡೆ ಮತ್ತು ರಾಜಕೀಯ ವಿಭಿನ್ನವಾಗಿದ್ದು, ಯಾವುದೇ ದೇಶವು ಎರಡನ್ನು ಬೆರೆಸಬಾರದು ಎಂದುಕೊಂಡಿದ್ದೇನೆ. ಚಾಂಪಿಯನ್ಸ್ ಟ್ರೋಫಿ ಬಗ್ಗೆ ನನಗೆ ಇನ್ನೂ ಸಕಾರಾತ್ಮಕ ನಿರೀಕ್ಷೆಗಳಿವೆ. ಇದರೊಂದಿಗೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸುವುದಿಲ್ಲ ಎಂದಿದ್ದಾರೆ.

Story first published: Saturday, November 23, 2024, 16:45 [IST]
Other articles published on Nov 23, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+