Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಚ್ ಫಿಕ್ಸಿಂಗ್ ಆರೋಪ: ಸಾಕ್ಷ್ಯ ಹಸ್ತಾಂತರಕ್ಕೆ ಐಸಿಸಿ ಒತ್ತಾಯ

ಬೆಂಗಳೂರು, ಜೂನ್ 1: ಭಾರತ ಸೇರಿದಂತೆ ವಿವಿಧೆಡೆ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಪಿಚ್ ಫಿಕ್ಸಿಂಗ್ ನಡೆದಿದೆ ಎಂಬ ಸುದ್ದಿ ಪ್ರಸಾರ ಮಾಡಿರುವ ಅಲ್ ಜಜೀರಾ ವಾಹಿನಿಯು ಅದರ ಸಾಕ್ಷ್ಯಗಳನ್ನು ತನಗೆ ನೀಡುವಂತೆ ಐಸಿಸಿ ಹೇಳಿದೆ.

ಕ್ರಿಕೆಟ್‌ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ತಮಗೆ ನೀಡುವಂತೆ ಅಲ್ ಜಜೀರಾ ವಾಹಿನಿಗೆ ಕೇಳಿರುವುದಾಗಿ ಐಸಿಸಿ ಸಿಇಒ ಡೇವ್ ರಿಚರ್ಡ್‌ಸನ್‌ ತಿಳಿಸಿದ್ದಾರೆ.

icc ceo dave richardson asks al jazeera to hand over the materail evidence

ಈ ಕಾರ್ಯಕ್ರಮದಲ್ಲಿ ಮಾಡಿರುವ ಎಲ್ಲ ಆರೋಪಗಳ ಕುರಿತು ನಾವು ಪರಿಶೀಲನೆ ಮಾಡಬೇಕಿದೆ. ಯಾವ ಸಣ್ಣ ಅಂಶವನ್ನೂ ಬಿಡದೆ ಸಂಪೂರ್ಣ, ಕೂಲಂಕಷ ಮತ್ತು ನ್ಯಾಯಸಮ್ಮತವಾದ ತನಿಖೆಯನ್ನು ನಡೆಸುತ್ತೇವೆ. ಅದಕ್ಕೆ ಅವರು ಹೊಂದಿರುವ ಸಾಕ್ಷ್ಯಗಳನ್ನು ನೋಡುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.



ರಾಂಚಿಯಲ್ಲಿ ಕಳೆದ ವರ್ಷ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಮತ್ತು ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯಗಳಲ್ಲಿ ಅಕ್ರಮಗಳು ನಡೆದಿವೆ. ಇಂಗ್ಲೆಂಡ್‌ನ ಮೂವರು ಮತ್ತು ಆಸ್ಟ್ರೇಲಿಯಾದ ಇಬ್ಬರು ಆಟಗಾರರು ಫಿಕ್ಸರ್‌ಗಳು ಹೇಳಿದಂತೆ ರನ್ ಗಳಿಸಲು ಒಪ್ಪಿಕೊಂಡಿದ್ದರು ಎಂದು ಅಲ್ ಜಜೀರಾ ವಾಹಿನಿ ಆರೋಪಿಸಿತ್ತು.

ಈ ಅಕ್ರಮ ಚಟುವಟಿಕೆಗಳಲ್ಲಿ ಐಸಿಸಿಯ ಭ್ರಷ್ಟಾಚಾರ ನಿಗ್ರಹ ವಿಭಾಗದ ಅಧಿಕಾರಿಗಳು ಭಾಗಿಯಾಗಿರುವ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಡೇವ್ ರಿಚರ್ಡ್‌ಸನ್ ಹೇಳಿದ್ದಾರೆ.

Story first published: Friday, June 1, 2018, 18:43 [IST]
Other articles published on Jun 1, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+