Champions Trophy 2025: ಟೂರ್ನಿಯ ವೇಳಾಪಟ್ಟಿ: ಸಮಯ, ಭಾರತದಲ್ಲಿ ಯಾವ ಚಾನೆಲ್‌ನಲ್ಲಿ ಲಭ್ಯ?
ಬುಧವಾರದಿಂದ ಚಾಂಪಿಯನ್ಸ್ ಟ್ರೋಫಿ ರಂಗು ಮೈನೆವರಲಿದೆ. ಈ ಐಸಿಸಿ ಮೆಗಾ ಟೂರ್ನಿಯಲ್ಲಿ ಭಾಗವಹಿಸಲು ಬಲಿಷ್ಠ ತಂಡಗಳು ತಯಾರಿ ನಡೆಸಿವೆ. ಈ ಬಾರಿ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸುತ್ತಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಭಾರತ, ಭದ್ರತ ಕಾರಣದಿಂದ ಪಾಕ್‌ಗೆ ಪ್ರವಾಸ ಬೆಳೆಸದ ಹಿನ್ನೆಲೆಯಲ್ಲಿ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಒಂಬತ್ತನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಬಹಳ ರೋಚಕತೆ ಹೆಚ್ಚಿಸಿದೆ.
ಈ ಬಾರಿ ಚಾಂಪಿಯನ್ಸ್ ಟ್ರೋಫಿ ಹೈಬ್ರೀಡ್ ಮಾದರಿಯಲ್ಲಿ ನಡೆಯುತ್ತಿದೆ. ಈ ದುಬೈನ ಒಂದು ಅಂಗಳದಲ್ಲಿ ಪಂದ್ಯವನ್ನು ಆಯೋಜಿಸಲಾದರೆ, ಪಾಕಿಸ್ತಾನದ ಮೂರು ಮೈದಾನಗಳು ಈ ಟೂರ್ನಿಗೆ ಆತಿಥ್ಯವನ್ನು ವಹಿಸಲಿವೆ. ಲೀಗ್ ಹಂತದಲ್ಲಿ 12 ಹಾಗೂ ನಾಕೌಟ್ ಹಂತದಲ್ಲಿ (ಫೈನಲ್ ಪಂದ್ಯ ಸೇರಿ) ಮೂರು ಪಂದ್ಯಗಳು ನಡೆಯಲಿವೆ. ರೋಹಿತ್ ಶರ್ಮಾ ಅವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ದುಬೈನಲ್ಲಿ ಈಗಾಗಲೇ ಅಭ್ಯಾಸವನ್ನು ಆರಂಭಿಸಿದ್ದು, ಗೆಲುವಿನ ಆರಂಭವನ್ನು ಪಡೆಯುವ ಕನಸು ಕಾಣುತ್ತಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಫೆ.23 ರಂದು ನಡೆಯಲಿದೆ.

ಪಂದ್ಯ ನೋಡುವುದು ಎಲ್ಲಿ?
2025 ರ ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ, ಪಂದ್ಯಗಳ ನೇರ ಪ್ರಸಾರವು ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ.
ಪಂದ್ಯ ಆರಂಭವಾಗುವ ಸಮಯ?
ಭಾರತೀಯ ಕಾಲಮಾನದ ಪ್ರಕಾರ ಪಂದ್ಯಗಳು ಮಧ್ಯಾಹ್ನ 2.30ಕ್ಕೆ ಆರಂಭವಾಗಲಿವೆ.
ಎಷ್ಟು ತಂಡಗಳು ಟೂರ್ನಿಯಲ್ಲಿ ಭಾಗಿ?
ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ.
ಭಾರತ ಯಾವ ಗುಂಪಿನಲ್ಲಿ ಸ್ಥಾನ ಪಡೆದಿದೆ?
ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ "ಎ" ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ ಅಲ್ಲದೆ ಆತಿಥೇಯ ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್ ತಂಡಗಳು ಈ ಗುಂಪಿನಲ್ಲಿವೆ.
"ಬಿ" ಗುಂಪಿನಲ್ಲಿರುವ ತಂಡಗಳು ಯಾವವು?
"ಬಿ" ಗುಂಪು ಬಲಿಷ್ಠವಾಗಿದೆ. ಎರಡು ಬಾರಿ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಅಫ್ಘಾನಿಸ್ತಾನ ತಂಡಗಳು ಈ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಚಾಂಪಿಯನ್ಸ್ ಟ್ರೋಫಿಯ ವೇಳಾ ಪಟ್ಟಿ
ಫೆ.19 - ಪಾಕಿಸ್ತಾನ vs ನ್ಯೂಜಿಲೆಂಡ್, ಕರಾಚಿ
ಫೆ.20- ಬಾಂಗ್ಲಾದೇಶ vs ಭಾರತ, ದುಬೈ
ಫೆ.21 - ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ, ಕರಾಚಿ
ಫೆ.22- ಆಸ್ಟ್ರೇಲಿಯಾ vs ಇಂಗ್ಲೆಂಡ್, ಲಾಹೋರ್
ಫೆ.23- ಪಾಕಿಸ್ತಾನ vs ಭಾರತ, ದುಬೈ
ಫೆ.24- ಬಾಂಗ್ಲಾದೇಶ vs ನ್ಯೂಜಿಲೆಂಡ್, ರಾವಲ್ಪಿಂಡಿ
ಫೆ.25- ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ
ಫೆ.26- ಅಫ್ಘಾನಿಸ್ತಾನ v ಇಂಗ್ಲೆಂಡ್, ಲಾಹೋರ್
ಫೆ.27- ಪಾಕಿಸ್ತಾನ vs ಬಾಂಗ್ಲಾದೇಶ, ರಾವಲ್ಪಿಂಡಿ
ಫೆ.28- ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ, ಲಾಹೋರ್
ಮಾರ್ಚ್ 1 - ದಕ್ಷಿಣ ಆಫ್ರಿಕಾ v ಇಂಗ್ಲೆಂಡ್, ಕರಾಚಿ
ಮಾರ್ಚ್ 2- ನ್ಯೂಜಿಲೆಂಡ್ v ಭಾರತ, ದುಬೈ
ಮಾ.4- ಮೊದಲ ಸೆಮಿಫೈನಲ್ ಪಂದ್ಯ, ದುಬೈ
ಮಾ.5- ಎರಡನೇ ಸೆಮಿಫೈನಲ್ ಪಂದ್ಯ, ಲಾಹೋರ್
ಮಾ.9- ಫೈನಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications