Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy 2025: ಮಿಚೆಲ್ ಸ್ಯಾಂಟ್ನರ್ ನೇತೃತ್ವದ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ

ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಗೆ ನ್ಯೂಜಿಲೆಂಡ್ ಕ್ರಿಕೆಟ್ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. 8 ವರ್ಷಗಳ ನಂತರ ಈ ಮೆಗಾ ಟೂರ್ನಿಯಲ್ಲಿ ಅಬ್ಬರಿಸಕು ಕಿವೀಸ್ ಪಡೆ ಸಜ್ಜಾಗಿದೆ. ನ್ಯೂಜಿಲೆಂಡ್ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿಗೆ ಹಲವು ಅನುಭವಿ ಮತ್ತ ಯುವ ಆಟಗಾರರನ್ನು ಆಯ್ಕೆ ಮಾಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕರಾಗಿ ಸ್ಪಿನ್ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ 2024ರ ಸಂದರ್ಭದಲ್ಲಿ ಮೀಸಲು ಆಟಗಾರರಾಗಿದ್ದ ಬೆನ್ ಸಿಯರ್ಸ್ ಮೊಣಕಾಲಿನ ಗಾಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಕಳೆದ ವರ್ಷ ಬೆನ್ ಸಿಯರ್ಸ್ ಕೂಡ ಹೆಚ್ಚಾಗಿ ಕ್ರಿಕೆಟ್ ಮೈದಾನದಿಂದ ದೂರವಿದ್ದರು. ಕಳೆದ ಗುರುವಾರ ವೆಲ್ಲಿಂಗ್ಟನ್ ಫೈರ್ ಬರ್ಡ್ಸ್ ನ ಸೂಪರ್ ಸ್ಮ್ಯಾಶ್ ಪಂದ್ಯದ ವೇಳೆ ಬೆನ್ ಸಿಯರ್ಸ್ ಮೈದಾನಕ್ಕೆ ಮರಳಿದ್ದು, ಅದ್ಭುತ ಪ್ರದರ್ಶನ ನೀಡಿದ್ದಾರೆ.

ICC Champions Trophy 2025 New Zealand squad announced

ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ನಾಥನ್ ಸ್ಮಿತ್, ಬೆನ್ ಸಿಯರ್ಸ್, ವಿಲ್ ಒ'ರೂರ್ಕ್ ಅವರಂತಹ ಅಪಾಯಕಾರಿ ವೇಗದ ಬೌಲರ್‌ಗಳನ್ನು ಚಾಂಪಿಯನ್ಸ್ ಟ್ರೋಫಿಗಾಗಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಸೇರಿಸಿದೆ. ವಿಲ್ ಒ'ರೂರ್ಕ್ ಮತ್ತು ನಾಥನ್ ಸ್ಮಿತ್ ಅವರು ಇತ್ತೀಚಿಗೆ ತಮ್ಮ ಅದ್ಭುತ ಬೌಲಿಂಗ್ ದಾಳಿ ಮೂಲಕ ಎಲ್ಲರ ಚಿತ್ತ ಕದ್ದಿದ್ದಾರೆ. ಮೂರು ಸ್ವರೂಪಗಳಿಯೂ ನ್ಯೂಜಿಲೆಂಡ್ ತಂಡದ ಪ್ರಮುಖ ಬೌಲರ್‌ಗಳಾಗಿ ಗುರುತಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್ ತಂಡಕ್ಕೆ ಇತ್ತೀಚೆಗೆ ವೈಟ್-ಬಾಲ್ ನಾಯಕನಾಗಿ ಮಿಚೆಲ್ ಸ್ಯಾಂಟ್ನರ್ ನೇಮಕಗೊಂಡಿದ್ದಾರೆ. ಮಿಚೆಲ್ ಸ್ಯಾಂಟ್ನರ್ ನಾಯಕನಾಗಿ ತನ್ನ ಮೊದಲ ಐಸಿಸಿ ಟೂರ್ನಿಯನ್ನು ಆಡಲು ಉತ್ಸಾಹಕರಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಹಿರಿಯ ಆಟಗಾರರಾದ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಕೂಡ ಸ್ಥಾನ ಪಡೆದಿದ್ದಾರೆ.

ತಂಡದ ದೊಡ್ಡ ಶಕ್ತಿ

ಟಾಮ್ ಲ್ಯಾಥಮ್ ಸ್ಪೋಟಕ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡಲಿದ್ದಾರೆ. ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ದೊಡ್ಡ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗವು ಅನುಭವಿ ವೇಗದ ಬೌಲರ್‌ಗಳಾದ ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗುಸನ್ ಅವರನ್ನು ಒಳಗೊಂಡಿದೆ. ಅಲ್ಲದೆ, ಜಾಕೋಬ್ ಡಫಿಯನ್ನು ಸ್ಟ್ಯಾಂಡ್‌ಬೈ ಆಟಗಾರನಾಗಿ ಇರಿಸಲಾಗಿದೆ. ಸ್ಯಾಂಟ್ನರ್ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದು, ಇದರಲ್ಲಿ ಆಲ್‌ರೌಂಡರ್ ಗಳಾದ ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್ ಮತ್ತು ಮೈಕಲ್ ಬ್ರೇಸ್ ವೆಲ್ ಅವರ ಬೆಂಬಲ ಪ್ರಮುಖವಾಗಿರಲಿದೆ. ಡೆವೊನ್ ಕಾನ್ವೆ ಮತ್ತು ವಿಲ್ ಯಂಗ್ ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟರ್‌ಗಳಾಗಿದ್ದರೆ, ಡೇರಿಲ್ ಮಿಚೆಲ್ ಮತ್ತು ಮಾರ್ಕ್ ಚಾಪ್‌ಮನ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ.

ನ್ಯೂಜಿಲೆಂಡ್ ತಂಡ

ಮಿಚೆಲ್ ಸ್ಯಾಂಟ್ನರ್ (ನಾಯಕ), ವಿಲ್ ಯಂಗ್, ಡೆವೊನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್ವೆಲ್, ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಬೆನ್ ಸಿಯರ್ಸ್, ವಿಲ್ ಒ'ಬ್ರಿಯೆನ್ .

Story first published: Sunday, January 12, 2025, 10:35 [IST]
Other articles published on Jan 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+