Rishabh Pant: ಟೀಮ್ ಇಂಡಿಯಾ ಫ್ಯಾನ್ಸ್‌ಗೆ ಟೆಕ್ಷನ್; ಅಭ್ಯಾಸದ ವೇಳೆ ರಿಷಭ್ ಪಂತ್‌ಗೆ ಗಾಯ
ಭಾರತ ಕ್ರಿಕೆಟ್ ತಂಡ ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು 2013 ರಲ್ಲಿ ಗೆದ್ದಿತು. ಎಂಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿತು. ಅಂದಿನಿಂದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಫೆಬ್ರವರಿ 19 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲ್ಲಲು ರೋಹಿತ್ ಶರ್ಮಾ ಪಡೆ ದುಬೈ ತಲುಪಿದ್ದು, ಅಲ್ಲಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ.
ಫೆಬ್ರವರಿ 16 ರಂದು, ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಟೆಕ್ಷನ್ ತರಿಸಿದೆ.

ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ನೇತೃತ್ವದಲ್ಲಿ ನಡೆದ ಅಭ್ಯಾಸ ಸಮಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಗಾಯಗೊಂಡಿದ್ದಾರೆ. ಈ ವೇಳೆ ಪಂತ್ ಮೊಣಕಾಲಿಗೆ ಗಾಯವಾಗಿದೆ. ಅಪಘಾತದ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡು ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಸ್ಥಳದಲ್ಲಿ ಪಂತ್ ಅವರಿಗೆ ಮತ್ತೊಮ್ಮೆ ಗಾಯವಾಗಿದೆ. ಡಿಸೆಂಬರ್ 31, 2022 ರಂದು, ಪಂತ್ ಚಾಲನೆ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಯಿತು.
ದುಬೈನ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಮಾಡುವಾಗ ರಿಷಭ್ ಪಂತ್ ಅವರ ಎಡ ಮೊಣಕಾಲಿಗೆ ಗಾಯವಾಗಿತ್ತು. ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದ ನೆಟ್ಸ್ ಪಕ್ಕದಲ್ಲಿಯೇ ಅವರು ನಿಂತಿದ್ದರು. ಪಾಂಡ್ಯ ಹೊಡೆದ ಚೆಂಡು ಪಂತ್ ಅವರ ಮೊಣಕಾಲಿಗೆ ತಗುಲಿತು. ಚೆಂಡು ತಗುಲಿದ ತಕ್ಷಣ, ಪಂತ್ ನೋವಿನಿಂದ ನರಳುತ್ತಾ ನೆಲಕ್ಕೆ ಬಿದ್ದರು. ನಂತರ ವೈದ್ಯಕೀಯ ತಂಡವು ಅವರಿಗೆ ಚಿಕಿತ್ಸೆ ನೀಡಿತು.
ವಿಡಿಯೋದಲ್ಲಿ ಪಂತ್ ತುಂಬಾ ನೋವಿನಿಂದ ಬಳಲುತ್ತಿರುವುದು ಕಂಡುಬಂದಿದೆ. ಇದಾದ ನಂತರ, ರಿಷಭ್ ಪಂತ್ ಅವರಿಗೆ ಚಿಕಿತ್ಸೆ ನೀಡಲಾಯಿತು. ಬಳಿಕ ಅವರು ಮತ್ತೆ ಅಭ್ಯಾಸ ಮಾಡಲು ಪ್ರಾರಂಭಿಸಿದರು. ರಿಷಭ್ ಪಂತ್ ಗಾಯದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ರಿಷಭ್ ಈ ಟೂರ್ನಿಯಿಂದ ಹೊರಬಿದ್ದರೆ, ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ.
ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಿರುವ 15 ಸದಸ್ಯರ ಭಾರತ ತಂಡದಲ್ಲಿ ಕೆಎಲ್ ರಾಹುಲ್ ಜೊತೆಗೆ ಪಂತ್ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿದ್ದಾರೆ. ಕೆಎಲ್ ರಾಹುಲ್ ವಿಕೆಟ್ ಕೀಪರ್-ಬ್ಯಾಟರ್ ಆಗಿ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಹೆಡ್‌ಕೋಚ್ ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications