For Quick Alerts
ALLOW NOTIFICATIONS  
For Daily Alerts
 

Champions Trophy: ಭಾರತ ತಂಡಕ್ಕೆ ಸ್ಟಾರ್ ಆಲ್‌ರೌಂಡರ್ ಎಂಟ್ರಿ

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದೆ. ಎಲ್ಲಾ ತಂಡಗಳು ಈ ಮೆಗಾ ಟೂರ್ನಿಗೆ ಸಿದ್ಧವಾಗುತ್ತಿವೆ. ತಂಡಗಳನ್ನು ಬದಲಾಯಿಸಲು ಕೊನೆಯ ದಿನಾಂಕವೂ ಹತ್ತಿರ ಬಂದಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾದಲ್ಲಿ ಅಪಾಯಕಾರಿ ಆಲ್‌ರೌಂಡರ್‌ನನ್ನು ಸೇರಿಸಿಕೊಳ್ಳಬಹುದು. ಕಳೆದ ತಿಂಗಳು ಬಿಸಿಸಿಐ ಟೀಮ್ ಇಂಡಿಯಾ ತಂಡವನ್ನು ಘೋಷಿಸಿತ್ತು. ಅದರಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ಗೆ ಸ್ಥಾನ ಸಿಕ್ಕಿರಲಿಲ್ಲ. ಆದರೆ ತಂಡದಲ್ಲಿನ ಅಂತಿಮ ಬದಲಾವಣೆಗಳಿಗೆ ಈಗ ಕೆಲವೇ ಗಂಟೆಗಳು ಉಳಿದಿವೆ. ಇಂತಹ ಸಂದರ್ಭದಲ್ಲಿ ದೇಶೀಯ ಪ್ರದರ್ಶನವನ್ನು ಪರಿಗಣಿಸಿ, ಈ ಆಲ್‌ರೌಂಡರ್‌ಗೆ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ.

ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರದರ್ಶನದಿಂದ ಆಯ್ಕೆದಾರರ ತಲೆನೋವನ್ನು ಹೆಚ್ಚಿಸಿರುವ ಶಾರ್ದೂಲ್ ಠಾಕೂರ್ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ರಣಜಿ ಟ್ರೋಫಿಯಲ್ಲಿ ಇದುವರೆಗೆ ಶಾರ್ದೂಲ್ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ.

ICC Champions Trophy 2025 Shardul Thakur entry for team India

ಶಾರ್ದೂಲ್ 2023 ರ ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಆದರೆ ಈ ಬಾರಿ ಅವರನ್ನು ಐಸಿಸಿ ಟೂರ್ನಿಗೆ ಆಯ್ಕೆ ಮಾಡಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಶಾರ್ದೂಲ್ ಆಯ್ಕೆಯಾಗಿರಲಿಲ್ಲ. ಆದರೆ ಇದರ ಹೊರತಾಗಿಯೂ ಅವರು ಬಿಸಿಸಿಐನಿಂದ ಇನ್ನೂ ಭರವಸೆ ಹೊಂದಿದ್ದಾರೆ. ಇದಕ್ಕೆ ಅವರು ದೇಶೀಯ ಕ್ರಿಕೆಟ್‌ನಲ್ಲಿ ನೀಡಿರುವ ಪ್ರದರ್ಶನ.

33 ವರ್ಷದ ಶಾರ್ದೂಲ್ ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಮುಂಬೈ ಪರ ಅತಿ ಹೆಚ್ಚು ರನ್ ಗಳಿಸಿದ ಐದನೇ ಆಟಗಾರನಾಗಿದ್ದಾರೆ. ಅವರು ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 44.00 ರ ಸರಾಸರಿಯಲ್ಲಿ 396 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ.

ಶಾರ್ದೂಲ್ ಬೌಲಿಂಗ್‌ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದು, 21.10 ಸರಾಸರಿಯಲ್ಲಿ 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹರಿಯಾಣ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ಮೂರನೇ ದಿನವಾದ ಸೋಮವಾರ ಅವರು ಆರು ವಿಕೆಟ್ ಕಬಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಶಾರ್ದೂಲ್ ಹೇಳಿದ್ದೇನು?

ನೀವು ಆಟವಾಡದೇ ಮನೆಯಲ್ಲಿ ಸುಮ್ಮನೆ ಕುಳಿತಿರುವಾಗ, ಅದರ ಬಗ್ಗೆ ಹೆಚ್ಚು ಯೋಚಿಸುತ್ತೀರಿ. ಆದರೆ ಒಮ್ಮೆ ನಾನು ಮೈದಾನಕ್ಕೆ ಕಾಲಿಟ್ಟರೆ, ನನ್ನ ಸಂಪೂರ್ಣ ಗಮನ ಪಂದ್ಯದ ಮೇಲಿರುತ್ತದೆ. ಅದು ಕ್ಲಬ್ ಕ್ರಿಕೆಟ್ ಆಗಿರಲಿ, ರಣಜಿ ಟ್ರೋಫಿ ಆಗಿರಲಿ, ಐಪಿಎಲ್ ಆಗಿರಲಿ ಅಥವಾ ಭಾರತಕ್ಕಾಗಿ ಆಡುತ್ತಿರಲಿ. ನನಗೆ ಪ್ರತಿಯೊಂದು ಕ್ರಿಕೆಟ್ ಪಂದ್ಯವೂ ಒಂದೇ ಆಗಿರುತ್ತದೆ. ಅದು ಯಾವುದೇ ಮಟ್ಟದಲ್ಲಿದ್ದರೂ ಸಹ ಎಂದು ಶಾರ್ದೂಲ್ ಹೇಳಿದ್ದಾರೆ.

ನಾನೂ ಸ್ಪರ್ಧಿ

ಚಾಂಪಿಯನ್ಸ್ ಟ್ರೋಫಿ ಬಗ್ಗೆ ಮಾತನಾಡಿರುವ ಶಾರ್ದೂಲ್, 'ಹೌದು, ಖಂಡಿತ ಚಾಂಪಿಯನ್ಸ್ ಟ್ರೋಫಿ ಭಾರತ ತಂಡಕ್ಕೆಡ ನಾನು ಸ್ಪರ್ಧಿ. ಮುಂದಿನ ಹಂತವೆಂದರೆ ತಂಡದಲ್ಲಿ ನಿಮ್ಮ ಸ್ಥಾನವನ್ನು ಗಳಿಸುವುದು ಮತ್ತು ಆಯ್ಕೆಯಾಗುವುದು. ಅದು ಯಾವಾಗಲೂ ಗುರಿಯಾಗಿದೆ. ನಾನು ಈಗ ರಣಜಿ ಟ್ರೋಫಿ ಆಡುತ್ತಿದ್ದೇನೆ. ದೇಶಕ್ಕಾಗಿ ಆಡಲು ಪ್ರೇರಣೆಯೇ ನನ್ನನ್ನು ಮುಂದುವರಿಸಿಕೊಂಡು ಹೋಗುತ್ತದೆ. ಆ ಉತ್ಸಾಹ, ಬೆಂಕಿ ಎಂದಿಗೂ ಆರುವುದಿಲ್ಲ ಎಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಇಂಗಿತವನ್ನು ಶಾರ್ದೂಲ್ ಹೊರ ಹಾಕಿದ್ದಾರೆ.

Story first published: Tuesday, February 11, 2025, 13:36 [IST]
Other articles published on Feb 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+