For Quick Alerts
ALLOW NOTIFICATIONS  
For Daily Alerts
 

Champions Trophy 2025: ಗೋಲ್ಡನ್‌ ಬ್ಯಾಟ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಐವರು ಬ್ಯಾಟರ್ಸ್‌

ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಮಿಂಚಲು ಸ್ಟಾರ್‌ ಆಟಗಾರರು ಸಹ ತಯಾರಾಗಿದ್ದಾರೆ. ಈ ವೇಳೆ ಐಸಿಸಿ ಟೂರ್ನಿಯಲ್ಲಿ ನೀಡುವ ವಿಶೇಷ ಪ್ರಶಸ್ತಿಯ ಮೇಲೆ ವಿಶ್ವದ ಕೆಲವು ದಿಗ್ಗಜ ಆಟಗಾರರು ಕಣ್ಣು ನೆಟ್ಟಿದ್ದಾರೆ. ಹಾಗಿದ್ದರೆ ಆ ಪ್ರಶಸ್ತಿ ಯಾವುದು ಯಾವೆಲ್ಲಾ ಆಟಗಾರರು ಆ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿದ್ದಾರೆ ಎಂಬ ಬಗ್ಗೆ ವರದಿ ಇಲ್ಲಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ವೇಳೆ ಅತಿ ಹೆಚ್ಚು ರನ್ ಗಳಿಸಿದ ಸಾಧಕರಿಗೆ ಗೋಲ್ಡನ್‌ ಬ್ಯಾಟ್ ಅವಾರ್ಡ್‌ ನೀಡುತ್ತದೆ. ಈ ಪ್ರಶಸ್ತಿಯನ್ನು ಪಡೆಯಲೇ ಬೇಕು ಎಂದು ಹಲವು ಆಟಗಾರರು ಕನಸು ಕಾಣುತ್ತಿರುತ್ತಾರೆ. ಏಳು ವರ್ಷಗಳ ಬಳಿಕ ಆರಂಭವಾಗಲಿರುವ ಚಾಂಪಿಯನ್ಸ್‌ ಟ್ರೋಫಿ, ಮತ್ತೆ ಆಟಗಾರರ ಕನಸಿಗೆ ಪುಷ್ಠಿ ನೀಡಿದೆ. ಪಾಕ್‌ ಹಾಗೂ ದುಬೈನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಸಾಧ್ಯತೆ ಇರುವ ಐದು ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.

ICC Champions Trophy 2025 Top 5 Contenders for the Golden Bat Award

ವಿರಾಟ್ ಕೊಹ್ಲಿ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ವಿರಾಟ್ ಕೊಹ್ಲಿ, ಸಹ ಈ ಬಾರಿ ಗೋಲ್ಡನ್‌ ಬ್ಯಾಟ್‌ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರು ರನ್‌ ಬರ ಎದುರಿಸುತ್ತಿದ್ದು, ಇತ್ತೀಚಿಗೆ ಅಹಮದಾಬಾದ್‌ನಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ಅಲ್ಲದೆ ಈ ಸ್ಟಾರ್ ಪ್ಲೇಯರ್‌ ಐಸಿಸಿ ಬಿಗ್ ಇವೆಂಟ್‌ಗಳಲ್ಲಿ ಇವರು ಸ್ಥಿರ ಪ್ರದರ್ಶನ ನೀಡುವ ಆಟಗಾರ. ವಿರಾಟ್‌ ಇನ್ನು ಈ ಟೂರ್ನಿಯಲ್ಲಿ 200ಕ್ಕೂ ಹೆಚ್ಚು ರನ್‌ ಬಾರಿಸಿದರೆ, ಚಾಂಪಿಯನ್ಸ್‌ ಟ್ರೋಫಿಯಲ್ಲಿ ಗರಿಷ್ಠ ರನ್‌ ಸಾಧಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ರೋಹಿತ್ ಶರ್ಮಾ

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸಹ ಈ ಟೂರ್ನಿಯಲ್ಲಿ ಗರಿಷ್ಠ ರನ್‌ ಕಲೆ ಹಾಕುವತ್ತ ದೃಷ್ಠಿ ನೆಟ್ಟಿದ್ದಾರೆ. ಇವರು ಸದ್ಯ ಫಾರ್ಮ್‌ಗೆ ಮರಳಿದ್ದಾರೆ. ರೋಹಿತ್‌ ಶರ್ಮಾ ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಲಯಕ್ಕೆ ಮರಳಿದ್ದಾರೆ. ಇವರು ಸಹ ಬಿಗ್ ಮ್ಯಾಚ್ ಪ್ಲೇಯರ್‌. ಇವರು ಹಲವು ಐಸಿಸಿ ಟೂರ್ನಿಗಳಲ್ಲಿ ತಮ್ಮ ಕ್ಷಮತೆಯನ್ನು ಪ್ರದರ್ಶಿಸಿದ ಆಟಗಾರ. ಹೀಗಾಗಿ ಇವರು ಸಹ ಈ ಪ್ರಶಸ್ತಿಯ ಮೇಲೆ ಒಂದು ಕಣ್ಣು ನೆಟ್ಟಿದ್ದಾರೆ.

ICC Champions Trophy 2025 Top 5 Contenders for the Golden Bat Award

ಟ್ರಾವಿಸ್ ಹೆಡ್

ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಆಟಗಾರರ ಪಟ್ಟಿಯಲ್ಲಿ ಟ್ರಾವಿಸ್‌ ಹೆಡ್‌ಗೂ ಸ್ಥಾನ. ಇವರು ಎದುರಾಳಿಗಳ ಹೆಡೆ ಮುರಿ ಕಟ್ಟಿ ರನ್‌ ಕಲೆ ಹಾಕಬಲ್ಲ ಕ್ಷಮತೆಯನ್ನು ಹೊಂದಿರುವ ಪ್ಲೇಯರ್. ಇವರು ಬಿಗ್‌ ಮ್ಯಾಚ್‌ಗಳಲ್ಲಿ ಆಡುವ ಆಟಗಾರ. ಆಸ್ಟ್ರೇಲಿಯಾ ಚಾಂಪಿಯನ್ಸ್‌ ಟ್ರೋಫಿ ಗೆಲುವು ಸಾಧಿಸಬೇಕಾದಲ್ಲಿ ಈ ಪ್ಲೇಯರ್ ಆಟ ಬಹಳ ಮುಖ್ಯ.

ಬಾಬರ್ ಅಜಮ್‌

ಪಾಕಿಸ್ತಾನದ ಸೂಪರ್‌ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಪ್ಲೇಯರ್‌ ಬಾಬರ್ ಅಜಮ್‌. ಸದ್ಯ ಇವರು ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರಬಹುದು. ಆದರೆ ಐಸಿಸಿ ಟೂರ್ನಿಗಳಲ್ಲಿ ರನ್ ಬಾರಿಸಿದ ಅಪಾರ ಅನುಭವ ಇವರಿಗೆ ಇದೆ. ಅಲ್ಲದೆ ಒತ್ತಡವನ್ನು ಮೆಟ್ಟಿನಿಂತು ತಂಡಕ್ಕಾಗಿ ಆಡಬಲ್ಲ ಪ್ಲೇಯರ್‌. ತಮ್ಮ ಮೇಲಿನ ಒತ್ತಡವನ್ನು ಎದುರಾಳಿ ತಂಡದ ಮೇಲೆ ಶಿಫ್ಟ್ ಮಾಡುವ ಕ್ಷಮತೆ ಹೊಂದಿರುವ ಆಟಗಾರ.

ಜೋ ರೂಟ್

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಬಳಿಕ ಏಕದಿನ ಪಂದ್ಯಗಳಿಂದ ದೂರ ಉಳಿದಿದ್ದ, ಇಂಗ್ಲೆಂಡ್ ತಂಡದ ಜೋ ರೂಟ್‌ ಮತ್ತೆ ವೈಟ್‌ ಬಾಲ್‌ ಕ್ರಿಕೆಟ್‌ ಆಡಲು ಆರಂಭಿಸಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿರುವ ರೂಟ್‌ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಶಕ್ತಿ ಇದೆ ಎಂದು ಹೇಳಿದ್ದಾರೆ. ಇಂಗ್ಲೆಂಡ್ ಈ ಬಾರಿ ಚಾಂಪಿಯನ್ಸ್‌ ಟ್ರೋಫಿ ಪಟ್ಟಕ್ಕೇರಲು ಈ ಪ್ಲೇಯರ್‌ ಪರ್ಫಾಮೆನ್ಸ್‌ ತುಂಬಾ ಇಂಪಾರ್ಟೆಂಟ್‌.

Story first published: Saturday, February 15, 2025, 11:32 [IST]
Other articles published on Feb 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+