For Quick Alerts
ALLOW NOTIFICATIONS  
For Daily Alerts
 

Virat Kohli: ದುಬೈನಲ್ಲಿ ಅಭಿಮಾನಿಗಳಿಗೆ ವಿರಾಟ್ ದರ್ಶನ

ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅಭಿಮಾನಿಗಳಿದ್ದಾರೆ. ವಿರಾಟ್ ಎಲ್ಲಿಗೆ ಹೋದರೂ ಅಭಿಮಾನಿಗಳು ಅವರನ್ನು ಸುತ್ತುವರೆದಿರುತ್ತಾರೆ. ಅವರು ಪ್ರಸ್ತುತ ಚಾಂಪಿಯನ್ಸ್ ಟ್ರೋಫಿಗಾಗಿ ಟೀಮ್ ಇಂಡಿಯಾ ಜೊತೆ ದುಬೈನಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಭಾರತ ಅಲ್ಲಿಗೆ ಹೋಗಿದೆ. ಭಾರತ ತಂಡದ ಮೊದಲ ಪಂದ್ಯ ಫೆಬ್ರವರಿ 20 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿದೆ. ವಿರಾಟ್ ಅದಕ್ಕೂ ಮೊದಲು ತರಬೇತಿಯನ್ನು ಪ್ರಾರಂಭಿಸಿದ್ದಾರೆ.

ದುಬೈನಲ್ಲಿ ಕೆಲವು ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ದರ್ಶನವಾಗಿದೆ. ಎಲ್ಲರಿಗೂ ಆಶ್ಚರ್ಯವಾಗುವಂತೆ, ಅವರು ಬಸ್ಸಿನಿಂದ ಇಳಿದು ಆಟೋಗ್ರಾಫ್ ನೀಡಿದ್ದಾರೆ. ಕೊಹ್ಲಿ ಆಟೋಗ್ರಾಫ್ ಪಡೆದ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ICC Champions Trophy 2025 Virat Kohli meets fans in Dubai

ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಮುಗಿಸಿ ವಿರಾಟ್ ಹೋಟೆಲ್‌ಗೆ ಹಿಂತಿರುಗುತ್ತಿದ್ದರು. ಅವರು ಬಸ್ ತಲುಪಿದ ತಕ್ಷಣ, ಅಭಿಮಾನಿಗಳು ಅವರ ಹೆಸರನ್ನು ಜೋರಾಗಿ ಕೂಗಲು ಪ್ರಾರಂಭಿಸಿದರು. ಆದರೆ ವಿರಾಟ್ ತಮ್ಮ ಬ್ಯಾಟ್ ತೆಗೆದುಕೊಂಡು ನೇರವಾಗಿ ಬಸ್ಸಿನತ್ತ ಹೆಜ್ಜೆ ಹಾಕಿದರು. ಇದು ಅಭಿಮಾನಿಗಳಳಿಗೆ ಬೇಸರ ತರಿಸಿತು. ಆದರೆ, ತಕ್ಷಣ ವಿರಾಟ್ ಕೊಹ್ಲಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ವಿರಾಟ್ ಕೊಹ್ಲಿ ಕೆಲವು ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ್ದಾರೆ.

ಪುಟ್ಟ ಅಭಿಮಾನಿಯೊಬ್ಬ ತಮ್ಮ ಬ್ಯಾಟ್‌ಗೆ ವಿರಾಟ್ ಕೊಹ್ಲಿಯಿಂದ ಆಟೋಗ್ರಾಫ್ ಪಡೆದಿದ್ದಾರೆ. ತನ್ನ ನೆಚ್ಚಿನ ಆಟಗಾರನನ್ನು ಭೇಟಿಯಾದ ನಂತರ ಯುವ ಅಭಿಮಾನಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ವಿಡಿಯೋದಲ್ಲಿ ಕೊಹ್ಲಿ ಸಹಿ ಮಾಡಿದ ಬ್ಯಾಟ್ ಅನ್ನು 'ಫ್ರೇಮ್' ಮಾಡುವುದಾಗಿ ಹೇಳಿದ್ದಾನೆ. ಕೊಹ್ಲಿ ಆಟ್ರೋಗ್ರಾಫ್ ಆ ಪುಟ್ಟ ಅಭಿಮಾನಿಯ ಕಣ್ಣಲ್ಲಿ ಆನಂದ ಭಾಷ್ಮ ತರಿಸಿದೆ . ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಆತಿಥೇಯ ಪಾಕಿಸ್ತಾನದೊಂದಿಗೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಈ ಮೆಗಾ ಟೂರ್ನಿಯನ್ನು ಪಾಕಿಸ್ತಾನ ಆಯೋಜಿಸುತ್ತಿದೆ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುತ್ತಿಲ್ಲ. ಭದ್ರತಾ ಕಾರಣಗಳಿಂದಾಗಿ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಫೆಬ್ರವರಿ 20 ರಂದು ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಆಡಲಿದೆ. ಇದಾದ ನಂತರ 23 ರಂದು ಪಾಕಿಸ್ತಾನ ವಿರುದ್ಧ ಮತ್ತು ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಗುಂಪ ಹಂತದ ಪಂದ್ಯಗಳನ್ನು ಆಡಲಿದೆ.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ ಮತ್ತು ವರುಣ್ ಚಕ್ರವರ್ತಿ.

Story first published: Monday, February 17, 2025, 13:34 [IST]
Other articles published on Feb 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+