ಏಪ್ರಿಲ್ 05ರಿಂದ ಚಾಂಪಿಯನ್ಸ್ ಟ್ರೋಫಿ ಟಿಕೆಟ್ ಸೇಲ್ ಶುರು!
ಲಂಡನ್, ಏಪ್ರಿಲ್ 05: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ 2017ರ ಎಲ್ಲಾ 15 ಪಂದ್ಯಗಳ ಟಿಕೆಟ್ ಗಳ ಮಾರಾಟ ಏಪ್ರಿಲ್ 05ರಿಂದ ಆರಂಭವಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ.
ಸುಮಾರು 34,000 ಟಿಕೆಟ್ ಗಳು ಮಾರಾಟಕ್ಕೆ ಲಭ್ಯವಿದೆ.ಜೂನ್ 01ರಂದು ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ನಡುವೆ ಓವಲ್ ಮೈದಾನದಲ್ಲಿ ನಡೆಯುವ ಪಂದ್ಯದೊಂದಿಗೆ ಟೂರ್ನಮೆಂಟ್ ಗೆ ಚಾಲನೆ ಸಿಗಲಿದೆ.[ಭಾರತ vs ಪಾಕಿಸ್ತಾನ ಕ್ರಿಕೆಟ್ ಕದನ ನೋಡಲು ತಯಾರಾಗಿ!]
ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯಲಿದ್ದು, ಭಾರತೀಯ ಕಾಲಮಾನ ಪ್ರಕಾರ ಕ್ರಮವಾಗಿ ಹಗಲು ಪಂದ್ಯ ಮಧ್ಯಾಹ್ನ 3 ಗಂಟೆ ಹಾಗೂ ಹಗಲು /ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ.

ಜೂನ್ 1 ರಿಂದ 18ರ ವರೆಗೆ 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 3 ಕ್ರಿಕೆಟ್ ಮೈದಾನಗಳಲ್ಲಿ ಈ ಪಂದ್ಯಗಳು ನಡೆಯಲಿವೆ.
ಇಂಗ್ಲೆಂಡ್ ನಲ್ಲಿ ನಡೆಯಲಿರುವ ಈ ಟೂರ್ನಿಯ ಪಂದ್ಯಗಳ ಟಿಕೆಟ್ ಗಳನ್ನು ಕಾಯ್ದಿರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ www.icc-cricket.com ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿತ್ತು.
ಭಾರತ ಹಾಗೂ ಪಾಕಿಸ್ತಾನ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಹಾಗೂ ಫೈನಲ್ ಪಂದ್ಯಗಳ ಟಿಕೆಟ್ ಗಳಿಗೆ ಭಾರಿ ಬೇಡಿಕೆ ಬಂದಿದೆ.
ಐಸಿಸಿ ತನ್ನ ವೆಬ್ ಸೈಟ್ ನಲ್ಲಿ 1,000 ಟಿಕೆಟ್ ಗಳನ್ನು ಮಾರಾಟಕ್ಕೆ ಬಿಟ್ಟಿದೆ. ಫ್ಯಾನ್ಸ್ ಗಳಿಗೆ ಟಿಕೆಟ್ ಮರು ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications