For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ಅನುಪಸ್ಥಿತಿಯಲ್ಲಿ ಟಿ20 ವಿಶ್ವಕಪ್ ಮರುವೇಳಾಪಟ್ಟಿ ಚರ್ಚಿಸಿದ ಐಸಿಸಿ

ICC committee debates T20 WC rescheduling in BCCIs absence

ನವದೆಹಲಿ, ಮೇ 25: ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ ಮತ್ತು ನವೆಂಬರ್ ಮಧ್ಯೆ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ಮುಂದೂಡಲ್ಪಡುವುದರಲ್ಲಿದೆ. ಆದರೆ ಈಗ ಪ್ರಶ್ನೆ ಎದ್ದಿರೋದು ಪ್ರತಿಷ್ಠಿತ ಟೂರ್ನಿ ಮುಂದೂಡಿದರೆ ಮತ್ತೆ ನಡೆಸೋದು ಯಾವಾಗ ಅಂತ. 2021ರಿಂದ 2023ರ ಮಧ್ಯೆ ಟೂರ್ನಿ ನಡೆಸುವುದಾದರೂ ಚರ್ಚಿಸಿ ಆ ಬಳಿಕ ವೇಳಾಪಟ್ಟಿ ನಿರ್ಧರಿಸಬೇಕಿದೆ.

2020ರ ಟಿ20 ವಿಶ್ವಕಪ್ ಟೂರ್ನಿ ಮುಂದೂಡಿರೋದು ನಿಜ, ಆದರೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ ಎಂದು ಐಸಿಸಿ ಮೂಲ ಈ ಮೊದಲೇ ತಿಳಿಸಿತ್ತು. ಅದಾಗಿದ್ದೇ ತಡ, ಬಲಿಷ್ಠ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಕಮಿಟಿಗಳು ಐಸಿಸಿ ಸಿಇಒ ಮನು ಸೌಹಾನಿ ಜೊತೆಗೆ ಟಿಲಿಕಾನ್ಫರೆನ್ಸ್‌ನಲ್ಲಿ ಮಾತುಕತೆ ನಡೆಸಿದ್ದವು.

ಅಚ್ಚರಿಯೆಂದರೆ, ಈ ಮಹತ್ವದ ಮಾತುಕತೆಯಲ್ಲಿ ಬಲಿಷ್ಠ ಕ್ರಿಕೆಟ್ ಬೋರ್ಡ್‌, ಬಿಸಿಸಿಐ ಪಾಲ್ಗೊಂಡಿಲ್ಲ. 'ಮೊದಲ ಸಲಹೆಯೆಂದರೆ ಈ ವರ್ಷದ ಟಿ20 ಟೂರ್ನಿಯನ್ನು ಮುಂದಿನ ವರ್ಷ ಫೆಬ್ರವರಿ, ಮಾರ್ಚ್‌ಗೆ ಮುಂದೂಡೋದು. ಆದರೆ ಇದು ಸಾಧ್ಯವಿಲ್ಲ. ಆ ಬಳಿಕ 2021ರಲ್ಲಿ ಬೇರೆ ಯಾವಾಗಾದರೂ ಟೂರ್ನಿ ಆಯೋಜಿಸುವಂತೆ ಆಸ್ಟ್ರೇಲಿಯಾಕ್ಕೆ ಸಲಹೆ ನೀಡಲಾಯಿತು,' ಎಂದು ಬೆಳವಣಿಗೆಯ ಬಗ್ಗೆ ಮೂಲವೊಂದು ಮಾಹಿತಿ ನೀಡಿದೆ.

'ಅಲ್ಲಿ ಬಂದ ಮತ್ತೊಂದು ಸಲಹೆಯೆಂದರೆ ಟೂರ್ನಿಯನ್ನು 2022ರಲ್ಲಿ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತದಲ್ಲಿ ಆಯೋಜಿಸುವುದು' ಎಂದು ಕಾನ್ಫರೆನ್ಸ್‌ನಲ್ಲಿ ನಡೆದ ಮಾತುಕತೆ ಬಗ್ಗೆ ಮೂಲ ಮಾಹಿತಿ ಒದಗಿಸಿದೆ. ಆದರೆ ಈ ಸಲಹೆಗಳಿಗೆಲ್ಲ ಪಿಸಿಬಿ ಅಧ್ಯಕ್ಷ ಎಹ್ಸಾನ್ ಮನಿ ಅವರಿಂದ ಆಕ್ಷೇಪ ಕೇಳಿಬಂದಿದೆ ಎಂದು ತಿಳಿದುಬಂದಿದೆ. ಟಿ20 ಮರು ವೇಳಾಪಟ್ಟಿಗೆ ಸಂಬಂಧಿಸಿ ಇನ್ನಷ್ಟೇ ಅಂತಿಮ ನಿರ್ಧಾರ ಪ್ರಕಟವಾಗಬೇಕಿದೆ.

Story first published: Monday, May 25, 2020, 21:05 [IST]
Other articles published on May 25, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+