For Quick Alerts
ALLOW NOTIFICATIONS  
For Daily Alerts
 

ಐಸಿಸಿ ಕ್ರಿಕೆಟ್‌ ವಿಶ್ವಕಪ್‌ 2019: ಎಲ್ಲ ತಂಡಗಳ ಸಂಪೂರ್ಣ ವಿವರ ಇಲ್ಲಿದೆ

wc trophy 2019

ಬೆಂಗಳೂರು, ಏಪ್ರಿಲ್‌ 20: ಕ್ರಿಕೆಟ್‌ ಪ್ರಿಯರು ತುದಿಗಾಲಲ್ಲಿ ನಿಂತು ಎದುರು ನೋಡುತ್ತಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಮೇ 30ರಂದು ಇಂಗ್ಲೆಂಡ್‌ನಲ್ಲಿ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.

ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಜಾಗತಿಕ ಕ್ರಿಕೆಟ್‌ ಸಮರದ 12ನೇ ಆವೃತ್ತಿಯು ಸಾಕಷ್ಟು ಕುತೂಹಲಗಳನ್ನು ಹಿಡಿದಿಟ್ಟಿದೆ. ಇದೇ ಮೊದಲ ಬಾರಿ ಎಂಬಂತೆ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಎಲ್ಲಾ 10 ತಂಡಗಳು ಮೊದಲ ಸುತ್ತಿನಲ್ಲಿ ರೌಂಡ್‌ ರಾಬಿನ್‌ ಮಾದರಿಯಲ್ಲಿ ಸೆಣೆಸಾಡಲಿವೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ 5ನೇ ಬಾರಿ ವಿಶ್ವಕಪ್‌ ಆಯೋಜನೆಗೆ ಸಜ್ಜಾಗಿ ನಿಂತಿದ್ದು, 46 ದಿನಗಳ ಕಾಲ ಒಟ್ಟು 11 ನಗರಗಳಲ್ಲಿ ನಡೆಯಲಿರುವ ಟೂರ್ನಿಯಲ್ಲಿ48 ಪಂದ್ಯಗಳು ಜರುಗಲಿವೆ.

ಹಗಲು ನಡೆಯುವ ಪಂದ್ಯಗಳು ಭಾರತದಲ್ಲಿ ಮಧ್ಯಾಹ್ನ 2:30ರಿಂದ ನೇರ ಪ್ರಸಾರಗೊಳ್ಳಲಿದ್ದು, ಹೊನಲು ಬೆಳಕಿನ ಪಂದ್ಯಗಳು ಸಂಜೆ 5:30ರಿಂದ ನೇರ ಪ್ರಸಾರವಾಗಲಿವೆ. ಜುಲೈ 14ರಂದು ಇತಿಹಾಸ ಪ್ರಸಿದ್ದ ಹಾಗೂ ಕ್ರಿಕೆಟ್‌ ಕಾಶಿ ಎನಿಸಿರುವ ಲಾರ್ಡ್ಸ್ ಕ್ರೀಡಾಂಗಣ ಫೈನಲ್‌ ಪಂದ್ಯಕ್ಕೆ 5ನೇ ಬಾರಿ ಆತಿಥ್ಯ ವಹಿಸಲಿದೆ.

ಜುಲೈ 9ರಂದು ಓಲ್ಡ್‌ ಟ್ರಾಫರ್ಡ್‌ನಲ್ಲಿ ಮೊದಲ ಸೆಮಿಫೈನಲ್‌ ಪಂದ್ಯ ನಡೆಯಲಿದ್ದು, ಜುಲೈ 11ರಂದು ಎಜ್‌ಬಾಸ್ಟನ್‌ನಲ್ಲಿ 2ನೇ ಸೆಮಿಫೈನಲ್‌ ಜರುಗಲಿದೆ. ಸೆಮಿಫೈನಲ್‌ ಪಂದ್ಯಗಳಿಗೆ ಪ್ರತ್ಯೇಕ ಒಂದು ದಿನವನ್ನು ಕೂಡ ಕಾಯ್ದಿರಿಸಲಾಗಿದೆ.

ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳ ವಿವರ ಮುಂದಿದೆ...

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ

ಅನುಭವಿಗಳಾದ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ತಂಡಕ್ಕೆ ಮರಳಿರುವುದು ಆಸೀಸ್‌ನ ಬಲ ಹೆಚ್ಚುವಂತೆ ಮಾಡಿದೆ. ಬಾಲ್‌ ಟ್ಯಾಂಪರಿಂಗ್‌ ವಿವಾದಲ್ಲಿಈ ಇಬ್ಬರೂ ಆಟಗಾರರ ವಿರುದ್ಧ ಕ್ರಿಕೆಟ್‌ ಆಸ್ಟ್ರೇಲಿಯಾ 1 ವರ್ಷ ನಿಷೇಧ ಹೇರಿತ್ತು. ಇನ್ನು ಅನುಭವಿ ವೇಗಿ ಜಾಷ್‌ ಹೇಜಲ್‌ವುಡ್‌ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಪೀಟರ್‌ ಹ್ಯಾಂಡ್ಸ್‌ಕಾಂಬ್‌ ತಂಡದಿಂದ ಹೊರಬಿದ್ದಿದ್ದಾರೆ.

ಇನ್ನು ಆರೊನ್‌ ಫಿಂಚ್ ಸಾರಥ್ಯದ ಆಸ್ಟ್ರೇಲಿಯಾ ತಂಡ ಭರ್ಜರಿ ಲಯದಲ್ಲಿದ್ದು, ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ ಸರಣಿಗಳನ್ನು ಗೆದ್ದು ಅಬ್ಬರಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ಇಂಗ್ಲೆಂಡ್‌ ನೆಲದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

ತಂಡ ಇಂತಿದೆ: ಆರೊನ್‌ ಫಿಂಚ್‌ (ನಾಯಕ), ಉಸ್ಮಾನ್‌ ಖವಾಜ, ಡೇವಿಡ್‌ ವಾರ್ನರ್‌, ಸ್ಟೀವನ್‌ ಸ್ಮಿತ್‌, ಶಾನ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್‌), ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೇ ರಿಚರ್ಡ್‌ಸನ್‌, ನೇಥನ್‌ ಕೌಲ್ಟರ್‌ ನೈಲ್‌, ಜೇಸನ್‌ ಬೆಹ್ರೆನ್‌ಡಾರ್ಫ್‌, ನೇಥನ್‌ ಲಯಾನ್‌, ಆಡಮ್‌ ಝಾಂಪ.

ನ್ಯೂಜಿಲೆಂಡ್‌

ನ್ಯೂಜಿಲೆಂಡ್‌

ಬ್ಲ್ಯಾಕ್‌ ಕ್ಯಾಪ್ಸ್‌ ಖ್ಯಾತಿಯ ನ್ಯೂಜಿಲೆಂಡ್‌ ತಂಡ ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ 'ಡಾರ್ಕ್‌ ಹಾರ್ಸ್‌' ಎಂದು ಭಾರತ ತಂಡದ ಮಾಜಿ ದಿಗ್ಗಜ ಆಟಗಾರ ಸಚಿನ್‌ ತೆಂಡೂಲ್ಕರ್‌ ಹೇಳಿದ್ದಾರೆ. ಕೇನ್‌ ವಿಲಿಯಮ್ಸನ್‌ ನಾಯಕತ್ವದ ಕಿವೀಸ್‌ ಪಡೆ ಕಳೆದ ಆವೃತ್ತಿಯಲ್ಲಿ ರನ್ನರ್ಸ್ಅಪ್‌ ಸ್ಥಾನ ಪಡೆದಿತ್ತು.

ವಿಲಿಯಮ್ಸನ್‌ ಹೊರತಾಗಿ ಮಾರ್ಟಿನ್‌ ಗಪ್ಟಿಲ್‌, ರಾಸ್‌ ಟೇಲರ್‌ ಹಾಗೂ ಟಿಮ್‌ ಸೌಥೀ ತಂಡದಲ್ಲಿರುವ ಅನುಭವಿ ಆಟಗಾರರಾಗಿದ್ದಾರೆ. ಈ ಆಟಗಾರರ ಪ್ರದರ್ಶನದ ಮೇಲೆ ಕಿವೀಸ್‌ ಪಡೆಯ ಭವಿಷ್ಯ ನಿಂತಿದೆ ಎಂದರೆ ತಪ್ಪಾಗಲಾರದು. ಇನ್ನು ಗಾಯಾಳು ವಿಕೆಟ್‌ಕೀಪರ್‌ ಟಿಮ್‌ ಸೀಫರ್ಟ್‌ ಅವರ ಸ್ಥಾನದಲ್ಲಿ ಟಾಮ್‌ ಬ್ಲಂಡಲ್‌ ತಂಡ ಸೇರಿಕೊಂಡಿದ್ದು, ಪದಾರ್ಪಣೆಯ ತುಡಿತದಲ್ಲಿದ್ದಾರೆ.

ತಂಡ ಇಂತಿದೆ: ಕೇನ್‌ ವಿಲಿಯಮ್ಸನ್‌ (ನಾಯಕ), ಟಾಮ್‌ ಬ್ಲಂಡಲ್‌, ಟ್ರೆಂಟ್‌ ಬೌಲ್ಟ್‌, ಕಾಲಿನ್‌ ಡಿ'ಗ್ರ್ಯಾಂಡ್‌ ಹೋಮ್‌, ಲಾಕಿ ಫರ್‌ಗ್ಯೂಸನ್‌, ಮಾರ್ಟಿನ್‌ ಗಪ್ಟಿಲ್‌, ಮ್ಯಾಟ್‌ ಹೆನ್ರಿ, ಟಾಮ್‌ ಲೇಥಮ್‌(ವಿಕೆಟ್‌ಕೀಪರ್‌), ಕಾಲಿನ್‌ ಮನ್ರೊ, ಜಿಮ್ಮಿ ನೀಶಮ್‌, ಹೆನ್ರಿ ನಿಕೋಲ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಇಶ್‌ ಸೋಧಿ, ಟಿಮ್‌ ಸೌಥೀ, ರಾಸ್‌ ಟೇಲರ್‌.

ಟೀಮ್‌ ಇಂಡಿಯಾ

ಟೀಮ್‌ ಇಂಡಿಯಾ

ವಿರಾಟ್‌ ಕೊಹ್ಲಿ ಸಾರಥ್ರ್ಯದ ಮೆನ್‌ ಇನ್‌ ಬ್ಲೂ ಪಡೆ ಈ ಬಾರಿಯ ವಿಶ್ವಕಪ್‌ ಗೆಲ್ಲುವ ಹಾಟ್‌ ಫೇವರಿಟ್‌ ತಂಡ. 2015ರ ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿರುವ ಭಾರತ ಅತ್ಯಂತ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.

ವಿಶ್ವಕಪ್‌ಗೆ ಪ್ರಕಟಿಸಲಾಗಿರುವ 15 ಆಟಗಾರರ ಪಟ್ಟಿಯನ್ನು ಗಮನಿಸಿದರೆ ತಂಡ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ಎಲ್ಲಾ ಶಕ್ತಿಯನ್ನು ಹೊಂದಿದೆ ಎಂಬುದು ತಿಳಿಯುತ್ತದೆ. ಆದರೆ, ಇತ್ತೀಚೆಗೆ ತಾಯ್ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ ಸರಣಿ ಸೋತಿರುವುದು ತಂಡ ಆತ್ಮವಿಶ್ವಾಸವನ್ನು ಕೊಂಚ ಕುಗ್ಗಿಸಿರುತ್ತದೆ.

ಇನ್ನು ತಂಡದ ಆಯ್ಕೆ ವಿಚಾರದಲ್ಲಿ ರಿಷಭ್‌ ಪಂತ್‌ ಮತ್ತು ಅಂಬಾಟಿ ರಾಯುಡು ಅವರನ್ನು ಹೊರಗಿಟ್ಟಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆದರೂ, ಪ್ರಕಟಿಸಲಾಗಿರುವ ತಂಡ ವಿಶ್ವಕಪ್‌ ಗೆಲ್ಲುವ ಫೇವರಿಟ್‌ ಎಂದರೆ ತಪ್ಪಾಗಲಾರದು.

ತಂಡ ಇಂತಿದೆ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ವಿಜಯ್‌ ಶಂಕರ್‌, ಕೇದಾರ್‌ ಜಾಧವ್‌, ಎಂ.ಎಸ್‌ ಧೋನಿ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್‌, ಯುಜ್ವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ರವೀಂದ್ರ ಜಡೇಜಾ, ಹಾರ್ದಿಕ್‌ ಪಾಂಡ್ಯ.

ಇಂಗ್ಲೆಂಡ್‌

ಇಂಗ್ಲೆಂಡ್‌

ಐಯಾನ್‌ ಮಾರ್ಗನ್‌ ಸಾರಥ್ರ್ಯ ಆತಿಥೇಯ ಇಂಗ್ಲೆಂಡ್‌ ಕೂಡ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ಗಳಲ್ಲಿ ಒಂದು. ಏಕದಿನ ಕ್ರಿಕೆಟ್‌ನಲ್ಲಿ ನಂ.1 ತಂಡವಾಗಿರುವ ಇಂಗ್ಲೆಂಡ್‌ ತವರು ನೆಲದಲ್ಲಿ ಚೊಚ್ಚಲ ಬಾರಿ ವಿಶ್ವ ಕಪ್‌ ಗೆದ್ದು ಪ್ರಶಸ್ತಿ ಬರ ನೀಗಿಸಿಕೊಳ್ಳುವ ತುಡಿತದಲ್ಲಿದೆ.

ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎಲ್ಲದರಲ್ಲೂ ಸಮತೋಲನದಿಂದ ಕೂಡಿರುವ ಇಂಗ್ಲೆಂಡ್‌ ತವರು ನೆಲದ ಸ್ಥಿತಿಗತಿಗಳ ಲಾಭ ಪಡೆದು ವಿಶ್ವಕಪ್‌ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಆದರೆ, ಯುವ ವೇಗಿ ಜೋಫ್ರಾ ಅರ್ಚರ್‌ ಅವರನ್ನು ತಂಡ ಹೊರಗಿಟ್ಟಿರುವುದು ಅಚ್ಚರಿ ಮೂಡಿಸಿದೆ.

ತಂಡ ಇಂತಿದೆ: ಐಯಾನ್‌ ಮಾರ್ಗನ್‌ (ನಾಯಕ), ಜಾನಿ ಬೈರ್‌ಸ್ಟೋವ್‌, ಜೇಸನ್‌ ರಾಯ್‌, ಜೋ ರೂಟ್‌, ಐಯಾನ್‌ ಮಾರ್ಗನ್‌ (ನಾಯಕ), ಬೆನ್‌ ಸ್ಟೋಕ್ಸ್‌, ಜೋಸ್‌ ಬಟ್ಲರ್‌, ಮೊಯೀನ್‌ ಅಲಿ, ಕ್ರಿಸ್‌ ವೋಕ್ಸ್‌, ಲಿಯಾಮ್‌ ಪ್ಲಂಕೆಟ್‌, ಆದಿಲ್‌ ರಶೀದ್‌, ಮಾರ್ಕ್‌ ವುಡ್‌, ಅಲೆಕ್ಸ್‌ ಹೇಲ್ಸ್‌, ಟಾಮ್‌ ಕರ್ರನ್‌, ಜೋ ಡೆನ್ಲೀ, ಲಿಯಾಮ್‌ ಪ್ಳಕೆಟ್‌.

ಪಾಕಿಸ್ತಾನ

ಪಾಕಿಸ್ತಾನ

ಪಾಕಿಸ್ತಾನ ಕೂಡ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. ಆದರೆ, ಪ್ರಮುಖ ವೇಗದ ಬೌಲರ್‌ ಮೊಹಮ್ಮದ್‌ ಆಮಿರ್‌ ಅವರನ್ನು ಹೊರಗಿಟ್ಟು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದೇ ವೇಳೆ ಯುವ ವೇಗಿ ಮೊಹಮ್ಮದ್‌ ಹಸ್ನಾಯ್‌ಗೆ ಸ್ಥಾನ ನೀಡಿದೆ.

ಇಂಗ್ಲೆಂಡ್‌ ನೆಲದಲ್ಲಿ 2017ರಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಫೈನಲ್‌ನಲ್ಲಿ ಭಾರತಕ್ಕೆ ಸೋಲುಣಿಸಿ ಪ್ರಶಸ್ತಿ ಗೆದ್ದಿತ್ತು. ಸರ್ಫರಾಜ್‌ ಅಹ್ಮದ್‌ ಸಾರಥ್ಯದ ಪಾಕ್‌ ಪಡೆ ಮತ್ತೊಮ್ಮೆ ಅಂಥದ್ದೇ ಪ್ರದರ್ಶನ ನೀಡುವುದನ್ನು ಎದುರು ನೋಡುತ್ತಿದೆ.

ತಂಡ ಇಂತಿದೆ: ಸರ್ಫರಾಜ್‌ ಅಹ್ಮದ್‌ (ನಾಯಕ/ವಿಕೆಟ್‌ಕೀಪರ್‌), ಫಖರ್‌ ಝಮಾನ್‌, ಇಮಾಮ್‌ ಉಲ್‌ ಹಕ್‌, ಬಾಬರ್‌ ಅಝಾಮ್‌, ಶಹದಾಬ್‌ ಖಾನ್‌, ಶೊಯೇಬ್‌ ಮಲಿಕ್‌, ಫಯೀಮ್‌ ಅಶ್ರಫ್‌, ಶಹೀನ್‌ ಶಾ ಅಫ್ರಿದಿ, ಹಸನ್‌ ಅಲಿ, ಅಬಿದ್‌ ಅಲಿ, ಮೊಹಮ್ಮದ್‌ ಹಫೀಜ್‌, ಜನೇದ್‌ ಖಾನ್‌, ಮೊಹಮ್ಮದ್‌ ಹಸ್ನಾಯ್‌, ಹ್ಯಾರಿಸ್‌ ಸೊಹೇಲ್‌.

ಬಾಂಗ್ಲಾದೇಶ

ಬಾಂಗ್ಲಾದೇಶ

ಅನುಭವಿ ವೇಗದ ಬೌಲರ್‌ ಮಶ್ರಫೆ ಮೊರ್ತಾಜ ಬಾಂಗ್ಲಾದೇಶ ತಂಡವನ್ನು ವಿಶ್ವಕಪ್‌ನಲ್ಲಿ ಎರಡನೇ ಬಾರಿ ಮುನ್ನಡೆಸುತ್ತಿದ್ದಾರೆ. ಯುವ ಮತ್ತು ಅನುಭವಿ ಆಟಗಾರರ ಉತ್ತಮ ಸಂಮಿಶ್ರಣವನ್ನು ಬಾಂಗ್ಲಾ ತಂಡ ಹೊಂದಿದೆ.

ತಂಡ ಇಂತಿದೆ: ಮಶ್ರಫೆ ಮೊರ್ತಾಜ (ನಾಯಕ), ತಮೀಮ್‌ ಇಕ್ಬಾಲ್‌, ಲಿಟನ್‌ ದಾಸ್‌, ಸೌಮ್ಯ ಸರ್ಕಾರ್‌, ಮುಷ್ಫಿಕರ್‌ ರಹೀಮ್‌ (ವಿಕೆಟ್‌ಕೀಪರ್‌), ಮಹ್ಮೂದುಲ್ಲಾ, ಶಾಕಿಬ್‌ ಅಲ್‌ ಹಸನ್‌, ಮೊಹಮ್ಮದ್‌ ಮಿಥುನ್‌ , ಶಬ್ಬೀರ್‌ ರೆಹಮಾನ್‌, ಮೊಸಾದೆಕ್‌ ಹುಸೇನ್‌, ಮೊಹಮ್ಮದ್‌ ಸೈಫುದ್ದೀನ್‌.

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ

ಚೋಕರ್ಸ್ ಖ್ಯಾತಿಯ ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ತನ್ನ ಮೇಲಿರುವ ಚೋಕರ್ಸ್ ಹಣೆ ಪಟ್ಟಿಯನ್ನು ಕಳಚಲು ವಿಶ್ವಕಪ್‌ ಅಖಾಡಕ್ಕೆ ಧುಮುಕುತ್ತಿದೆ.

ರೀಝಾ ಹೆಂಡ್ರಿಕ್ಸ್‌ ಅವರ ಸ್ಥಾನದಲ್ಲಿ ಅನುಭವಿ ಬ್ಯಾಟ್ಸ್‌ಮನ್‌ ಹಶೀಮ್‌ ಆಮ್ಲಾ ತಂಡಕ್ಕೆ ಹಿಂದಿರುಗಿದ್ದು, ಫಾಫ್‌ ಡು ಪ್ಲೆಸಿಸ್‌ ನೇತೃತ್ವ ಹರಿಣ ಪಡೆ ಯಾವುದೇ ತಂಡಕ್ಕೆ ಸೋಲುಣಿಸುವ ಸಾಮಥ್ರ್ಯ ಹೊಂದಿದೆ ಎಂಬುದರಲ್ಲಿ ಸಂಶಯವಿಲ್ಲ. ಗಾಯದ ಸಮಸ್ಯೆಗಳ ಕಾರಣ ಐಪಿಎಲ್‌ನಿಂದ ಹೊರಗುಳಿದಿದ್ದ ಲುಂಗಿ ಎನ್ಗಿಡಿ ಮತ್ತು ಎನ್ರಿಚ್‌ ಎನ್‌ಓರ್ಜೆ ಕೂಡ ತಂಡ ಸೇರಿಕೊಂಡಿದ್ದಾರೆ.

ತಂಡ ಇಂತಿದೆ: ಫಾಫ್‌ ಡು ಪ್ಲೆಸಿಸ್‌ (ನಾಯಕ), ಏಡೆನ್‌ ಮಾರ್ಕ್ರಮ್‌, ಕ್ವಿಂಟನ್‌ ಡಿ'ಕಾಕ್‌, ಹಶೀಮ್‌ ಆಮ್ಲಾ, ಡಾಸಿ ವ್ಯಾನ್‌ ಡೆರ್‌ ದುಸ್ಸಾನ್‌, ಡೇವಿಡ್‌ ಮಿಲ್ಲರ್‌, ಆಂಡಿಲ್‌ ಫೆಹ್ಲುಕ್ವಾಯೊ, ಜೆಪಿ ಡುಮಿನಿ, ಡ್ವೇನ್‌ ಪ್ರೆಟೊರಿಯಸ್‌, ಡೇಲ್‌ ಸ್ಟೇನ್‌, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಎನ್ರಿಚ್‌ ಎನ್‌ಓರ್ಜೆ, ಇಮ್ರಾನ್‌ ತಾಹಿರ್‌, ತಬ್ರೇಜ್‌ ಶಾಮ್ಸಿ.

ಶ್ರೀಲಂಕಾ

ಶ್ರೀಲಂಕಾ

ಮಾಜಿ ನಾಯಕ ದಿನೇಶದ್‌ ಚಾಂದಿಮಾಲ್‌ಗೆ ಈ ಬಾರಿಯ ವಿಶ್ವಕಪ್‌ ತಂಡದಿಂದ ಹೊರಗಿಡಲಾಗಿದೆ. ಕೇವಲ 17 ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ದಿಮುತ್‌ ಕರುಣಾರತ್ನೆ ಶ್ರೀಲಂಕಾ ತಂಡದ ಸಾರಥ್ಯ ಪಡೆದುಕೊಂಡಿದ್ದಾರೆ.

ಲಸಿತ್‌ ಮಾಲಿಂಗ ಅವರನ್ನು ತಂಡದಲ್ಲಿ ಸೇರಿಸಲಾಗಿದೆಯಾದರೂ ಅವರಿಗೆ ನಾಯಕನ ಜವಾಬ್ದಾರಿ ನೀಡಿಲ್ಲ. ನಿರೋಶನ್‌ ಡಿಕ್ವೆಲ್ಲಾ, ಅಖಿಲ ಧನಂಜಯ, ಧನುಷ್ಕ ಗುಣತಿಲಕ ಮತ್ತು ಉಪುಲ್‌ ತರಂಗ ಕೂಡ ತಂಡದಿಂದ ಹೊರಬಿದ್ದಿದ್ದಾರೆ.

ತಂಡ ಇಂತಿದೆ: ದಿಮುತ್‌ ಕರುಣಾರತ್ನೆ(ನಾಯಕ), ಲಸಿತ್‌ ಮಾಲಿಂಗ, ಏಂಜಲೊ ಮ್ಯಾಥ್ಯೂಸ್‌, ತಿಸಾರ ಪೆರೆರಾ, ಕುಶಲ್‌ ಪೆರೆರಾ, ಧನಂಜಯ ಡಿ ಸಿಲ್ವಾ, ಕುಶಲ್‌ ಮೆಂಡಿಸ್‌, ಇಸುರು ಉದನಾ, ಮಿಲಿಂದ ಸಿರಿವರ್ಧನ, ಅವಿಷ್ಕ ಫರ್ನಾಂಡೊ, ಜೀವನ್‌ ಮೆಂಡಿಸ್‌, ಲಾಹಿರು ತಿರಿಮನ್ನೆ, ಜೆಫ್ರಿ ವಾಂಡರ್ಸೆ, ನುವಾನ್‌ ಪ್ರದೀಪ್‌, ಸುರಂಗ ಲಕ್ಮಲ್‌.

Story first published: Friday, April 19, 2019, 21:16 [IST]
Other articles published on Apr 19, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+