ವಿಶ್ವಕಪ್ ಫೈನಲ್ ತಂಡಗಳನ್ನು ಹೆಸರಿಸಿದ ಗೂಗಲ್ ಸಿಇಒ ಸುಂದರ್ ಪಿಚೈ

ವಾಷಿಂಗ್ಟನ್, ಜೂನ್ 13: ಗೂಗಲ್‌ನ ಭಾರತ-ಅಮೆರಿಕಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಸುಂದರ್ ಪಿಚೈ ಅವರು ಐಸಿಸಿ ವಿಶ್ವಕಪ್ 2019ರಲ್ಲಿ ಫೈನಲ್ ಪ್ರವೇಶಿಸುವ ತಂಡಗಳನ್ನು ಹೆಸರಿಸಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಡಲಿವೆ ಎಂದು ಪಿಚೈ ಅಂದಾಜಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಕ್ಯಾಲಿಫೋರ್ನಿಯಾ ಮೂಲದ ಅಂತರ್ಜಾಲ ದೈತ್ಯ ಗೂಗಲ್ ನ ಮುಖ್ಯ ಜವಾಬ್ದಾರಿ ಹೊತ್ತಿರುವ 46ರ ಹರೆಯದ ಸುಂದರ್ ಪಿಚೈ, ಕ್ರಿಕೆಟ್ ಅಭಿಮಾನಿಯೂ ಹೌದು. ಕ್ರಿಕೆಟ್ ಮೇಲೆ ತನಗಿರುವ ಆಸಕ್ತಿ ಬಗ್ಗೆ ವಿವರಿಸುತ್ತ ಪಿಚೈ, ಅಂತಿಮ ಹಣಾಹಣಿಯಲ್ಲಿ ಇಂಗ್ಲೆಂಡ್-ಭಾರತ ಮುಖಾಮುಖಿಯಾಗುತ್ತಾದರೂ ಭಾರತ ಗೆಲ್ಲುವ ನೆಚ್ಚಿನ ತಂಡ ಎಂದಿದ್ದಾರೆ.
'ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಆದರೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕೂಡ ತುಂಬಾ ಬಲಿಷ್ಠ ತಂಡ ಅನ್ನೋದು ನಿಮಗೆ ಗೊತ್ತಿರಬಹುದು' ಎಂದು ಯುನೈಟೆಡ್ ಸ್ಟೇಟ್ಸ್ ಸೆಕ್ರೆಟರಿ ಮೈಕ್ ಪೊಂಪೀ ಕೂಡ ಇದ್ದ ಸಭೆಯನ್ನುದ್ದೇಶಿಸಿ ಪಿಚೈ ಹೇಳಿದರು.
ಯೂಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಅಧ್ಯಕ್ಷೆ ನಿಶಾ ದೇಸಾಯ್ ಅವರ 'ವಿಶ್ವಕಪ್‌ನಲ್ಲಿ ಯಾವ ತಂಡಗಳು ಫೈನಲ್ ನಲ್ಲಿ ಕಾಣಿಸಿಕೊಳ್ಳಲಿವೆ?' ಎಂಬ ಪ್ರಶ್ನೆಗೆ ಉತ್ತರಿಸಿದ ಸುಂದರ್, ಒಂದಿಷ್ಟು ಕ್ರಿಕೆಟ್ ಮತ್ತು ಬೇಸ್ ಬಾಲ್ ಅನುಭವಗಳನ್ನು ಹಂಚಿಕೊಂಡರು. ಈ ಬಾರಿ ವಿಶ್ವಕಪ್‌ನಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶವಿದೆ ಎಂದು ಅಭಿಪ್ರಾಯಿಸಿದರು.
ವಿರಾಟ್ ಕೊಹ್ಲಿ ಬಳಗ ಈವರೆಗೂ ಆಡಿರುವ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿದೆ. ಭಾರತ ನ್ಯೂಜಿಲೆಂಡ್ ಮಾತ್ರ ಆಡಿರುವ ಮೂರೂ ಪಂದ್ಯಗಳಲ್ಲೂ ಗೆದ್ದಿದೆ. ಇನ್ನುಳಿದ 8 ತಂಡಗಳೂ ಅಜೇಯವಾಗಿ ಉಳಿದಿಲ್ಲ. ಸದ್ಯ ವಿಶ್ವಕಪ್ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಭಾರತ ಮೊದಲ ನಾಲ್ಕು ಸ್ಥಾನಗಳಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications