ಅಂಕಿ ಅಂಶದಲ್ಲಿ ಇಂಡೋ -ಆಸೀಸ್ ಸಮರ, ರನ್ ಗಳಿಕೆಯಲ್ಲಿ ಸಚಿನ್ ಬೆಸ್ಟ್!

ಲಂಡನ್, ಜೂನ್ 09: ವಿಶ್ವಕಪ್ 2019 ಸಮರದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಜಿದ್ದಾಜಿದ್ದಾನ ಹಣಾಹಣಿ ನಿರೀಕ್ಷಿಸಲಾಗಿದೆ. ಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳೆನಿಸಿರುವ ಕೊಹ್ಲಿ ಹಾಗೂ ಫಿಂಚ್ ಪಡೆಯಲ್ಲಿ ಪ್ರತಿಭಾವಂತರ ದಂಡೇ ಇದೆ. ಎರಡು ಕಪ್ ಎತ್ತಿರುವ ಭಾರತ ಹಾಗೂ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ನಡುವಿನ ಆಟಕ್ಕೆ ಓವಲ್ ಮೈದಾನ ವೇದಿಕೆ ಒದಗಿಸಲಿದೆ.
ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಪೈಕಿ ಹಾಗೂ ಆಸ್ಟ್ರೇಲಿಯಾ ಹಾಗೂ ಭಾರತ 136 ಬಾರಿ ಮುಖಾಮುಖಿಯಾಗಿವೆ, ಆಸ್ಟ್ರೇಲಿಯಾ 77 ಪಂದ್ಯಗಳನ್ನು ಗೆದ್ದು ಮುಂಚೂಣಿಯಲ್ಲಿದೆ. ಭಾರತ 49 ಬಾರಿ ಮೇಲುಗೈ ಸಾಧಿಸಿದೆ. ಇನ್ನು 10 ಪಂದ್ಯಗಳು ಫಲಿತಾಂಶವಿಲ್ಲವಾಗಿದೆ.
ವಿಶ್ವಕಪ್ ಪಂದ್ಯಗಳ ಪೈಕಿ 11 ಬಾರಿ ಎದುರಾಗಿದ್ದು, ಆಸ್ಟ್ರೇಲಿಯಾ 8 ಹಾಗೂ ಭಾರತ 3 ಬಾರಿ ಗೆಲುವು ಸಾಧಿಸಿದೆ. 2003ರ ಫೈನಲ್ ನಲ್ಲಿ ಭಾರತವನ್ನು ಸೋಲಿಸಿ ಆಸೀಸ್ ಕಪ್ ಗೆದ್ದುಕೊಂಡಿತ್ತು. ಇಂಗ್ಲೆಂಡ್ ನಲ್ಲಿ ನಡೆದಿರುವ ಪಂದ್ಯಗಳ ಪೈಕಿ ಕೂಡಾ ಆಸ್ಟ್ರೇಲಿಯಾ 2 ಹಾಗೂ ಭಾರತ 1 ಸಾಧನೆ ಕಂಡಿವೆ.
ಆಸೀಸ್ ವೇಗಿಗಳು ಹಾಗೂ ಭಾರತ ಬ್ಯಾಟ್ಸ್ ಮನ್ ನಡುವಿನ ಕದನ ಕುತೂಹಲವನ್ನು ಭಾನುವಾರ ಮಧ್ಯಾಹ್ನ 3 ಗಂಟೆ ನಂತರ ವೀಕ್ಷಿಸಬಹುದಾಗಿದೆ. ಇದಕ್ಕೂ ಮುನ್ನ ಇಲ್ಲಿ ತನಕ ಉಭಯ ತಂಡಗಳ ಸಾಧನೆ ಬಗ್ಗೆ ಹಿನ್ನೋಟ ಬೀರುವ ಅಂಕಿ ಅಂಶಗಳು ಇಲ್ಲಿವೆ.

ಬ್ಯಾಟಿಂಗ್ ಪ್ರದರ್ಶನದಲ್ಲಿ ಸಚಿನ್ ಬೆಸ್ಟ್
* 209: 2013ರಲ್ಲಿ 209ರನ್ ಸಿಡಿಸಿದ್ದ ರೋಹಿತ್ ಶರ್ಮ ಅವರು ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
* 3077 ರನ್ : ಸಚಿನ್ ತೆಂಡೂಲ್ಕರ್ ಅವರು ಉಭಯ ತಂಡಗಳ ಪೈಕಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
* 87: ಉಭಯ ತಂಡದ ಆಟಗಾರರು ಒಟ್ಟು 87 ಶತಕಗಳನ್ನು ಬಾರಿಸಿದ್ದಾರೆ.
* 9 : ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ.
15 : ಅರ್ಧಶತಕ ಗಳಿಕೆಯಲ್ಲೂ ಸಚಿನ್ ತೆಂಡೂಲ್ಕರ್ ಮುಂದಿದ್ದಾರೆ.
* 69 : ರೋಹಿತ್ ಶರ್ಮ ಅವರು ಸಿಕ್ಸ್ ಬಾರಿಸುವುದರಲ್ಲಿ ಎಲ್ಲರಿಗಿಂತ ಮುಂದಿದ್ದಾರೆ.

ತಂಡದ ಪ್ರದರ್ಶನ
* 383/6- 2013ರಲ್ಲಿ ಭಾರತ ಗಳಿಸಿದ ಮೊತ್ತವು ಇಲ್ಲಿ ತನಕ ಉಭಯ ತಂಡಗಳ ನಡುವಿನ ಅತಿ ಗರಿಷ್ಠ ಮೊತ್ತ.
* 63 ರನ್ನಿಗೆ ಆಲೌಟ್: 1981ರಲ್ಲಿ 63 ಸ್ಕೋರಿಗೆ ಅಲೌಟ್ ಆಗಿದ್ದ ಭಾರತ. ಇದು ಅತಿ ಕನಿಷ್ಠ ಮೊತ್ತವಾಗಿದೆ.
* 31 : ಸಚಿನ್ ತೆಂಡೂಲ್ಕರ್ ಅವರು ಅತಿ ಹೆಚ್ಚು ಕ್ಯಾಚ್ ಹಿಡಿದ ಆಟಗಾರ ಎನಿಸಿಕೊಂಡಿದ್ದಾರೆ.
* 2004ರಲ್ಲಿ ಮೈಕಲ್ ಕ್ಲಾರ್ಕ್ ಅವರು ಒಂದೇ ಪಂದ್ಯದಲ್ಲಿ 4 ಕ್ಯಾಚ್ ಹಿಡಿದ ಸಾಧನೆ ಮಾಡಿದ್ದಾರೆ.

ವಿಕೆಟ್ ಕೀಪರ್ ಸಾಧನೆ
* 79: ಉಭಯ ತಂಡಗಳ ನಡುವಿನ ವಿಕೆಟ್ ಕೀಪರ್ ಗಳ ಪೈಕಿ ಅಡಂ ಗಿಲ್ ಕ್ರಿಸ್ಟ್ ಅವರು ಹೆಚ್ಚು ವಿಕೆಟ್ ಗಳಿಸಿದ್ದಾರೆ.
* 6 : 2007 ಹಾಗೂ 2008ರಲ್ಲಿ ಎರಡು ಬಾರಿ ಇನ್ನಿಂಗ್ಸ್ ವೊಂದರಲ್ಲಿ 6 ವಿಕೆಟ್ ಗಳಿಸಿ ಸಾಧನೆ ಮಾಡಿದ್ದಾರೆ.
***

ಬೌಲಿಂಗ್ ಪ್ರದರ್ಶನ
* 55: ಆಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ ಅವರು ಉಭಯ ತಂಡಗಳ ನಡುವೆ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎನಿಸಿದ್ದಾರೆ.
* 6/27 : 2007ರಲ್ಲಿ ಭಾರತದ ಸ್ಪಿನ್ನರ್ ಮುರಳಿ ಕಾರ್ತಿಕ್ ಅವರು ನೀಡಿದ ಪ್ರದರ್ಶನ ಇಲ್ಲಿ ತನಕದ ಶ್ರೇಷ್ಠ ಪ್ರದರ್ಶನವಾಗಿದೆ.
* 21 : ಐದು ಬಾರಿ ವಿಕೆಟ್ ಗಳಿಕೆ ಸಾಧನೆ ಇದಾಗಿದೆ.
* 4 : 4 ಬಾರಿ ಬ್ರೆಟ್ ಲೀ ಅವರು ಐದು ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications