For Quick Alerts
ALLOW NOTIFICATIONS  
For Daily Alerts
 

ಕೆವಿನ್ ಆಶಯದಂತೆ ಆಸೀಸ್ ವಿರುದ್ಧ ವಿರಾಟ್ ಸೆಂಚುರಿ ಬಾರಿಸುತ್ತಾರಾ?

ICC World Cup 2019 : ಇಂಗ್ಲೆಂಡ್ ಆಟಗಾರದ ಆಸೆಯನ್ನು ಈಡೇರಿಸುತ್ತಾರ ಕೊಹ್ಲಿ..? | Oneindia Kannada
 ICC cricket world cup 2019 : Will Viral blast century against Australia?

ದಕ್ಷಿಣ ಆಫ್ರಿಕಾದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ವಿಫಲವಾಗಿದ್ದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದ ವಿರುದ್ಧದ ಭಾನುವಾರದ ಪಂದ್ಯದಲ್ಲಿ ತಮ್ಮ ಲಯಕ್ಕೆ ಮರಳುತ್ತಾರಾ? ಲಂಡನ್ ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ವೀರಾವೇಶ ಮೆರೆಯುತ್ತಾರಾ?

ಈ ಪ್ರಶ್ನೆಗಳಿಗೆ ಕೆಲವೇ ಗಂಟೆಗಳಲ್ಲಿ ಉತ್ತರ ದೊರೆಯಲಿದೆ. ಆದರೆ, ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರು, ವಿರಾಟ್ ಬ್ಯಾಟಿನಿಂದ ಸ್ಫೋಟಕ ಶತಕ ಸಿಡಿಯಲಿ ಎಂದು ಆಶಿಸಿದ್ದಾರೆ. ಭಾರೀ ನಿರೀಕ್ಷೆಯ ಈ ಪಂದ್ಯದಲ್ಲಿ ಖಂಡಿತವಾಗಿ ಎಲ್ಲರ ಕಣ್ಣು ವಿರಾಟ್ ಕೊಹ್ಲಿಯ ಮೇಲಿರಲಿದೆ.

ಟೆಸ್ಟ್ ಪಂದ್ಯವೇ ಆಗಲಿ, ಏಕದಿನದ ಪಂದ್ಯವೇ ಆಗಲಿ, ಟಿ20 ಕದನವೇ ಆಗಲಿ, ಆಸ್ಟ್ರೇಲಿಯಾದ ಸವಾಲನ್ನು ಸ್ವೀಕರಿಸುವಲ್ಲಿ ವಿರಾಟ್ ಕೊಹ್ಲಿ ಎಂದೂ ಹಿಂದೆಬಿದ್ದಿಲ್ಲ. ಭಾರತದಲ್ಲಿಯೇ ಆಗಲಿ ವಿದೇಶದಲ್ಲಿಯೇ ಆಗಲಿ ಭಾರತದ ಕ್ಯಾಪ್ಟನ್ ತಮ್ಮ ಘನತೆ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಆಟ ಪ್ರದರ್ಶಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಅವರು 36 ಪಂದ್ಯಗಳಲ್ಲಿ 1645 ರನ್ ಚಚ್ಚಿದ್ದಾರೆ. 50 ಓವರ್ ಗಳ ಪಂದ್ಯಾವಳಿಯಲ್ಲಿ ವಿರಾಟ್ ಅವರು ಆಸೀಸ್ ವಿರುದ್ಧ ಸಖತ್ ಮಿಂಚಿದ್ದು, 8 ಭರ್ಜರಿ ಸೆಂಚುರಿ ಮತ್ತು 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಆಸ್ಟ್ರೇಲಿಯಾದ ಆಟಗಾರರು ಕೊಹ್ಲಿ ವಿರುದ್ಧ ಎಚ್ಚರಿಕೆಯಿಂದಿರಲಿ ಇಷ್ಟು ಸಾಕಲ್ಲವೆ?

2015ರ ವಿಶ್ವಕಪ್ ಮುಗಿದ ನಂತರ ವಿರಾಟ್ ಕೊಹ್ಲಿ ಅವರು ಅತ್ಯುತ್ತಮ ಫಾರಂನಲ್ಲಿದ್ದಾರೆ. ಭಾರತ ತಂಡದಲ್ಲಿ ಉತ್ತಮ ಬ್ಯಾಟ್ಸ್ ಮನ್ ಗಳಿದ್ದರೂ, ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಬ್ಯಾಟಿಂಗ್ ಮಾಡುತ್ತಿರುವ ಕೊಹ್ಲಿ ಅವರನ್ನು ಭಾರತ ನೆಚ್ಚಿಕೊಂಡಿದೆ, ಕ್ರಿಕೆಟ್ ಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ.

ಹಲವಾರು ಪಂದ್ಯಗಳನ್ನು ಗೆಲ್ಲಿಸಿರುವ ವಿರಾಟ್ ಕೊಹ್ಲಿ ಅವರು, ಭಾರತದ ಪರ ಅತಿಹೆಚ್ಚು ರನ್ ಗಳಿಸಿರುವ ಆಟಗಾರರಾಗಿದ್ದು, ವಿರಾಟ್ ಅವರಲ್ಲಿರುವ ಪಂದ್ಯ ಗೆಲ್ಲಿಸುವ ಮತ್ತು ಸಂದರ್ಭಕ್ಕೆ ತಕ್ಕಂತೆ ಆಟವಾಡುವ ಸಾಮರ್ಥ್ಯವೇ ಅವರನ್ನು ಅಗ್ರಮಾನ್ಯ ಆಟಗಾರರನ್ನಾಗಿ ಮಾಡಿದೆ ಎಂದು ಕೆವಿನ್ ಪೀಟರ್ಸನ್ ಹೊಗಳಿದ್ದಾರೆ.

ಟ್ವೀಟ್ ಮಾಡಿರುವ ಕೆವಿನ್ ಅವರು, ಭಾರತ ವರ್ಸಸ್ ಆಸ್ಟ್ರೇಲಿಯಾ, ನಾನು ಓವಲ್ ನತ್ತ ತೆರಳುತ್ತಿದ್ದೇನೆ. ಇದು ಭರ್ಜರಿ ಪಂದ್ಯ. ವಿರಾಟ್ ಬ್ಯಾಟಿನಿಂದ 100 ಸಿಡಿಯಬೇಕು. ವಿರಾಟ್, ನನ್ನನ್ನು ನಿರಾಶೆ ಮಾಡಬೇಡಿ ಎಂದಿದ್ದಾರೆ.

ಇಂಗ್ಲೆಂಡ್ ನ ಮಾಜಿ ಕ್ರಿಕೆಟ್ ಆಟಗಾರ್ತಿ ಇಸಾ ಗುವಾ ಅವರು, ಎಲ್ಲ ಫಾರ್ಮ್ಯಾಟ್ ನ ಪಂದ್ಯಗಳಲ್ಲಿ ಅತ್ಯುತ್ತಮ ಆಟಗಾರ ವಿರಾಟ್ ಅಲ್ಲ, ಆಸೀಸ್ ನ ಸ್ಟೀವ್ ಸ್ಮಿತ್ ಅಂತ ಆಸ್ಟ್ರೇಲಿಯಾದ ಕ್ಯಾಪ್ಟನ್ ಆರೋನ್ ಫಿಂಚ್ ಅವರು ಸ್ಟೇಟ್ಮೆಂಟ್ ನೀಡಿರುವುದು ಈ ಪಂದ್ಯದ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕೆವಿನ್ ಅವರು ಟ್ವೀಟಿಗೆ ಪ್ರತಿಟ್ವೀಟಿಸಿರುವ ಇಸಾ ಗುವಾ ಅವರು, ಸ್ಮಿತ್ ಅವರೇ ಅತ್ಯುತ್ತಮ ಆಟಗಾರ ಎಂದು ಫಿಂಚ್ ಹೇಳಿರುವ ಹಿನ್ನೆಲೆಯಲ್ಲಿ, ಏನೋ ವಿಶೇಷವಾದದ್ದನ್ನು ಈ ಪಂದ್ಯದಲ್ಲಿ ನಿರೀಕ್ಷಿಸಬಹುದು ಎಂದಿದ್ದಾರೆ. ಆರೋನ್ ಫಿಂಚ್ ಅವರಿಗೆ ವಿರಾಟ್ ಅವರು ಮೈದಾನದಲ್ಲಿಯೇ ಉತ್ತರ ಹೇಳುತ್ತಾರಾ?

2011 ಮತ್ತು 2015ರ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಆಡಿರುವ ವಿರಾಟ್ ಕೊಹ್ಲಿ ಅವರಿಗೆ ಇದು ಮೂರನೇ ವಿಶ್ವಕಪ್. ಇಲ್ಲಿಯವರೆಗೆ ಅವರು ಕೇವಲ 2 ಸೆಂಚುರಿ ಮಾತ್ರ ಬಾರಿಸಿದ್ದಾರೆ. ಮತ್ತಷ್ಟು ಸೆಂಚುರಿ ಸಿಡಿಸಲು ಅವರಿಗೆ ಅದ್ಭುತ ವೇದಿಕೆಯೊಂದು ಸಿದ್ಧವಾಗಿದೆ. ಓವಲ್ ನಲ್ಲಿ ವಿರಾಟ್ ವೀರಾವೇಶ ಮೆರೆಯಲಿ.

Story first published: Sunday, June 9, 2019, 14:17 [IST]
Other articles published on Jun 9, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+