ವಿಶ್ವಕಪ್ 2019: ಧೋನಿಗೆ ದೇಶ ಪ್ರೇಮಿಗಳ ಸಾಲು ಸಾಲು ಟ್ವೀಟ್ ಸೆಲ್ಯೂಟ್!

ಸೌತಾಂಪ್ಟನ್, ಜೂನ್ 6: ಬುಧವಾರ (ಜೂನ್ 5) ನಡೆದ ಭಾರತ vs ದಕ್ಷಿಣ ಆಫ್ರಿಕಾ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 6 ವಿಕೆಟ್ ಗೆಲುವಿನೊಂದಿಗೆ ಶುಭಾರಂಭ ಕಂಡಿದೆ. ಈ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ವಿಶೇಷ ಕಾರಣವೊಂದಕ್ಕೆ ಗಮನ ಸೆಳೆದಿದ್ದರು.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಸೌತಾಂಪ್ಟನ್ ನ ರೋಸ್ ಬೌಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿಕೆಟ್ ಕೀಪರ್ ಧೋನಿ ಧರಿಸಿದ್ದ ಗ್ಲೌಸ್, ಭಾರತೀಯ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿತ್ತು. ಯಾಕೆಂದರೆ ಈ ಗ್ಲೌಸ್‌ನಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದ ಮುದ್ರೆಯೊಂದಿತ್ತು.
ಧೋನಿ ಧರಿಸಿದ್ದ ಈ ವಿಶೇಷ ಗ್ಲೌಸ್, ಅವರಿಗೆ ಭಾರತೀಯ ಸೈನ್ಯದ ಮೇಲಿದ್ದ ಪ್ರೀತಿ, ಕಳಕಳಿಯನ್ನು ಸೂಚಿಸುತ್ತಿತ್ತು. ಇದಕ್ಕೆ ಅನೇಕ ಕ್ರಿಕೆಟ್ ಪ್ರೇಮಿಗಳು ಪ್ರತಿಕ್ರಿಯಿಸಿ ಅಭಿನಂದಿಸಿದ್ದಾರೆ.
ಧೋನಿಗೆ ಟ್ವೀಟ್ ಸೆಲ್ಯೂಟ್
ಸೌತಾಂಪ್ಟನ್ ಪಂದ್ಯದಲ್ಲಿ ಧೋನಿ ಧರಿಸಿದ್ದ ನೀಲಿ ಬಣ್ಣದ ಗ್ಲೌಸಿನಲ್ಲಿ ಭಾರತ ವಿಶೇಷ ಅರೆಸೇನಾ ಪಡೆಯ 'ಬಲಿದಾನ್' ಎನ್ನುವ ಮುದ್ರೆಯಿತ್ತು. ಪಂದ್ಯದ ವೇಳೆ ಧೋನಿ ಧರಿಸಿದ್ದ ಈ ಗ್ಲೌಸ್ ಗಮನಿಸಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಲು ಸಾಲು ಟ್ವೀಟ್‌ಗಳ ಮೂಲಕ ಸೆಲ್ಯೂಟ್ ಹೊಡೆದಿದ್ದಾರೆ.
ಪ್ರೀತಿಗೆ ಇದೇ ಕಾರಣ
ಧೋನಿಯ ಸ್ಪೋರ್ಟ್ಸ್ ಗ್ಲೌಸಿನಲ್ಲಿ ಆರ್ಮಿಯ ಚಿಹ್ನೆಯಿದೆ. ಧೋನಿ ಯಾಕೆ ಲಕ್ಷಾಂತರ ಮಂದಿಯ ಮನಸ್ಸಿನಲ್ಲಿದ್ದಾರೆ, ಧೋನಿಯನ್ನು ಯಾಕೆ ಅಷ್ಟೊಂದು ಜನ ಪ್ರೀತಿಸುತ್ತಾರೆ ಅನ್ನೋದಕ್ಕೆ ಈ ಚಿತ್ರವೇ ಸಾಕ್ಷಿ ಎಂದು ಪಂಕಜ್ ಎಂಬವರು ಟ್ವೀಟ್ ಮಾಡಿದ್ದಾರೆ.
ಪತ್ರಕರ್ತ ಟ್ವೀಟ್
ಧೋನಿಯ ಗ್ಲೌಸಿನ ಮೇಲಿದೆಯಲ್ಲ? ಅದು ಭಾರತೀಯ ಸೇನಾಪಡೆಗಳ ಡ್ಯಾಗರ್ (ಬಾಕು) ಚಿಹ್ನೆ ಎಂದು ಪತ್ರಕರ್ತ, ಲೇಖಕ ಶಿವ್ ಅರೂರ್ ಟ್ವೀಟ್ ಮಾಡಿದ್ದಾರೆ. ಅಂದ್ಹಾಗೆ ಈ ಗ್ಲೌಸ್ ಧರಿಸಿ ಧೋನಿ, ಆಂಡಿಲೆ ಫೆಹ್ಲುಕ್ವೇವೊ ಅವರನ್ನು ಸ್ಟಂಪ್ಟ್ ಮಾಡಿದ್ದರು.
ಗುಡ್ ವೈಬ್ಸ್
ಎಂಎಸ್‌ಡಿ ಅವರೂ ಸೇನೆಯ ಭಾಗವೆ. ಧೋನಿ ಧರಿಸಿರುವ ಈ ಗ್ಲೌಸಿನಲ್ಲಿ ಭಾರತೀಯ ವಿಶೇಷ ಅರೆಸೇನಾಪಡೆಯ 'ಬಲಿದಾನ್' ಮುದ್ರೆಯಿದೆ. ಧೋನಿಯ ಎಸ್‌ಜಿ ಕ್ರಿಕೆಟ್ ಗ್ಲೌಸ್‌ನಲ್ಲಿ ಈ ಚಿಹ್ನೆಯನ್ನು ಬಳಸಿಕೊಳ್ಳಲಾಗಿದೆ ಎಂದು ಗುಡ್ ವೈಬ್ಸ್ ಟ್ವೀಟ್ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications