For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಕಳಪೆ ಪ್ರದರ್ಶನ, ಐಪಿಎಲ್ ಕಾರಣವೆಂದ ಡುಪ್ಲೆಸಿ

ICC World Cup 2019 : 32 ವರ್ಷದ ಸಾಧನೆ ನೆಪಿಸಿದ್ದಕ್ಕೆ ಶಮಿಗೆ ಧನ್ಯವಾದ ಹೇಳಿದ ಮಾಜಿ ಆಟಗಾರ..?|Oneindia Kannada
ICC Cricket World Cup : Faf Du Plessis blames IPL for poor performance

ಕ್ರಿಕೆಟ್ ಲೋಕದ ಕೂಸು ಅಫಘಾನಿಸ್ತಾನವನ್ನು ಹೊರತುಪಡಿಸಿ, ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಆಡಿರುವ ಏಳು ಪಂದ್ಯಗಳ ಪೈಕಿ ಐದು ತಂಡಗಳ ವಿರುದ್ಧ ಸೋತಿರುವ ದಕ್ಷಿಣ ಆಫ್ರಿಕಾ ಕನಸು ಸಂಪೂರ್ಣವಾಗಿ ಭಗ್ನಗೊಂಡಿದ್ದು, ಹೆಚ್ಚೂಕಡಿಮೆ ಟೂರ್ನಿಯಿಂದ ಹೊರಬಿದ್ದಿದೆ.

ದಕ್ಷಿಣ ಆಫ್ರಿಕಾ ತನ್ನ ಹೀನಾಯ ಸೋಲುಗಳ ವಿಮರ್ಶೆಯಲ್ಲಿ ತೊಡಗಿದ್ದು, ಇಷ್ಟು ಕಳಪೆಯಾಗಿ ಆಡಲು ಕಾರಣಗಳೇನು ಎಂದು ಹುಡುಕಲು ಪ್ರಾರಂಭಿಸಿದೆ. ಇದರಲ್ಲಿ ಕಂಡುಬಂದಿರುವ ಅಚ್ಚರಿಯ ಕಾರಣವೇನೆಂದರೆ, ಐಪಿಎಲ್ ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು, ಅದರಲ್ಲಿಯೂ ಕಾಗಿಸೋ ರಬಾಡಾ ಅವರು ಆಡಿದ್ದು, ವಿಶ್ವಕಪ್ ನಲ್ಲಿ ಸರಣಿ ಸೋಲಿಗೆ ಕಾರಣ!

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಿದ ದಕ್ಷಿಣ ಆಫ್ರಿಕಾದ ಪ್ರಮುಖ ಬೌಲರ್, ಕಾಗಿಸೋ ರಬಾಡಾ ಅವರು ವಿಶ್ವಕಪ್ ಗೂ ಮೊದಲೇ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳದಿರುವ ಕಾರಣ, ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲ. ಅವರನ್ನು ಮಧ್ಯದಲ್ಲಿಯೇ ಕರೆಯಿಸಿಕೊಳ್ಳಲು ಪ್ರಯತ್ನಿಸಲಾಯಿತಾದರೂ ಸಾಧ್ಯವಾಗಲಿಲ್ಲ ಎಂಬ ಕಾರಣವನ್ನು ದಕ್ಷಿಣ ಆಫ್ರಿಕಾದ ನಾಯಕ ಫಾಫ್ ಡುಪ್ಲೆಸಿ ಅವರು ಕಂಡುಹಿಡಿದಿದ್ದಾರೆ.

ತಮಾಷೆ ಅಂದರೆ, ಈ ವಿಶ್ವಕಪ್ ನಲ್ಲಿ, ಭಾರತದ ಆಟಗಾರರು ಸೇರಿದಂತೆ ಯಶಸ್ವಿಯಾಗಿ ಆಡುತ್ತಿರುವ ಹಲವಾರು ಆಟಗಾರರು ಕೂಡ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆಡಿದ್ದಾರೆ. ಇಲ್ಲಿಯವರೆಗೆ ಅಜೇಯವಾಗಿ ಉಳಿದಿರುವ ಭಾರತ ಮತ್ತು ನ್ಯೂಜಿಲೆಂಡ್ ಹಲವಾರು ಆಟಗಾರರು ಐಪಿಎಲ್ ನಲ್ಲಿ ಆಡಿದ್ದಾರೆ. ನ್ಯೂಜಿಲೆಂಡ್ ನ ನಾಯಕ ಕೇನ್ ವಿಲಿಯಮ್ಸನ್, ಆಸ್ಟ್ರೇಲಿಯಾದ ಆರೋನ್ ಫಿಂಚ್ ಸೇರಿದಂತೆ ವಿಶ್ವಕಪ್ ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಇವರೆಲ್ಲ ಐಪಿಎಲ್ ನಲ್ಲಿ ಆಡಿದವರೇ.

ಜೂನ್ 10ರಂದು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯ ನಡೆಯದಿದ್ದರಿಂದ ದಕ್ಷಿಣ ಆಫ್ರಿಕಾದ ಪಂದ್ಯ ರದ್ದಾಗಿತ್ತು. ಇದನ್ನು ಹೊರತುಪಡಿಸಿದರೆ, ಉಳಿದೆಲ್ಲ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು ಕಳಪೆಯಾಗಿ ಆಡಿದ್ದಾರೆ. ಜೂನ್ 23ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ ಹೀನಾಯವಾಗಿ ಸೋತಿದೆ. ನಂತರ, ನ್ಯೂಜಿಲೆಂಡ್, ಭಾರತ, ಬಾಂಗ್ಲಾದೇಶದ ವಿರುದ್ಧ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧ ನಡೆದ ವಿಶ್ವಕಪ್ ನ ಮೊದಲ ಪಂದ್ಯದಲ್ಲಿಯೂ ದಕ್ಷಿಣ ಆಫ್ರಿಕಾ ಸೋತಿದೆ.

ಒಂದರ್ಥದಲ್ಲಿ ಕಾಗಿಸೋ ರಬಾಡಾ ವಿರುದ್ಧ ದಕ್ಷಿಣ ಆಫ್ರಿಕಾದ ನಾಯಕ ಫಾಫ್ ಡುಪ್ಲೆಸಿ ಹೇಳಿದ್ದರಲ್ಲಿ ನಿಜಾಂಶವೂ ಇದೆ. ಐಪಿಎಲ್ ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿ ಗರಿಷ್ಠ ವಿಕೆಟ್ ಕಿತ್ತಿದ್ದ, ದಕ್ಷಿಣ ಆಫ್ರಿಕಾದ ಏಸ್ ಬೌಲರ್ ರಬಾಡಾ ಅವರು ವಿಶ್ವಕಪ್ ನಲ್ಲಿ ಅತ್ಯಂತ ಕಳಪೆಯಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 10 ಓವರ್ ಗಳಲ್ಲಿ 65 ರನ್ ನೀಡಿ ರಬಾಡಾ ಒಂದೂ ವಿಕೆಟ್ ಪಡೆದಿಲ್ಲ.

{headtohead_cricket_5_6}

Story first published: Monday, June 24, 2019, 12:40 [IST]
Other articles published on Jun 24, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+