For Quick Alerts
ALLOW NOTIFICATIONS  
For Daily Alerts
 

ಭಾರತ vs ಕಿವೀಸ್: ಪಂದ್ಯ ವೀಕ್ಷಿಸುವ ಕ್ರಿಕೆಟ್ ಪ್ರಿಯರ ಆಸೆಗೆ ತಣ್ಣೀರಾ?!

ICC Cricket World Cup: India vs New Zealand, Match 18-Preview

ನಾಟಿಂಗ್ಹ್ಯಾಮ್, ಜೂನ್ 13: ಈ ಬಾರಿಯ ವಿಶ್ವಕಪ್‌ನಲ್ಲಿ ಈಗಾಗಲೇ ಒಂದಿಷ್ಟು ಪಂದ್ಯಗಳು ಮಳೆಯ ಕಾರಣಕ್ಕೆ ನಡೆಯಲೇಯಿಲ್ಲ. ಗುರುವಾರ (ಜೂನ್ 13) ಭಾರತ vs ನ್ಯೂಜಿಲ್ಯಾಂಡ್ ಬಹು ನಿರೀಕ್ಷಿತ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ನಾಟಿಂಗ್ಹ್ಯಾಮ್‌ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಈ ಪಂದ್ಯ ನಡೆಯಲಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

12ನೇ ಆವೃತ್ತಿಯ ಈ ಏಕದಿನ ವಿಶ್ವಕಪ್‌ನಲ್ಲಿ 3 ಪಂದ್ಯಗಳು ಮಳೆಯ ಕಾರಣಕ್ಕೆ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿದ್ದವು. ಜೂನ್ 7ರ ಪಾಕಿಸ್ತಾನ-ಶ್ರೀಲಂಕಾ ಪಂದ್ಯ, ಜೂನ್ 10ರ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಪಂದ್ಯ ಮತ್ತು ಜೂನ್ 11ರ ಬಾಂಗ್ಲಾದೇಶ vs ಶ್ರೀಲಂಕಾ ಪಂದ್ಯಗಳು ರದ್ದಾಗಿದ್ದವು.

ಭಾರತ vs ನ್ಯೂಜಿಲ್ಯಾಂಡ್, ಜೂನ್ 13, Live ಸ್ಕೋರ್‌ಕಾರ್ಡ್

1
43661

ಟ್ರೆಂಟ್‌ಬ್ರಿಡ್ಜ್ ಸದ್ಯದ ಹವಾಮಾನದ ಪ್ರಕಾರ ನ್ಯೂಜಿಲ್ಯಾಂಡ್ vs ಭಾರತ ಪಂದ್ಯದ ವೇಳೆ ಮಳೆ ಕಾಣಿಸಿಕೊಂಡು ಪಂದ್ಯ ತಡವಾಗಿ ಆರಂಭವಾಗುವುದನ್ನು ನಿರೀಕ್ಷಿಸಲಾಗಿದೆ. ಈವರೆಗೆ ಇತ್ತಂಡಗಳು ವಿಶ್ವಕಪ್‌ನಲ್ಲಿ ಒಟ್ಟು 7 ಸಾರಿ ಕಾದಾಡಿವೆ. ಇದರಲ್ಲಿ ಭಾರತ 3 ಪಂದ್ಯಗಳನ್ನು ಗೆದ್ದಿತ್ತು. ಕಿವೀಸ್ 4ರಲ್ಲಿ ಜಯ ಸಾಧಿಸಿತ್ತು. ಪಂದ್ಯ 3 pmಗೆ ಆರಂಭಗೊಳ್ಳಲಿದೆ.

ಒಟ್ಟು 3 ಪಂದ್ಯಗಳನ್ನಾಡಿರುವ ನ್ಯೂಜಿಲ್ಯಾಂಡ್ 3ರಲ್ಲೂ ಗೆಲುವು ದಾಖಲಿಸಿ ವಿಶ್ವಕಪ್ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ. ಇತ್ತ ಭಾರತವೂ ಆಡಿರುವ ಎರಡೂ ಪಂದ್ಯಗಳನ್ನೂ ಗೆದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ಸಹಜವಾಗೇ ಗೆಲುವಿನ ಹುಮ್ಮಸ್ಸಿನಲ್ಲಿದ್ದರೆ, ಆರಂಭಿಕ ಆಟಗಾರ ಶಿಖರ್ ಧವನ್ ಗಾಯಾಳಾಗಿ ತಂಡದಿಂದ ಹೊರಗಿರುವುದರಿಂದ ಕೊಹ್ಲಿ ಬಳಗ ಕೊಂಚ ಒತ್ತಡದಲ್ಲಿದೆ.

ಹಾಗೂ ಪಂದ್ಯ ನಡೆದರೆ, ಈ ಪಂದ್ಯದಲ್ಲಿ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿಯುವುದನ್ನು ನಿರೀಕ್ಷಿಸಲಾಗಿರುವ ಕನ್ನಡಿಗ ಕೆಎಲ್ ರಾಹುಲ್ ಅವರು ಅನುಭವಿ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ಸಾಥ್ ನೀಡಿ, ಪಂದ್ಯದ ಆರಂಭದಲ್ಲಿ ತಂಡಕ್ಕೆ ಬಲ ತುಂಬಿದರೆ ಭಾರತ ಗೆಲ್ಲುವ ಅವಕಾಶ ಹೆಚ್ಚು. ಇನ್ನೊಂದೆಡೆ ಕಿವೀಸ್ ಕೂಡ ಭರ್ಜರಿ ಪೈಪೋಟಿ ನೀಡೋದು ನಿರೀಕ್ಷಿತ.

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ವಿಜಯ್ ಶಂಕರ್ / ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ.

ನ್ಯೂಜಿಲ್ಯಾಂಡ್ ಸಂಭಾವ್ಯ ತಂಡ: ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೋ, ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಟಾಮ್ ಲ್ಯಾಥಮ್, ಜೇಮ್ಸ್ ನೀಶಮ್, ಕಾಲಿನ್ ಡೆ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕೀ ಫರ್ಗುಸನ್, ಟ್ರೆಂಟ್ ಬೌಲ್ಟ್.

{headtohead_cricket_3_4}

Story first published: Thursday, June 13, 2019, 12:08 [IST]
Other articles published on Jun 13, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+