For Quick Alerts
ALLOW NOTIFICATIONS  
For Daily Alerts
 

ಮಹಿಳಾ ಏಕದಿನ ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾಕ್ಕೆ ಐಸಿಸಿ ಬರೆ

ಇನ್ನೇನು ಕೆಲವೇ ದಿನಗಳಲ್ಲಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿ ಭಾರತದಲ್ಲಿ ನಡೆಯಲಿದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿತು. ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಹರ್ಮನ್ ಪ್ರೀತ್ ಪಡೆ 1-2 ಸರಣಿಯಿಂದ ಆಘಾತ ಕಂಡಿತು. ಈ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಮಹಿಳಾ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಬರೆ ನೀಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಗಾಗಿ ಭಾರತ ತಂಡಕ್ಕೆ ಪಂದ್ಯ ಶುಲ್ಕದ 10 ಪ್ರತಿಶತ ದಂಡ ವಿಧಿಸಲಾಯಿತು.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿ ಸೆ.20 ರಂದು ನಡೆಯಿತು. ಈ ಪಂದ್ಯಕ್ಕೆ ಅರುಣ್ ಜೇಟ್ಲಿ ಕ್ರೀಡಾಂಗಣ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಶತಕ ಬಾರಿಸಿ ಅಬ್ಬರಿಸಿದ್ದರು. ಆದರೆ ಈ ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ಹಿಂಬಾಲಿಸುವಲ್ಲಿ ವಿಫಲವಾಯಿತು. ಈ ಪಂದ್ಯದಲ್ಲಿ ಆಸೀಸ್‌ 43 ರನ್ ಗಳಿಂದ ಗೆದ್ದು ಸರಣಿಯನ್ನು ವಶಕ್ಕೆ ಪಡೆದಿದೆ.

ICC Fines Harmanpreet Kaur s Indian Team 10 Match Fee for Slow Over Rate

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಿಧಾನಗತಿಯ ಓವರ್‌ ರೇಟ್‌ಗಾಗಿ ದಂಡವನ್ನು ವಿಧಿಸಿದ್ದಾರೆ. ಈ ಪಂದ್ಯದ ಮ್ಯಾಚ್ ರೆಫರಿ ಜಿ.ಎಸ್. ಲಕ್ಷ್ಮಿ ಭಾರತೀಯ ತಂಡಕ್ಕೆ ದಂಡ ವಿಧಿಸಿದರು. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು. ಅಲ್ಲದೆ 2 ಓವರ್‌ಗಳ ಕಡಿಮೆ ಮಾಡಿತು. ಟೀಮ್ ಇಂಡಿಯಾಕ್ಕೆಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ, ನಿಧಾನಗತಿಯ ಓವರ್-ರೇಟ್‌ಗಾಗಿ ದಂಡ ವಿಧಿಸಿದೆ. ಪ್ರತಿ ಓವರ್‌ಗೆ ಆಟಗಾರರಿಗೆ ಅವರ ಪಂದ್ಯ ಶುಲ್ಕದ ಶೇಕಡಾ 5 ರಷ್ಟು ದಂಡ ವಿಧಿಸಲಾಗಿದೆ.

ತಪ್ಪು ಒಪ್ಪಿಕೊಂಡ ಟೀಮ್ ಇಂಡಿಯಾ ನಾಯಕಿ

ಟೀಮ್ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್‌ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಯಾವುದೇ ವಿಚಾರಣೆಯ ಅಗತ್ಯವಿಲ್ಲ ಎಂದು ತಿಳಿದು ಬಂದಿದೆ. ಫೀಲ್ಡ್ ಅಂಪೈರ್ ಹಾಗೂ ಟಿವಿ ಅಂಪೈರ್‌ಗಳು ಟೀಮ್ ಇಂಡಿಯಾಕ್ಕೆ ನಿಧಾನಗತಿಯ ಓವರ್‌ ದಂಡವನ್ನು ವಿಧಿಸಿದರು. ತವರಿನಲ್ಲಿ ನಡೆಯುವ ವಿಶ್ವಕಪ್‌ ಸಿದ್ಧತೆಗಳ ನಡುವೆಯ ಬೆನ್ನಲ್ಲೆ ಐಸಿಸಿ ಬರೆ ನೀಡಿದೆ.

ICC Fines Harmanpreet Kaur s Indian Team 10 Match Fee for Slow Over Rate

ಟೀಮ್ ಇಂಡಿಯಾ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ತಯಾರಿ ನಡೆಸಿದೆ. ಈ ಟೂರ್ನಿಯಲ್ಲಿ ಹರ್ಮನ್ ಪ್ರೀತ್ ಪಡೆದ ತನ್ನ ಅಭಿಯಾನವನ್ನು ಶ್ರೀಲಂಕಾ ವಿರುದ್ಧ ಆರಂಭವಾಗಲಿದ್ದು, ಸೆ.30 ರಂದು ಗುವಹಾಟೆಯಲ್ಲಿ ನಡೆಯಲಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ 8 ತಂಡಗಳು ಭಾಗವಹಿಸುತ್ತಿವೆ. 13ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಗೆ ಐದು ಅಂಗಳು ಸಾಕ್ಷಿಯಾಗಲಿವೆ.

Story first published: Tuesday, September 23, 2025, 14:10 [IST]
Other articles published on Sep 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+