Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ ಟೂರ್ನಿಯ ಬಗ್ಗೆ ಮಹತ್ವದ ಅಪ್‌ಡೇಟ್ ನೀಡಿದ ಐಸಿಸಿ

ಐಸಿಸಿ ಏಕದಿನ ವಿಶ್ವಕಪ್ ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ಆಯೋಜನೆಯಾಗಲಿದೆ. ಈ ಮಹತ್ವದ ಟೂರ್ನಿಗಾಗಿ ವಿಶ್ವ ಕ್ರಿಕೆಟ್‌ನ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿರುವುದು ಸುಳ್ಳಲ್ಲ. ಇನ್ನು ಮುಂದಿನ ವರ್ಷ ಟಿ20 ವಿಶ್ವಕಪ್ ಟೂರ್ನಿ ಕೂಡ ನಡೆಯಲಿದ್ದು ಈ ಚುಟುಕು ವಿಶ್ವಕಪ್ ವಿಚಾರವಾಗಿ ಐಸಿಸಿ ಪ್ರಮುಖ ಸುದ್ದಿಯೊಂದನ್ನು ಹಂಚಿಕೊಂಡಿದೆ.

ಮುಂದಿನ ವರ್ಷ ನಡೆಯಲಿರುವ ಈ ಟಿ20 ವಿಶ್ವಕಪ್ 20 ತಂಡಗಳನ್ನು ಒಳಗೊಂಡ ಮಹಾ ಟೂರ್ನಿ ಆಗಿರಲಿದೆ. ಈ ಮೆಗಾ ಪಂದ್ಯಾವಳಿಯನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್‌ಎ ಜಂಟಿಯಾಗಿ ಆಯೋಜನೆ ಮಾಡುವ ಹಕ್ಕನ್ನು ಪಡೆದುಕೊಂಡಿದೆ. ಆದರೆ ಇತ್ತೀಚೆಗೆ ಕೆಲ ವರದಿಗಳು ಈ ವಿಶ್ವಕಪ್ ಟೂರ್ನಿ ಯುಎಸ್‌ಎಯಿಂದ ಸ್ಥಳಾಂತರವಾಗಿದೆ ಎನ್ನುತ್ತಿದ್ದು ಸಂಪೂರ್ಣ ಟೂರ್ನಿ ಯುಕೆಯಲ್ಲಿ ಆಯೋಜನೆಯಾಗಲಿದೆ ಎಂದು ಸುದ್ದಿಯಾಗಿತ್ತು. ಈ ವಿಚಾರವಾಗಿ ಐಸಿಸಿ ಅಪ್‌ಡೇಟ್ ನೀಡಿದೆ.

ICC gives major update on the t20 World Cup 2024 venue confusion

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹಾಗೂ ಐಸಿಸಿ ಎರಡು ಕೂಡ ಜಂಟಿಯಾಗಿ ಈ ಬೆಳವಣಿಗೆಯ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು ಈ ವರದಿಗಳು ಸುಳ್ಳು ಎಂದಿದೆ. ನಿಗದಿಯಂತೆಯೇ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಯುಎಸ್‌ಎ ಆತಿಥ್ಯದಲ್ಲಿಯೇ ನಡೆಯಲಿದೆ ಎಂದು ಮಾಹಿತಿ ನೀಡಿದೆ.

"ಐಸಿಸಿ ಪುರುಷರ ವಿಶ್ವಕಪ್ 2024 ವೆಸ್ಟ ಇಂಡೀಸ್ ಹಾಗೂ ಯುಎಸ್‌ಎಯಿಂದ ಸ್ಥಳಾಂತರವಾಗಿದೆ ಎಂಬ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ. ಐಸಿಸಿ ಈ ಟೂರ್ನಿಯನ್ನು ಆಯೋಜನೆ ಮಾಡುತ್ತಿದ್ದು ಈ ಸುದ್ದಿಗಳಿಗೆ ಅಂತ್ಯಹಾಡಬೇಕು" ಎಂದು ಇಸಿಬಿ ವಕ್ತಾರ ಹೇಳಿಕೆ ನೀಡಿರುವುದಾಗಿ ಕ್ರಿಕ್ ಬಜ್ ವರದಿ ಮಾಡಿದೆ.

ICC gives major update on the t20 World Cup 2024 venue confusion

ಇನ್ನು ಐಸಿಸಿ ವಕ್ತಾರ ಕೂಡ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು ಟಿ20 ವಿಶ್ವಕಪ್ ಟೂರ್ನಿಯನ್ನು ಸ್ಥಳಾಂತರರಿಸುವ ಯಾವುದೇ ಯೋಜನೆ ಐಸಿಸಿ ಮುಂದಿಲ್ಲ ಎಂದಿದ್ದಾರೆ. ಅಲ್ಲದೆ ಇದು ಕೇವಲ ಊಹಾಪೋಹದ ವರದಿ ಎಂದು ನೇರವಾಗಿ ಅಲ್ಲಗಳೆದಿದ್ದಾರೆ. "ಎರಡೂ ಅತಿಥೇಯ ರಾಷ್ಟ್ರಗಳಲ್ಲಿ ಸ್ಥಳ ಪರಿಶೀಲನೆಗಳನ್ನು ಇತ್ತೀಚೆಗೆ ನಡೆಸಲಾಗಿದೆ. ಜೂನ್ 2024ರಲ್ಲಿ ನಡೆಯುವ ಈ ಟೂರ್ನಿಗಾಗಿ ಎಲ್ಲಾ ಸಿದ್ಧತೆಗಳು ಕೂಡ ನಡೆಯುತ್ತಿವೆ" ಎಂದಿದ್ದಾರೆ.

Story first published: Friday, June 9, 2023, 22:10 [IST]
Other articles published on Jun 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+