Afro-Asia Cup: ಭಾರತ-ಪಾಕಿಸ್ತಾನದ ಸ್ಟಾರ್ ಆಟಗಾರರು ಒಂದೇ ತಂಡದಲ್ಲಿ ಆಡುವ ಸಾಧ್ಯತೆ!
ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ದಶಕಗಳ ಬಳಿಕ ಪುನಃ ಆಫ್ರೋ-ಏಪ್ಯಾ ಕಪ್ ಟೂರ್ನಿಯನ್ನು ಆಯೋಜಿಸುವ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಡುವ ಚರ್ಚೆಗಳು ನಡೆಯುತ್ತಿವೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ಯಾದ ಸ್ಟಾರ್ ಆಟಗಾರರನ್ನು ಒಂದೇ ತಂಡದಲ್ಲಿ ಆಡುವುದನ್ನು ನೋಡಿ ಕ್ರಿಕೆಟ್ ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ನಾಯಕ ಬಾಬರ್ ಅಜಮ್ ಒಟ್ಟಿಗೆ ಬ್ಯಾಟಿಂಗ್ ಮಾಡುವ ಅವಕಾಶವಿದೆ. ಜೊತೆಗೆ ಶಾಹೀನ್ ಶಾ ಹಾಗು ಜಸ್ಪ್ರೀತ್ ಬುಮ್ರಾ ಕೂಡ ಜೊತೆಯಾಗಿ ಬೌಲಿಂಗ್ ಮಾಡುವುದುನ್ನು ನೋಡಬಹುದಾಗಿದೆ.

ಮೂಲಗಳ ಪ್ರಕಾರ ಈಗಾಗಲೇ ಆಫ್ರೋ-ಏಪ್ಯಾ ಕಪ್ ಟೂರ್ನಿ ಆಯೋಜಿಸಲು ಪ್ರಯತ್ನಗಳ ಭರದಿಂದ ಸಾಗಿವೆ. 2007ರ ನಂತರ ಮೊದಲ ಬಾರಿಗೆ ಈ ಟೂರ್ನಿ ಆಯೋಜಿಸಲಾಗುತ್ತಿದೆ. 2005 ರಲ್ಲಿ ಆರಂಭವಾದ ಈ ಟೂರ್ನಿಯಲ್ಲಿ ಮತ್ತೆ 2007 ರಲ್ಲಿ ನಡೆದಿತ್ತು.
ಎರಡು ಯಶಸ್ವಿ ಋತುಗಳ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ಟೂರ್ನಿಯನ್ನು ಮರಳಿ ಆರಂಭಿಸಲು ಸಾಧ್ಯವಾಗಲಿಲ್ಲ. 2008 ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯು ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧಕ್ಕೆ ಹುಳಿ ಹಿಂಡಿತ್ತು. ಅಂದಿನಿಂದ ಭಾರತ ಮತ್ತು ಪಾಕಿಸ್ತಾನ (2012) ಒಂದೇ ಒಂದು ದ್ವಿಪಕ್ಷೀಯ ಸರಣಿಯನ್ನು ಆಡಿವೆ.
ಈ ವರ್ಷ ಡಿಸೆಂಬರ್‌ನಲ್ಲಿ ಜಯ್ ಶಾ ನೂತನ ಐಸಿಸಿ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಆಫ್ರೋ-ಏಷ್ಯಾ ಕಪ್ ಅನ್ನು ಮರುಪ್ರಾರಂಭಿಸುವ ಸಾಧ್ಯತೆಗಳಿಗೆ. ಕಳೆದ ಬಾರಿ ಈ ಟೂರ್ನಿಯನ್ನು ಏಕದಿನ ಮಾದರಿಯಲ್ಲಿ ಆಡಲಾಗಿತ್ತು. ಈ ಬಾರಿ ಅದರ ಸ್ವರೂಪವನ್ನು ಟಿ20ಗೆ ಬದಲಾಯಿಸಬಹುದು. ಆಫ್ರಿಕನ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸಮೋದ್ ದಾಮೋದರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
2005ರ ಆಫ್ರೋ-ಏಷ್ಯಾ ಕಪ್ ಮೊದಲ ಆವೃತ್ತಿಯ ಏಷ್ಯನ್ ಪ್ಲೇಯಿಂಗ್-11 ರಲ್ಲಿ ವೀರೇಂದ್ರ ಸೆಹ್ವಾಗ್, ಶಾಹಿದ್ ಅಫ್ರಿದಿ, ಕುಮಾರ್ ಸಂಗಕ್ಕಾರ, ಮಹೇಲಾ ಜಯವರ್ಧನೆ, ಇಂಜಮಾಮ್ ಉಲ್ ಹಕ್, ಆಶಿಶ್ ನೆಹ್ರಾ, ಜಹೀರ್ ಖಾನ್ ಮತ್ತು ಶೋಯೆಬ್ ಅಖ್ತರ್ ಇದ್ದರು. ಎರಡು ವರ್ಷಗಳ ನಂತರ 2007ರಲ್ಲಿ ನಡೆದ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ 139 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications