ಕ್ರಿಕೆಟ್ ನಲ್ಲಿ ಇನ್ಮುಂದೆ ಹೆಲ್ಮೆಟ್ ಧರಿಸುವುದು ಕಡ್ಡಾಯ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಐಸಿಸಿ ಹೊಸ ನಿಯಮ ಜಾರಿಗೆ ತಂದಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬ್ಯಾಟ್ಸ್ಮನ್ಗಳು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದು ಮಹಿಳಾ ಕ್ರಿಕೆಟ್ಗೂ ಇದು ಅನ್ವಯವಾಗಲಿದೆ.
ಈ ಹೊಸ ನಿಯಮವನ್ನು ಜನವರಿ 1ರಂದೇ ಐಸಿಸಿಯ ವಸ್ತ್ರಸಂಹಿತೆ ನಿಬಂಧನೆಯಲ್ಲಿ ಅಳವಡಿಸಲಾಗಿದ್ದು, ಫೆಬ್ರವರಿ 1ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ. ಇದರನ್ವಯ ಬ್ಯಾಟಿಂಗ್ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿರಲಿದೆ. ಅಲ್ಲದೆ ಈ ಹೆಲ್ಮೆಟ್ ಹೊಸ ಬ್ರಿಟಿಷ್ ಸ್ಟ್ಯಾಂಡರ್ಡ್ ನಿಬಂಧನೆಗಳಿಗೆ ಒಳಪಟ್ಟಿರುವುದು ಕೂಡ ಕಡ್ಡಾಯವಾಗಿದೆ.

ಎಲ್ಲ ಬ್ಯಾಟ್ಸ್ಮನ್ಗಳು ಹೆಲ್ಮೆಟ್ ಧರಿಸುವ ಮೂಲಕ ಸುರಕ್ಷಿತವಾಗಿರ ಬೇಕೆಂಬುದು ಈ ನಿಯಮ ಜಾರಿಗೆ ಕಾರಣ ಎಂದು ಐಸಿಸಿ ಜನರಲ್ ಮ್ಯಾನೇಜರ್ (ಕ್ರಿಕೆಟ್) ಜೆಫ್ ಅಲ್ಲರ್ಡೈಸ್ ತಿಳಿಸಿದ್ದಾರೆ. ಕಳೆದ ವರ್ಷ ಜೂನ್ನಲ್ಲಿ ಐಸಿಸಿ ಕ್ರಿಕೆಟ್ ಸಮಿತಿ ಹೆಲ್ಮೆಟ್ ಕಡ್ಡಾಯಗೊಳಿಸುವ ಬಗ್ಗೆ ಶಿಫಾರಸು ಸಲ್ಲಿಸಿತ್ತು.
ನಿಯಮ ಪಾಲಿಸದಿದ್ದರೆ ನಿಷೇಧ: 'ಹೆಲ್ಮೆಟ್ ಕಡ್ಡಾಯ' ನಿಯಮವನ್ನು ಬ್ಯಾಟ್ಸ್ಮನ್ ಪಾಲಿಸದಿದ್ದರೆ ಶಿಕ್ಷೆಯನ್ನೂ ವಿಧಿಸಲಾಗುವುದು. ಫೆ. 1ರ ನಂತರ ಬ್ಯಾಟ್ಸ್ ಮನ್ ಮೊದಲ 2 ಪಂದ್ಯಗಳ ವೇಳೆ ಈ ನಿಯಮ ಪಾಲಿಸದೇ ಇದ್ದಾಗ ಎಚ್ಚರಿಕೆ ನೀಡಲಾಗುವುದು. ನಂತರ 3ನೇ ಬಾರಿ ಈ ನಿಯಮ ಉಲ್ಲಂಘಿಸಿದಾಗ 1 ಪಂದ್ಯ ನಿಷೇಧ ಶಿಕ್ಷೆ ವಿಧಿಸಲಾಗುವುದು ಎಂದು ಐಸಿಸಿ ತಿಳಿಸಿದೆ. 2014ರ ನವೆಂಬರ್ನಲ್ಲಿ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ ಫಿಲ್ ಹ್ಯೂಸ್ ಬೌನ್ಸರ್ನಲ್ಲಿ ಚೆಂಡೇಟು ತಿಂದು ಮೃತಪಟ್ಟ ಬಳಿಕ ಕ್ರಿಕೆಟ್ನಲ್ಲಿ ಸುರಕ್ಷತೆಯ ಕಾಳಜಿ ಹೆಚ್ಚಾಗಿರುವುದು ಗಮನಾರ್ಹ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: ICC introduces new helmet regulations
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications