For Quick Alerts
ALLOW NOTIFICATIONS  
For Daily Alerts
 

ICC: ಐಸಿಸಿಯ ಗದ್ದುಗೆಯ ಮೇಲೆ ಜಯ್‌ ಶಾ ಕಣ್ಣು: ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿಡುವ ಸಾಧ್ಯತೆ

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿ ಅಧ್ಯಕ್ಷರಾಗುವತ್ತ ಚಿತ್ತ ನೆಟ್ಟಿದ್ದಾರೆ. ಪ್ರಸ್ತುತ, ಶಾ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ಎಸಿಸಿಯ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಡೆಯಲಿದ್ದು, ಇದರಲ್ಲಿ ಅಧ್ಯಕ್ಷ ಜಯ್ ಶಾ ಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.

ಇಂಡೋನೇಷ್ಯಾದ ಬಾಲಿಯಲ್ಲಿ ಮಂಗಳವಾರದಿಂದ ಎಸಿಸಿಯ ವಾರ್ಷಿಕ ಸಾಮಾನ್ಯ ಸಭೆ ಆರಂಭವಾಗಿದೆ. 2 ದಿನಗಳ ಕಾಲ ಸಭೆ ನಡೆಯಲಿದ್ದು, ಜನವರಿ 31ರವರೆಗೆ ನಡೆಯಲಿದೆ. ಎಸಿಸಿಯ ಪ್ರಸಾರ ಹಕ್ಕುಗಳ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು.

ICC: Jai Shah may step down as ACC chairman: Will contest for ICC President

ಐಸಿಸಿ ಅಧ್ಯಕ್ಷರಾಗಲು ಜಯ್ ಶಾ ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ನವೆಂಬರ್‌ನಲ್ಲಿ ಐಸಿಸಿ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಇದರಲ್ಲಿ ಜಯ್ ಶಾ ಭಾಗವಹಿಸಬಹುದು. ಕ್ರಿಕ್‌ಬಝ್‌ನ ವರದಿಯ ಪ್ರಕಾರ, ಜಯ್ ಶಾ ಎಸಿಸಿ ಅಧ್ಯಕ್ಷ ಸ್ಥಾನವನ್ನು ತೊರೆಯುವತ್ತ ಗಮನ ಹರಿಸಿದ್ದಾರೆ ಎಂದು ತಿಳಿಸಿದೆ.

ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಜಯ್ ಶಾ ಭಾಗವಹಿಸಿ ಗೆದ್ದರೆ ಐಸಿಸಿ ಅಧ್ಯಕ್ಷರಾಗಲಿದ್ದಾರೆ. ಅಧ್ಯಕ್ಷರಾಗಲು, ಐಸಿಸಿ ಅಧ್ಯಕ್ಷರು ಸ್ವತಂತ್ರರಾಗಿರುವ ಕಾರಣ ಅವರು ಎಸಿಸಿ ಜೊತೆಗೆ ಬಿಸಿಸಿಐ ಹುದ್ದೆಯನ್ನು ತೊರೆಯಬೇಕಾಗುತ್ತದೆ. ಪ್ರಸ್ತುತ, ಗ್ರೆಗ್ ಬಾರ್ಕ್ಲೇ ಐಸಿಸಿ ಅಧ್ಯಕ್ಷರಾಗಿದ್ದಾರೆ. ನವೆಂಬರ್ 2022 ರಲ್ಲಿ ನಡೆದ ಚುನಾವಣೆಯಲ್ಲಿ, ಗ್ರೆಗ್ ಬಾರ್ಕ್ಲೇ ಎರಡು ವರ್ಷಗಳ ಕಾಲ ICC ಅಧ್ಯಕ್ಷರಾಗಿ ಮರು ಆಯ್ಕೆಯಾದರು. ಈಗ ಅವರ ಅಧಿಕಾರಾವಧಿ ಈ ವರ್ಷದ ನವೆಂಬರ್‌ನಲ್ಲಿ ಕೊನೆಗೊಳ್ಳಲಿದೆ.

ICC: Jai Shah may step down as ACC chairman: Will contest for ICC President

ಸಭೆಯಲ್ಲಿ ಚರ್ಚೆ ಏನು?

ಎಸಿಸಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಟಿ20 ಮಾದರಿಯಲ್ಲಿ ನಡೆಯಲಿರುವ ಏಷ್ಯಾಕಪ್‌ನ ಸ್ಥಳದ ಕುರಿತು ಚರ್ಚೆ ನಡೆಯಲಿದೆ. ಏಷ್ಯಾಕಪ್ ಅನ್ನು ಆಯೋಜಿಸುವ ಅನೇಕ ಸ್ಪರ್ಧಿಗಳಲ್ಲಿ ಒಮಾನ್ ಮತ್ತು ಯುಎಇ ಸೇರಿವೆ ಎಂದು ವರದಿಗಳಿಂದ ತಿಳಿದು ಬಂದಿದೆ. ಇದಕ್ಕೂ ಮೊದಲು 2023ರಲ್ಲಿ ಏಷ್ಯಾಕಪ್‌ಗೆ ಪಾಕಿಸ್ತಾನ ಆತಿಥ್ಯ ವಹಿಸಬೇಕಿತ್ತು, ಆದರೆ ಭಾರತ ಪಾಕಿಸ್ತಾನ ಪ್ರವಾಸಕ್ಕೆ ನಿರಾಕರಿಸಿದ ನಂತರ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಸ್ಟಾರ್‌ ನೆಟ್‌ವರ್ಕ್‌ಗೆ ಎಸಿಸಿ ಮಾಧ್ಯಮ ಹಕ್ಕು

ಏಷ್ಯಾದ ಎಲ್ಲಾ ಕ್ರಿಕೆಟ್ ಮಂಡಳಿಗಳ ಸದಸ್ಯರು ವಾರ್ಷಿಕ ಸಭೆಯಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಎಸಿಸಿ ಮಾಧ್ಯಮ ಹಕ್ಕುಗಳ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು. ಇದರ ಅಡಿಯಲ್ಲಿ ಏಷ್ಯಾ ಕಪ್‌ನಂತಹ ದೊಡ್ಡ ಪಂದ್ಯಾವಳಿಯನ್ನು ಪ್ರಸಾರ ಮಾಡಲಾಗುತ್ತದೆ. ಇದರಲ್ಲಿ ಅಂಡರ್-23, ಅಂಡರ್-19 ಮತ್ತು ಮಹಿಳೆಯರ ಏಷ್ಯಾಕಪ್ ಪಂದ್ಯಗಳನ್ನೂ ತೋರಿಸಲಾಗುವುದು. ಪ್ರಸ್ತುತ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಡಿಜಿಟಲ್ ಹಕ್ಕುಗಳನ್ನು ಹೊಂದಿದೆ ಮತ್ತು ಸ್ಟಾರ್ ಟಿವಿ ಹಕ್ಕುಗಳನ್ನು ಹೊಂದಿದೆ. 8 ವರ್ಷಗಳ ಹಿಂದೆ ಸ್ಟಾರ್ ಹಕ್ಕುಗಳನ್ನು ಖರೀದಿಸಿದ್ದರು. ಮಾಧ್ಯಮ ಹಕ್ಕುಗಳ ಹರಾಜಿಗಾಗಿ ಎಸಿಸಿ ಎಲ್ಲಾ ಉನ್ನತ ಪ್ರಸಾರಕರನ್ನು ಭೋಜನಕ್ಕೆ ಆಹ್ವಾನಿಸಿದೆ.

ನವೆಂಬರ್‌ನಲ್ಲಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿ 2 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಜಯ್ ಶಾ ಅವರು ತಮ್ಮ ಹುದ್ದೆಯ ಒಂದು ವರ್ಷವನ್ನು ಪೂರ್ಣಗೊಳಿಸಿದ್ದಾರೆ. ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕಿರುವ ಕಾರಣ ಮುಂದಿನ ಚುನಾವಣೆಗೂ ಮುನ್ನ ಅವರು ತಮ್ಮ ಹುದ್ದೆ ತೊರೆಯಲಿದ್ದಾರೆ ಎಂದು ನಂಬಲಾಗಿದೆ. ಈ ವರ್ಷದ ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಚುನಾವಣೆ ನಡೆಯಲಿದೆ.

Story first published: Tuesday, January 30, 2024, 19:27 [IST]
Other articles published on Jan 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+