ಪುರುಷರ ಕ್ರಿಕೆಟ್ ವರ್ಲ್ಡ್ ಕಪ್ ಸೂಪರ್ ಲೀಗ್ ಆರಂಭಿಸಿದ ಐಸಿಸಿ

ದುಬೈ, ಜುಲೈ 27: ಜುಲೈ 27ರ ಸೋಮವಾರ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಅನ್ನು ಅಧಿಕೃತವಾಗಿ ಆರಂಭಿಸಿದೆ. ಈ ಲೀಗ್‌ನ ಪಂದ್ಯಗಳು ಜುಲೈ 30ರಿಂದ ನಡೆಯಲಿರುವ ಇಂಗ್ಲೆಂಡ್ vs ಐರ್ಲೆಂಡ್ ಏಕದಿನ ಸರಣಿಯೊಂದಿಗೆ ಆರಂಭಗೊಳ್ಳಲಿದೆ.
2023ರಲ್ಲಿ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗಾಗಿ ತಂಡಗಳನ್ನು ಆರಿಸುವುದಕ್ಕಾಗಿ ಐಸಿಸಿಯು ಈ ಕ್ರಿಕೆಟ್ ವರ್ಲ್ಡ್ ಕಪ್ ಸೂಪರ್ ಲೀಗ್ ಆರಂಭಿಸುತ್ತಿದೆ. ಇದರಲ್ಲಿ ಅಗ್ರ ಸ್ಥಾನದಲ್ಲಿರುವ 7 ತಂಡಗಳು ಸ್ವಯಂಚಾಲಿತವಾಗಿ ಭಾರತದಲ್ಲಿ ನಡೆಯುವ ಪ್ರತಿಷ್ಠಿತ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.
ಒಟ್ಟು 13 ತಂಡಗಳು ಕ್ರಿಕೆಟ್ ವರ್ಲ್ಡ್ ಕಪ್ ಸೂಪರ್ ಲೀಗ್‌ನಲ್ಲಿ ಸ್ಪರ್ಧಿಸಲಿವೆ. ಇದರಲ್ಲಿ 12 ಐಸಿಸಿ ಸಂಪೂರ್ಣ ಸದಸ್ಯತ್ವ ಪಡೆದಿರುವ ತಂಡಗಳಾದರೆ ಇನ್ನೊಂದು ನೆದರ್ಲ್ಯಾಂಡ್ಸ್. ನೆದರ್ಲ್ಯಾಂಡ್ಸ್ ತಂಡ ಐಸಿಸಿ ವಿಶ್ವಕಪ್ ಲೀಗ್ 2015-17ರಲ್ಲಿ ಗೆದ್ದು ಅರ್ಹತೆ ಪಡೆದುಕೊಂಡಿತ್ತು.
'ಈ ಲೀಗ್ ಮುಂದಿನ ಮೂರು ವರ್ಷಗಳಲ್ಲಿ ಏಕದಿನ ಕ್ರಿಕೆಟ್‌ಗೆ ಪ್ರಸ್ತುತತೆ ಮತ್ತು ಸಂದರ್ಭವನ್ನು ತರಲಿದೆ. ಇದು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ಕ್ಕೆ ಅರ್ಹತೆ ನಿರ್ಧರಿಸಲಿದೆ. ಈ ಸೂಪರ್ ಲೀಗ್ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಲೀಗ್ ಕ್ರಿಕೆಟ್‌ನ ಹೆಚ್ಚಿನ ಮನರಂಜನೆ ನೀಡಲಿದೆ,' ಎಂದು ಐಸಿಸಿ ಕಾರ್ಯಾಚರಣೆಯ ಪ್ರಧಾನ ವ್ಯವಸ್ಥಾಪಕ ಜೆಫ್ ಅಲ್ಲಾರ್ಡೈಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications