T20 World Cup 2024 ಲೋಗೋ ಬಿಡುಗಡೆ ಗೊಳಿಸಿದ ಐಸಿಸಿ, ಹೊಸ ವಿನ್ಯಾಸದ ಸಿಕ್ರೇಟ್ ಬಗ್ಗೆ ಇಲ್ಲಿದೆ ಮಾಹಿತಿ
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಐಸಿಸಿ ಮುಂದಿನ ವರ್ಷ ನಡೆಯಲಿರುವ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ಟಿ20 ವಿಶ್ವಕಪ್‌ಗಾಗಿ ಹೊಸ ಲೋಗೋಗಳನ್ನು ಬಿಡುಗಡೆ ಮಾಡಿದೆ.
ಪುರುಷರ ಕ್ರಿಕೆಟ್ T20 ವಿಶ್ವಕಪ್ ಅನ್ನು ಜೂನ್ 4 ರಿಂದ ಜೂನ್ 30, 2024 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎನಲ್ಲಿ ಆಯೋಜಿಸಲಾಗುವುದು. ಮಹಿಳಾ ಕ್ರಿಕೆಟ್ ಟಿ 20 ವಿಶ್ವಕಪ್ ಅನ್ನು ಬಾಂಗ್ಲಾದೇಶದಲ್ಲಿ ಆಯೋಜಿಸಲಾಗುವುದು, ಮಹಿಳಾ ಕ್ರಿಕೆಟ್ ಟಿ 20 ದಿನಾಂಕಗಳು ಮತ್ತು ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ. ಐಸಿಸಿ ಟಿ 20 ವಿಶ್ವಕಪ್‌ಗಾಗಿ ಹೊಸ ಲೋಗೋವನ್ನು ಬಹಿರಂಗಪಡಿಸುವ ಮೂಲಕ ಪುರುಷರ ಮತ್ತು ಮಹಿಳಾ ಕ್ರಿಕೆಟ್‌ನ ಈ ಎರಡು ಮೆಗಾ ಈವೆಂಟ್‌ಗಳಿಗೆ ಸಿದ್ಧತೆಗಳನ್ನು ಆರಂಭಿಸಿದೆ.

ಹೊಸ ಲೋಗೋ ಹಿಂದಿನ ಉದ್ದೇಶವನ್ನು ಐಸಿಸಿ ವಿಡಿಯೋ ಮುಲಕ ಬಹಿರಂಗ ಪಡಿಸಿದೆ. ಟಿ20 ಸ್ವರೂಪದಲ್ಲಿ ವೇಗವಾಗಿ ಬದಲಾಗುತ್ತಿರುವ ಆಟವನ್ನು ಲೋಗೋ ಪ್ರತಿಬಿಂಬಿಸುವಂತಿದೆ. ಹೊಸ ಲೋಗೋ ಮುಂದಿನ ವರ್ಷ ವಿಶ್ವಕಪ್ ಅನ್ನು ಆಯೋಜಿಸುವ ಆತಿಥೇಯ ರಾಷ್ಟ್ರದ ಟೆಕಶ್ಚರ್ ಮತ್ತು ಪ್ಯಾಟರ್ನ್ ಒಳಗೊಂಡಿದೆ. ಅಲ್ಲದೆ ಈ ಲೋಗೋ ಟಿ20 ಕ್ರಿಕೆಟ್‌ನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಲೋಗೋ ಬ್ಯಾಟ್, ಬಾಲ್ ಮತ್ತು ಶಕ್ತಿಯ ಸೃಜನಶೀಲ ಮಿಶ್ರಣವಾಗಿದೆ. ಇದು ಟಿ 20 ಕ್ರಿಕೆಟ್‌ನ ಪ್ರಮುಖ ಭಾಗ ಎಂದು ತೋರಿಸುವ ಸಂಕೇತ ಎಂದು ಐಸಿಸಿ ಹೇಳಿದೆ.
ಈ ಲಾಂಛನದಲ್ಲಿ ಬರೆದಿರುವ T20 ಪದದ ಅಕ್ಷರದ ವಿನ್ಯಾಸ, ಚೆಂಡು ಅತ್ಯಂತ ವೇಗವಾಗಿ ಬ್ಯಾಟ್ ಗೆ ಬಡಿದು ಬ್ಯಾಟ್ ಸ್ವಿಂಗ್ ಆದಂತೆ ತೋರುತ್ತದೆ. ಈ ಮೂರು ಅಕ್ಷರಗಳನ್ನು ಅಂಕುಡೊಂಕು ಮಾದರಿಯ ವಿನ್ಯಾಸದಲ್ಲಿ ಅಕ್ಕಪಕ್ಕದಲ್ಲಿ ಜೋಡಿಸಲಾಗಿದೆ. ಇದು ಬ್ಯಾಟ್ ಮತ್ತು ಚೆಂಡಿನ ನಡುವಿನ ಹೊಡೆತದಿಂದ ಉಂಟಾಗುವ ಕಂಪನ ಮತ್ತು ಪ್ರಚಂಡ ಶಕ್ತಿಯನ್ನು ಪ್ರತಿನಿಧಿಸುತ್ತದೆ.
ಐಸಿಸಿ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್‌ನ ಜನರಲ್ ಮ್ಯಾನೇಜರ್ 2024 ರ T20 ವಿಶ್ವಕಪ್‌ಗಾಗಿ ಪರಿಚಯಿಸಲಾದ ಹೊಸ ಲೋಗೋವನ್ನು ಶ್ಲಾಘಿಸಿದ್ದಾರೆ. ಮತ್ತು ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ನಡೆಯಲಿರುವ ಪುರುಷರ T20 ವಿಶ್ವಕಪ್ 2024 ಗೆ ತಯಾರಿ ಮಾಡಲು ನಮಗೆ ಕೇವಲ 6 ತಿಂಗಳುಗಳಿವೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications