For Quick Alerts
ALLOW NOTIFICATIONS  
For Daily Alerts
 

ICC Test Ranking: ಐಸಿಸಿ ದೊಡ್ಡ ಎಡವಟ್ಟು: ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದ ಟೀಂ ಇಂಡಿಯಾ

ICC Makes Mistake : ICC Official Website Puts Team India As No. 1 Test Team Ahead Of Australia

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ದೊಡ್ಡ ಪ್ರಮಾದವನ್ನೇ ಮಾಡಿದೆ. ಐಸಿಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಆದ ತಾಂತ್ರಿಕ ದೋಷದ ಕಾರಣದಿಂದ ಟೀಂ ಇಂಡಿಯಾ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಸ್ತಾನಕ್ಕೇರಿತ್ತು.

126 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ಬದಲಿಗೆ 115 ಅಂಕಗಳನ್ನು ಹೊಂದಿರುವ ಟೀಂ ಇಂಡಿಯಾ ನಂಬರ್ 1 ಸ್ಥಾನದಲ್ಲಿತ್ತು. ಆಸ್ಟ್ರೇಲಿಯಾ 126 ಅಂಕಗಳ ಬದಲಾಗಿ 111 ಅಂಕಗಳನ್ನು ಹೊಂದಿದೆ ಎಂದು ವೆಬ್‌ಸೈಟ್‌ನಲ್ಲಿ ಕಾಣಿಸಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಐಸಿಸಿ ತಕ್ಷಣವೇ ತಪ್ಪನ್ನು ಸರಿಪಡಿಸಿಕೊಂಡಿದೆ.

126 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ. 115 ಅಂಕಗಳನ್ನು ಹೊಂದಿರುವ ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಫೆಬ್ರವರಿ 9ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಗೆದ್ದರೆ ಟೀಂ ಇಂಡಿಯಾ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಲಿದೆ.

ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ ಮೊದಲನೇ ಸ್ಥಾನದಲ್ಲಿದ್ದರೆ, ಏಕದಿನ ರ್‍ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ. ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಮೊದಲನೇ ಸ್ಥಾನದಲ್ಲಿ ಮುಂದುವರೆದಿದೆ.

ICC Makes Mistake : ICC Official Website Puts Team India As No. 1 Test Team Ahead Of Australia

ಎಲ್ಲಾ ಮಾದರಿಯಲ್ಲೂ ನಂಬರ್ 1 ಸ್ಥಾನಕ್ಕೇರಲು ಅವಕಾಶ

ಸದ್ಯ ಟಿ20 ಮಾದರಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಟೀಂ ಇಂಡಿಯಾಗೆ ಎಲ್ಲಾ ಮಾದರಿಯಲ್ಲೂ ನಂಬರ್ 1 ಸ್ಥಾನಕ್ಕೇರಲು ಅವಕಾಶ ಸಿಕ್ಕಿದೆ. ನ್ಯೂಜಿಲೆಂಡ್ 117 ಅಂಕಗಳೊಂದಿಗೆ ಸದ್ಯ ಅಗ್ರಸ್ಥಾನದಲ್ಲಿದೆ, 110 ಅಂಕಗಳನ್ನು ಹೊಂದಿರುವ ಟೀಂ ಇಂಡಿಯಾ 4ನೇ ಸ್ಥಾನದಲ್ಲಿದೆ.

ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದರೆ ಟೀಂ ಇಂಡಿಯಾ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದ್ದು, ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್ ಅಂಕಗಳನ್ನು ಕಳೆದುಕೊಂಡು 4ನೇ ಸ್ಥಾನಕ್ಕೆ ಕುಸಿಯಲಿದೆ.

ICC Makes Mistake : ICC Official Website Puts Team India As No. 1 Test Team Ahead Of Australia

ಟೆಸ್ಟ್ ಸರಣಿ ಗೆದ್ದರೆ ಎರಡು ಲಾಭ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿ ಬಳಿಕ, ಭಾರತ ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು ಆಡಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಗೆಲುವು ಸಾಧಿಸಿದರೆ, ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವುದು ಮಾತ್ರವಲ್ಲದೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ಫೆಬ್ರವರಿ ಫೆಬ್ರವರಿ 9 ರಂದು ನಾಗ್ಪುರದಲ್ಲಿ ಮೊದಲ ಟೆಸ್ಟ್ ಪ್ರಾರಂಭವಾಗಲಿದೆ. ಸರಣಿಯ ಉಳಿದ ಮೂರು ಟೆಸ್ಟ್‌ಗಳು ದೆಹಲಿ (ಫೆಬ್ರವರಿ 17-21), ಧರ್ಮಶಾಲಾ (ಮಾರ್ಚ್ 1-5), ಮತ್ತು ಅಹಮದಾಬಾದ್ (ಮಾರ್ಚ್ 9-13) ನಲ್ಲಿ ನಡೆಯಲಿವೆ.

ತಾಂತ್ರಿಕ ದೋಷದಿಂದಾಗಿ ಅಲ್ಲ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು ಭಾರತ ತಂಡ ಅಧಿಕೃತವಾಗಿ ನಂಬರ್ 1 ಪಟ್ಟಕ್ಕೇರಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ.

Story first published: Tuesday, January 17, 2023, 16:29 [IST]
Other articles published on Jan 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+