Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ದಶಕದ ಟೆಸ್ಟ್ ತಂಡದಲ್ಲಿ ಇಬ್ಬರು ಟೀಮ್ ಇಂಡಿಯಾ ಆಟಗಾರರು

ICC Mens test Team of the Decade: 2 Indians named in the list

ಬೆಂಗಳೂರು: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2010ರಿಂದ 2020ರ ವರೆಗಿನ ದಶತಕದ ಟೆಸ್ಟ್ ಕ್ರಿಕೆಟ್ ತಂಡ ಪ್ರಕಟಿಸಿದೆ. ಭಾರತೀಯ ಇಬ್ಬರು ಆಟಗಾರರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಟೆಸ್ಟ್‌ ತಂಡದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೆಸರು ಇದೆ.

ಐಸಿಸಿ ಪುರುಷರ ದಶಕದ ಟೆಸ್ಟ್ ತಂಡದಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ. ಆರಂಭಿಕರಾಗಿ ಇಂಗ್ಲೆಂಡ್‌ನ ಅಲಾಸ್ಟೇರ್ ಕುಕ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕಾಣಿಸಿಕೊಂಡಿದ್ದಾರೆ. ಟೆಸ್ಟ್ ತಂಡದಲ್ಲಿ ಇಂಗ್ಲೆಂಡ್‌ನ ಹೆಚ್ಚು ಆಟಗಾರರು ಹೆಸರಿಸಲ್ಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಕೂಡ ತಂಡದಲ್ಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಸ್ಟೇನ್ ಮೈದಾನಕ್ಕಿಳಿದಿದ್ದೇ ಕಡಿಮೆ. ಆದರೆ ಆಡಿದ ಪಂದ್ಯಗಳಲ್ಲಿ ಸ್ಟೇನ್ ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಹೀಗಾಗಿ ಅನುಭವಿ ವೇಗಿಯನ್ನು ಐಸಿಸಿ ದಶಕದ ಟೆಸ್ಟ್ ತಂಡದಲ್ಲಿ ಗುರುತಿಸಿದೆ.

ಐಸಿಸಿ ದಶಕದ ಟೆಸ್ಟ್ ತಂಡ
ಅಲಾಸ್ಟೇರ್ ಕುಕ್ (ಇಂಗ್ಲೆಂಡ್), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ವಿರಾಟ್ ಕೊಹ್ಲಿ (ಭಾರತ, ನಾಯಕ), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಕುಮಾರ ಸಂಗಕ್ಕಾರ (ಶ್ರೀಲಂಕಾ, ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ಆರ್ ಅಶ್ವಿನ್ (ಭಾರತ), ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ), ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್), ಜೇಮ್ಸ್ ಆ್ಯಂಡರ್ಸನ್ (ಇಂಗ್ಲೆಂಡ್).

Story first published: Monday, December 28, 2020, 10:04 [IST]
Other articles published on Dec 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+