For Quick Alerts
ALLOW NOTIFICATIONS  
For Daily Alerts
 

T20 World Cup 2026: ಗರಿಷ್ಠ ರನ್‌ ಕಲೆ ಹಾಕಿದ ಟಾಪ್‌ 5 ಆಟಗಾರರು; ವಿರಾಟ್‌ಗೂ ಸ್ಥಾನ

ಫೆಬ್ರವರಿ 7 ರಿಂದ ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸುತ್ತಿವೆ. ಭಾರತದ ಐದು ಹಾಗೂ ಲಂಕಾದ ಮೂರು ಕ್ರೀಡಾಂಗಣಗಳು ಈ ಮೆಗಾ ಟೂರ್ನಿಗೆ ಸಜ್ಜಾಗಿವೆ. ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಭಾರತದ್ದಾಗಿದೆ. ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಭಾರತ ವಿಶ್ವಕಪ್‌ ಪ್ರವೇಶ ಪಡೆಯಲಿದೆ. ಟಿ20 ವಿಶ್ವಕಪ್‌ನಲ್ಲಿ ಬ್ಯಾಟರ್‌ಗಳು ತಮ್ಮ ಕಲಾತ್ಮಕ ಆಟದಿಂದ ಅಭಿಮಾನಿಗಳ ಮನ ಗೆಲ್ಲುವಲ್ಲಿ ಸಫಲರಾಗಿದ್ದಾರೆ.

ಹೊಡಿ ಬಡಿ ಹಾಗೂ ಸ್ಥಿರ ಆಟದ ಪ್ರದರ್ಶನದ ಮೇಲೆ ಆಟಗಾರರು ಕಣ್ಣು ನೆಟ್ಟಿರುತ್ತಾರೆ. ಈಗಾಗಲೇ 9 ಆವೃತ್ತಿಗಳಲ್ಲಿ ಟಿ20 ವಿಶ್ವಕಪ್ ಆಡಲಾಗಿದೆ. ಈ ವೇಳೆ ಆಟಗಾರರು ಸಹ ತಮ್ಮ ಧಮಾಕೆದಾರ್ ಪ್ರದರ್ಶನದ ಬಲದಿಂದ ರನ್‌ ಮಹಲ್ ಕಟ್ಟಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ರನ್‌ ಕಲೆ ಹಾಕಿದ ಟಾಪ್ 5 ಆಟಗಾರರ ಪಟ್ಟಿ ಇಲ್ಲಿದೆ.

ICC Men s T20 World Cup

ವಿರಾಟ್‌ ಕೊಹ್ಲಿ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್‌ 2024ರ ಫೈನಲ್‌ನಲ್ಲಿ ಆಡಿದ ಆಟ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ. ಇವರು ಈಗಾಗಲೇ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್‌ ಟಿ20 ವಿಶ್ವಕಪ್‌ನಲ್ಲಿ ಒಟ್ಟು 35 ಪಂದ್ಯಗಳನ್ನು ಆಡಿದ್ದು, 58ರ ಸರಾಸರಿಯಲ್ಲಿ 1292 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 15 ಅರ್ಧಶತಕಗಳು ಸಹ ಸೇರಿವೆ. ವಿರಾಟ್‌ ಟಿ20 ವಿಶ್ವಕಪ್‌ನಲ್ಲಿ 111 ಬೌಂಡರಿ ಹಾಗೂ 35 ಸಿಕ್ಸರ್ ಬಾರಿಸಿದ್ದಾರೆ.

ರೋಹಿತ್ ಶರ್ಮಾ

ಈ ಹಿಂದೆ ಆಡಿರುವ ಒಂಬತ್ತು ಟಿ20 ವಿಶ್ವಕಪ್ ಆಡಿರುವ ಆಟಗಾರ ರೋಹಿತ್ ಶರ್ಮಾ. ಇವರು ಆಡಿದ 47 ಪಂದ್ಯಗಳಲ್ಲಿ 34ರ ಸರಾಸರಿಯಲ್ಲಿ 1220 ರನ್‌ ಸಿಡಿಸಿದ್ದಾರೆ. ಈ ವೇಳೆ 12 ಅರ್ಧಶತಕಗಳು ಸಹ ಸೇರಿವೆ. ಟೂರ್ನಿಯಲ್ಲಿ ಅಧಿಕ ಬೌಂಡರಿ ಬಾರಿಸಿರುವ ರೋಹಿತ್‌ 115 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ್ದಾರೆ. ಅಲ್ಲದೆ 50 ಸಿಕ್ಸರ್ ಸಿಡಿಸಿದ್ದಾರೆ.

ಮಹೇಲ ಜಯವರ್ಧನೆ

ಶ್ರೀಲಂಕಾದ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮಹೇಲ ಜಯವರ್ಧನೆ ಸಹ ಅತಿ ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 31 ಪಂದ್ಯಗಳಲ್ಲಿ 1016 ರನ್ ಸಿಡಿಸಿದ್ದಾರೆ. ಇವರ ಬ್ಯಾಟ್‌ನಿಂದ 1 ಶತಕ ಸಹ ಮೂಡಿಬಂದಿದೆ. ಅಲ್ಲದೆ 6 ಅರ್ಧಶತಕಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಮಹೇಲ‌ ಟೂರ್ನಿಯಲ್ಲಿ 111 ಬೌಂಡರಿ ಸಿಡಿಸಿದ್ದಾರೆ. ಅಲ್ಲದೆ 25 ಸಿಕ್ಸರ್ ಚಚ್ಚಿದ್ದಾರೆ.

ಜೋಸ್‌ ಬಟ್ಲರ್‌

ಇಂಗ್ಲೆಂಡ್ ತಂಡದ ಸ್ಟಾರ್‌ ಬ್ಯಾಟರ್‌ ಜೋಸ್‌ ಬಟ್ಲರ್‌ ಸಹ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಆಟಗಾರ. ಇವರು ಆಡಿದ 35 ಪಂದ್ಯಗಳಲ್ಲಿ 1013 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 5 ಅರ್ಧಶತಕಗಳು ಸಹ ಸೇರಿವೆ.

ಡೇವಿಡ್‌ ವಾರ್ನರ್

ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್‌ ಸಹ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಆಡಿದ 41 ಪಂದ್ಯಗಳಲ್ಲಿ 25ರ ಸರಾಸರಿಯಲ್ಲಿ 984 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಸೇರಿವೆ. ಡೇವಿಡ್‌ ವಾರ್ನರ್ ಸಹ ಮೆಗಾ ಟೂರ್ನಿಯಲ್ಲಿ 100ಕ್ಕೂ ಹೆಚ್ಚು ಬೌಂಡರಿ ಬಾರಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರ.

Story first published: Sunday, February 1, 2026, 16:37 [IST]
Other articles published on Feb 1, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+