ಆ್ಯಷಸ್ ಸರಣಿ ಟೆಸ್ಟ್ ಫಿಕ್ಸ್ ಆಗಿಲ್ಲ : ಐಸಿಸಿ ಸ್ಪಷ್ಟನೆ
ಪರ್ತ್, ಡಿಸೆಂಬರ್ 14 : ಆ್ಯಷಸ್ ಟೆಸ್ಟ್ ಸರಣಿಯ ಪರ್ತ್ ಪಂದ್ಯಕ್ಕಾಗಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಮಿತಿಯ ಜನರಲ್ ಮ್ಯಾನೇಜರ್ ಅಲೆಕ್ಸ್ ಮಾರ್ಷಲ್ ಸ್ಪಷ್ಟಪಡಿಸಿದ್ದಾರೆ.
ದಿ ಸನ್ ಪತ್ರಿಕೆ ನಡೆಸಿದ್ದರ ತನಿಖಾ ವರದಿಯ ಪ್ರಕಾರ, ಮ್ಯಾಚ್ ಫಿಕ್ಸಿಂಗಿಗೆ ಸಂಬಂಧಿಸಿದಂತೆ ಖಚಿತ ಮಾಹಿತಿ ಬೇಕಿದ್ದರೆ ಹಣ ನೀಡಬೇಕೆಂಬ ಬೇಡಿಕೆಯನ್ನು ತನ್ನ ಪತ್ರಿಕೆಯ ಅಂಡರ್ ಕವರ್ ವರದಿಗಾರರಿಗೆ ಇಡಲಾಗಿತ್ತು. ಈ ಟೆಸ್ಟ್ ಡಿಸೆಂಬರ್ 14ರಿಂದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಆರಂಭವಾಗುತ್ತಿದ್ದು, ಇದಕ್ಕೆ ಮ್ಯಾಚ್ ಫಿಕ್ಸಿಂಗ್ ಕಳಂಕ ಅಂಟಿಕೊಂಡಿದೆ.

"ದಿ ಸನ್ ನಡೆಸಿದ್ದ ತನಿಖಾ ವರದಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ತರಿಸಿಕೊಳ್ಳಲಾಗಿದೆ. ಈ ಆರೋಪಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ, ಇತರ ರಾಷ್ಟ್ರಗಳ ಸದಸ್ಯರಿರುವ ಭ್ರಷ್ಟಾಚಾರ ವಿರೋಧಿ ಸಮಿತಿಯಿಂದ ತನಿಖೆಗೆ ಒಳಪಡಿಸಲಾಗುವುದು" ಎಂದು ಅಲೆಕ್ಸ್ ಹೇಳಿದ್ದಾರೆ.
ಆದರೆ, ಎಲ್ಲ ದಾಖಲಾತಿಗಳ ಮೊದಲ ಪರಾಮರ್ಶೆಯ ಪ್ರಕಾರ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಕ್ಕೆ, ದಿ ಸನ್ ಬಳಿಯಿಂದಲಾಗಲಿ, ಈ ಪಂದ್ಯ ಕಳಂಕಿತವಾಗಿದೆ ಎಂದು ಹೇಳುವುದಕ್ಕೆ ಯಾವುದೇ ಪುರಾವೆ ಇಲ್ಲ. ಎರಡೂ ತಂಡಗಳ ಯಾವುದೇ ಆಟಗಾರರು ಯಾರೇ ಬುಕ್ಕಿಯ ಜೊತೆಗೆ ಸಂಪರ್ಕ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications