Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಪಂತ್ ಸೇರಿ ಮೂವರು ನಾಮನಿರ್ದೇಶನ

ICC nominates Rishabh Pant and two others for ICC Men’s Player of the Month

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸ ಸರಣಿಯಲ್ಲಿ ಭಾರತ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವ ಬ್ಯಾಟ್ಸ್‌ಮನ್‌ ರಿಷಭ್ ಪಂತ್, ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ)ನ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್ ಮತ್ತು ಐರ್ಲೆಂಡ್‌ನ ಪೌಲ್ ಸ್ಟಿರ್ಲಿಂಗ್ ಕೂಡ ಇದೇ ಪ್ರಶಸ್ತಿಗೆ ನಾಮನಿರ್ದೇಶಿಸಲ್ಪಟ್ಟಿದ್ದಾರೆ.

ಜನವರಿ ತಿಂಗಳ ಪ್ರಶಸ್ತಿಗಾಗಿ ಐಸಿಸಿ ನಾಮನಿರ್ದೇಶನ ಘೋಷಿಸಿದೆ. ಇದು ಈ ಪ್ರಶಸ್ತಿಗಾಗಿ ಘೋಷಿಸಲ್ಪಟ್ಟ ಮೊದಲ ನಾಮನಿರ್ದೇಶನ. ಅತ್ಯುತ್ತಮ ಸಾಧನೆಗಾಗಿ ಈ ಪ್ರಶಸ್ತಿಯನ್ನು ವರ್ಷದುದ್ದಕ್ಕೂ ಪುರುಷ-ಮಹಿಳೆಯರು ಇಬ್ಬರಿಗೂ ನೀಡಿ ಗೌರವಿಸಲಾಗುತ್ತದೆ, ಸಂಭ್ರಮಿಸಲಾಗುತ್ತದೆ ಎಂದು ಐಸಿಸಿ ಹೇಳಿದೆ.

ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ 23ರ ಹರೆಯದ ರಿಷಭ್ ಪಂತ್ ಸಿಡ್ನಿ ಟೆಸ್ಟ್‌ನಲ್ಲಿ 97 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಸೋಲುವುದರಲ್ಲಿದ್ದ ಭಾರತ ಡ್ರಾ ಸಾಧಿಸಿತ್ತು. ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಪಂತ್ ಅಜೇಯ 89 ರನ್ ಬಾರಿಸಿದ್ದರು. ಈ ಪಂದ್ಯದ ಗೆಲುವಿನೊಂದಿಗೆ ಭಾರತ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದು ದಾಖಲೆ ನಿರ್ಮಿಸಿತ್ತು.

ಜನವರಿಯಲ್ಲಿ ಜೋ ರೂಟ್‌ ಅವರು ಟೆಸ್ಟ್‌ನಲ್ಲಿ 106.50.ರ ಸರಾಸರಿಯಂತೆ 426 ರನ್ ಬಾರಿಸಿದ್ದರು. ಇನ್ನು ರಿಷಭ್ ಪಂತ್ 81.66ರ ಸರಾಸರಿಯಲ್ಲಿ 245 ಟೆಸ್ಟ್‌ ರನ್ ಗಳಿಸಿದ್ದರು. ಪೌಲ್ ಸ್ಟಿರ್ಲಿಂಗ್ ಅವರು 105.00ರ ಸರಾಸರಿಯಲ್ಲಿ 420 ಏಕದಿನ ರನ್‌ ಗಳಿಸಿದ್ದಾರೆ. ಇವರಲ್ಲಿ ನಿಮ್ಮ ತಿಂಗಳ ಆಟಗಾರ ಯಾರು? ಎಂದು ಐಸಿಸಿ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

Story first published: Tuesday, February 2, 2021, 23:17 [IST]
Other articles published on Feb 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+